ಲಾಹೋರ್: ಪಾಕಿಸ್ತಾನದ ವೇಗದ ಬೌಲರ್ ಹ್ಯಾರೀಸ್ ರೌಫ್ ಪಾಕಿಸ್ತಾನ ಪ್ರೀಮಿಯರ್ ಲೀಗ್ ವೇಳೆ ತಮ್ಮ ಲಾಹೋರ್ ಕಲಂದರ್ಸ್ ತಂಡದ ಆಟಗಾರ ಕಮ್ರನ್ ಗುಲಾಮ್ ಕಪಾಳಕ್ಕೆ ಹೊಡೆದಿರುವುದಕ್ಕೆ ಪಂದ್ಯದ ರೆಫ್ರಿ ಎಚ್ಚರಿಕೆ ನೀಡಿದ್ದಾರೆ.
2022ರ ಪಿಎಸ್ಎಲ್ನಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಆಸೀಸ್ ಆಲ್‌ರೌಂಡರ್ ಬೆನ್ ಕಟಿಂಗ್ ಮತ್ತು ವೇಗಿ ಸೋಹೈಲ್ ತನ್ವೀರ್ ಪರಸ್ಪರ ಬ್ಯಾಟಿಂಗ್ ವೇಳೆ ಸತತ ಬೌಂಡರಿ ಬಾರಿಸಿ ಎದುರಾಳಿ ಬೌಲರ್ ಸೊಹೇಲ್ ಮಧ್ಯದ ಬೆರಳು ತೋರಿಸಿ ಅನುಚಿತವಾಗಿ ವರ್ತಿಸಿದ್ದರು.
ಇನ್ನು ಸತತ ಸೋಲುಗಳಿಂದ ಕಂಗೆಟ್ಟಿದ್ದ ಕರಾಚಿ ಕಿಂಗ್ಸ್ ಕೋಚ್ ವಾಸೀಮ್ ಅಕ್ರಮ್ ನಾಯಕ ಬಾಬರ್ ಅಜಮ್ ವಿರುದ್ಧ ಮೈದಾನದಲ್ಲೆ ಅಸಮಾಧಾನ ಹೊರ ಹಾಕಿದ್ದರು. ಇನ್ನು ಕ್ವೆಟ್ಟಾ ತಂಡದಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಮ್ಸ್ ಫಾಕ್ನರ್ ಒಪ್ಪಂದದ ಪ್ರಕಾರ ಹಣ ನೀಡಿಲ್ಲ ಎಂಬ ಕಾರಣಕ್ಕೆ ಟೂರ್ನಿಯನ್ನು ಮಧ್ಯದಲ್ಲೇ ತ್ಯಜಿಸಿ ತವರಿಗೆ ಮರಳಿದ್ದಾರೆ.
-
Wreck-it-Rauf gets Haris! #HBLPSL7 l #LevelHai l #LQvPZ pic.twitter.com/wwczV5GliZ
— PakistanSuperLeague (@thePSLt20) February 21, 2022 " class="align-text-top noRightClick twitterSection" data="
">Wreck-it-Rauf gets Haris! #HBLPSL7 l #LevelHai l #LQvPZ pic.twitter.com/wwczV5GliZ
— PakistanSuperLeague (@thePSLt20) February 21, 2022Wreck-it-Rauf gets Haris! #HBLPSL7 l #LevelHai l #LQvPZ pic.twitter.com/wwczV5GliZ
— PakistanSuperLeague (@thePSLt20) February 21, 2022
ಇದರ ಮಧ್ಯೆ ಸೋಮವಾರ ಕೊನೆಯ ಲೀಗ್ ಪಂದ್ಯದ ವೇಳೆ ಪೇಶಾವರ್ ಜಾಲ್ಮಿ ಮತ್ತು ಲಾಹೋರ್ ಕಲಂದರ್ ತಂಡಗಳು ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ, ರೌಫ್ ಬೌಲಿಂಗ್ನಲ್ಲಿ ಪೇಶಾವರ್ ಜಾಲ್ಮಿ ತಂಡದ ಆರಂಭಿಕ ಬ್ಯಾಟರ್ ಹಜರುತ್ತುಲ್ಲಾ ಝಾಜೈ ಅವರ ಕ್ಯಾಚ್ ಅನ್ನು ಗುಲಾಮ್ ಕೈಚೆಲ್ಲಿದ್ದರು. ಆದರೆ, ಮೂರು ಎಸೆತಗಳ ನಂತರ ಮೊಹಮ್ಮದ್ ಹ್ಯಾರೀಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಅಭಿನಂದಿಸಲು ಬಂದ ಕಮ್ರನ್ ಗುಲಾಮ್ ಕಪಾಳಕ್ಕೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
-
🫂 #HBLPSL7 l #LevelHai l #LQvPZ pic.twitter.com/hg5uCFmgac
— PakistanSuperLeague (@thePSLt20) February 21, 2022 " class="align-text-top noRightClick twitterSection" data="
">🫂 #HBLPSL7 l #LevelHai l #LQvPZ pic.twitter.com/hg5uCFmgac
— PakistanSuperLeague (@thePSLt20) February 21, 2022🫂 #HBLPSL7 l #LevelHai l #LQvPZ pic.twitter.com/hg5uCFmgac
— PakistanSuperLeague (@thePSLt20) February 21, 2022
ಈ ವಿಡಿಯೋ ಸ್ವತಃ ಪಾಕಿಸ್ತಾನ ಪ್ರೀಮಿಯರ್ ಲೀಗ್ ಅಧಿಕೃತ ಟ್ವಿಟರ್ನಲ್ಲಿ ಪೋಸ್ಟ್ ಆಗಿದ್ದರಿಂದ ಸಾಮಾಜಿಕ ಜಾಲಾತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ರೌಫ್ ನಡೆಯನ್ನು ಖಂಡಿಸಿ ಮೊದಲ ಆಟಗಾರರನ್ನು ಗೌರವಿಸುವುದನ್ನು ಕಲಿಯಬೇಕೆಂದು ರೌಫ್ಗೆ ಬುದ್ದಿ ಹೇಳುತ್ತಿದ್ದಾರೆ.
ಪಂದ್ಯದ ವೇಳೆ ಈ ರೀತಿ ದುರ್ವರ್ತನೆ ತೋರಿದ್ದಕ್ಕೆ ಮ್ಯಾಚ್ ರೆಫ್ರಿಅಲಿ ನಕ್ವಿ ರೌಫ್ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಇದು ಹೊಡೆದಿದ್ದಲ್ಲ, ಸ್ನೇಹಪರದಿಂದ ತಳ್ಳಿದ್ದು ಎಂದು ಸಮರ್ಥನೆ ನೀಡಿದ್ದಕ್ಕೆ ಯಾವುದೇ ದಂಡ ವಿಧಿಸಿಲ್ಲ ಎಂದು ತಿಳಿದು ಬಂದಿದೆ. ಇನ್ನು ಗುಲಾಮ್ ಪಂದ್ಯದ ವೇಳೆ ಡೈರೆಕ್ಟ್ ಹಿಟ್ ಮೂಲಕ ವಹಾಬ್ ರಿಯಾಜ್ರನ್ನು ರನೌಟ್ ಮಾಡಿದ ವೇಳೆ ರೌಫ್ ತಬ್ಬಿಕೊಂಡು ಅಭಿನಂದಿಸಿ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸಿದ್ದರು.