ಡಬ್ಲಿನ್: ಡಬ್ಲಿನ್‌ನಲ್ಲಿ ಭಾನುವಾರ ನಡೆದ ಐರ್ಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ತಂಡ 33 ರನ್ಗಳ ಜಯ ದಾಖಲಿಸಿ, ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ಗಿಳಿದ ಯುವ ಬ್ಯಾಟರ್ ರಿಂಕು ಸಿಂಗ್ ಅಂತಿಮ ಓವರ್ಗಳಲ್ಲಿ ಸಿಡಿಲಬ್ಬರದ ಪ್ರದರ್ಶನ ತೋರುವ ಮೂಲಕ ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅದ್ಭುತ ಎಂಟ್ರಿ ಕೊಟ್ಟಿದ್ದಾರೆ.
-
Rinku Singh ™️ Finishes - Now in Blue! 🇮🇳#IREvIND @rinkusingh235 pic.twitter.com/QMKaRcngJp
— KolkataKnightRiders (@KKRiders) August 20, 2023 " class="align-text-top noRightClick twitterSection" data="
">Rinku Singh ™️ Finishes - Now in Blue! 🇮🇳#IREvIND @rinkusingh235 pic.twitter.com/QMKaRcngJp
— KolkataKnightRiders (@KKRiders) August 20, 2023Rinku Singh ™️ Finishes - Now in Blue! 🇮🇳#IREvIND @rinkusingh235 pic.twitter.com/QMKaRcngJp
— KolkataKnightRiders (@KKRiders) August 20, 2023
ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ರಿಂಕು 2023ರ ಋತುವಿನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತಂಡದ ಕದ ತಟ್ಟಿದ್ದರು. ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ರಿಂಕು, ಮೊದಲ ಟಿ-20 ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಆದರೆ, ಪಂದ್ಯದ ಅರ್ಧದಲ್ಲೇ ಮಳೆ ಕಾಡಿದ್ದರಿಂದ ರಿಂಕು ಸಿಂಗ್ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ.
ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ಗಿಳಿದ ರಿಂಕು ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಮಿಂಚಿನ ಆಟ ಪ್ರದರ್ಶಿಸಿದರು. ಅಂತಿಮ ಓವರ್ಗಳಲ್ಲಿ ಸಾಮರ್ಥ್ಯ ತೋರಿದ ಯುವ ಎಡಗೈ ಬ್ಯಾಟರ್ ಕೇವಲ 21 ಎಸೆತಗಳಲ್ಲಿ 38 ರನ್ ಬಾರಿಸಿ ದೊಡ್ಡ ಹೊಡೆತದ ಯತ್ನಕ್ಕೆ ಮುಂದಾಗಿ ಔಟಾದರು. ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ವಿಕೆಟ್ ಪತನದ ಬಳಿಕ ಮೈದಾನಕ್ಕಿಳಿದ ರಿಂಕು, ಆರಂಭದಲ್ಲಿ ಸಮಯೋಚಿತ ಬ್ಯಾಟಿಂಗ್ ಮಾಡಿದರು.
ರಿಂಕು - ಶಿವಂ ಜೊತೆಯಾಟ: 18ನೇ ಓವರ್‌ನ ಅಂತ್ಯಕ್ಕೆ ರಿಂಕು 15 ಎಸೆತಗಳಲ್ಲಿ 15 ರನ್ ಗಳಿಸಿದ್ದರು. ಬಳಿಕ ಅಂತಿಮ ಎರಡು ಓವರ್ಗಳಲ್ಲಿ ಐರಿಸ್ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ತಾವೆದುರಿಸಿದ 16ನೇ ಎಸೆತದಿಂದ ಬಳಿಕ ಐದು ಎಸೆತಗಳಲ್ಲಿ 4, 6, 6, 1, 6 ಬಾರಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಇನ್ನೊಂದೆಡೆ ಮತ್ತೋರ್ವ ಎಡಗೈ ದಾಂಡಿಗ ಶಿವಂ ದುಬೆ (16 ಎಸೆತಗಳಲ್ಲಿ 22 ರನ್) ಕೂಡ ರಿಂಕುಗೆ ತಕ್ಕ ಸಾಥ್ ನೀಡಿದರು. ಈ ಜೋಡಿ ಕೊನೆಯ 11 ಎಸೆತಗಳಲ್ಲಿ 41 ರನ್ ದೋಚಿತು. ಅಂತಿಮವಾಗಿ ಟೀಂ ಇಂಡಿಯಾ 5 ವಿಕೆಟ್ಗೆ 185 ರನ್ಗಳ ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಕಾಣಿಕೆ ನೀಡಿದರು.
ಪಂದ್ಯಶ್ರೇಷ್ಠ ಪ್ರಶಸ್ತಿ: ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ರಿಂಕು ಸಿಂಗ್ ಪ್ಲೇಯರ್ ಆಫ್ ದಿ ಮ್ಯಾಚ್ ಗೌರವ ಪಡೆದರು. ಈ ವೇಳೆ ಮಾತನಾಡಿದ ಅವರು, ''ನನಗೆ ತುಂಬಾ ಸಂತಸವಾಗುತ್ತಿದೆ. ನಾನು ಐಪಿಎಲ್‌ನ ಪ್ರದರ್ಶನವನ್ನೇ ಇಲ್ಲಿಯೂ ಮುಂದುವರೆಸಲು ಯತ್ನಿಸಿದ್ದೇನೆ. ಮೈದಾನದಲ್ಲಿ ಬಹಳ ಆತ್ಮವಿಶ್ವಾಸದಿಂದ ಇದ್ದು, ಶಾಂತತೆ ವಹಿಸಲು ಪ್ರಯತ್ನಿಸಿದೆ. ಕಳೆದ 10 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ನನ್ನೆಲ್ಲ ಪ್ರಯತ್ನಗಳೂ ಇದೀಗ ಫಲ ನೀಡಿವೆ. ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಬಹಳ ಖುಷಿ ಆಗಿದೆ'' ಎಂದು ಹೇಳಿದರು.
ರಿಂಕು ಸಿಂಗ್ 2023ರ ಐಪಿಎಲ್ನಲ್ಲಿ ಕೋಲ್ಕತ್ತಾ ಪರ 14 ಪಂದ್ಯಗಳಿಂದ 59.25ರ ಸರಾಸರಿಯಲ್ಲಿ 474 ರನ್ ಸಿಡಿಸಿದ್ದರು. 149ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದು, 29 ಸಿಕ್ಸರ್ ಹಾಗೂ 31 ಬೌಂಡರಿ ಬಾರಿಸಿದ್ದರು. ಕೆಲ ಪಂದ್ಯಗಳ ನಿರ್ಣಾಯಕ ಘಟ್ಟದಲ್ಲಿ ಅಬ್ಬರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅದರಲ್ಲೂ ಗುಜರಾತ್ ಟೈಟಾನ್ಸ್ ವಿರುದ್ಧ ಅಂತಿಮ ಓವರ್ನಲ್ಲಿ 28 ರನ್ ಅಗತ್ಯವಿದ್ದಾಗ ಯಶ್ ದಯಾಲ್ಗೆ ರಿಂಕು 5 ಸಿಕ್ಸರ್ ಚಚ್ಚುವ ಮೂಲಕ ಜಯದ ನಗೆ ಬೀರಿದ್ದು ಸ್ಮರಣೀಯವಾದುದಾಗಿದೆ.
ಇದನ್ನೂ ಓದಿ: ಭಾರತ Vs ಐರ್ಲೆಂಡ್ 2ನೇ ಟಿ 20ಐ: ಗಾಯಕ್ವಾಡ್, ಬೌಲರ್‌ಗಳ ಅಬ್ಬರಕ್ಕೆ ಐರ್ಲೆಂಡ್ ತತ್ತರ, 33 ರನ್‌ಗಳಿಂದ ಗೆಲುವು.. ಸರಣಿ ವಶ