ETV Bharat / sports

ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ವಿಂಡೀಸ್ ಸ್ಫೋಟಕ ಬ್ಯಾಟ್ಸ್​ಮನ್ ರಾಜಸ್ಥಾನಕ್ಕೆ ಸೇರ್ಪಡೆ​ - ರಾಜಸ್ಥಾನ್ ರಾಯಲ್ಸ್

ಥಾಮಸ್​ ಈ ಮೊದಲೇ ರಾಜಸ್ಥಾನ್​ ರಾಯಲ್ಸ್ ತಂಡದಲ್ಲಿ ಆಡಿದ್ದರು. ಅವರು ರಾಯಲ್ಸ್ ಪರ 4 ಪಂದ್ಯಗಳನ್ನಾಡಿದ್ದು 5 ವಿಕೆಟ್ ಪಡೆದಿದ್ದರು. ಲೂಯಿಸ್​ ಮುಂಬೈ ಇಂಡಿಯನ್ಸ್ ಪರ 16 ಪಂದ್ಯಗಳನ್ನಾಡಿದ್ದು, 430 ರನ್​ಗಳಿಸಿದ್ದಾರೆ.

Rajasthan Royals
ರಾಜಸ್ಥಾನ್ ರಾಯಲ್ಸ್​ ಸೇರಿದ ಎವಿನ್ ಲೂಯಿಸ್​
author img

By

Published : Sep 1, 2021, 12:30 PM IST

ಮುಂಬೈ: 2020ರ ಐಪಿಎಲ್ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ವೆಸ್ಟ್​ ಇಂಡೀಸ್​ನ ಸ್ಫೋಟಕ ಬ್ಯಾಟ್ಸ್​ಮನ್ ಎವಿನ್ ಲೂಯಿಸ್​ ಮತ್ತು ಒಶೇನ್​ ಥಾಮಸ್​ ಅವರು ಇಂಗ್ಲೆಂಡ್​ನ ಜೋಸ್​ ಬಟ್ಲರ್ ಮತ್ತು ಬೆನ್​ ಸ್ಟೋಕ್ಸ್​ರ ಬದಲಿ ಆಟಗಾರರಾಗಿ ರಾಜಸ್ಥಾನ್​ ರಾಯಲ್ಸ್​ ಸೇರಿಕೊಂಡಿದ್ದಾರೆ.

ಬೆನ್ ಸ್ಟೋಕ್ಸ್​ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಅನಿರ್ಧಿಷ್ಟಾವಧಿ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಜೋಸ್ ಬಟ್ಲರ್​ ತಮ್ಮ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡುತ್ತಿರುವುದರಿಂದ ಅವರೂ ಕೂಡ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಈ ಇಬ್ಬರು ಆಟಗಾರರ ಸ್ಥಾನಕ್ಕೆ ವೆಸ್ಟ್ ಇಂಡೀಸ್​ ತಂಡದ ಆರಂಭಿಕ ಬ್ಯಾಟ್ಸ್​ಮನ್ ಎವಿನ್ ಲೂಯಿಸ್ ಮತ್ತು ವೇಗಿ ಒಶೇನ್ ಥಾಮಸ್​ ರಾಯಲ್ಸ್ ಬಳಗ ಸೇರಿಕೊಂಡಿದ್ದಾರೆ.

ಥಾಮಸ್​ ಈ ಮೊದಲೇ ರಾಜಸ್ಥಾನ್​ ರಾಯಲ್ಸ್ ತಂಡದಲ್ಲಿ ಆಡಿದ್ದರು. ಅವರು ರಾಯಲ್ಸ್ ಪರ 4 ಪಂದ್ಯಗಳನ್ನಾಡಿದ್ದು 5 ವಿಕೆಟ್ ಪಡೆದಿದ್ದರು. ಲೂಯಿಸ್​ ಮುಂಬೈ ಇಂಡಿಯನ್ಸ್ ಪರ 16 ಪಂದ್ಯಗಳನ್ನಾಡಿದ್ದು 430 ರನ್​ಗಳಿಸಿದ್ದಾರೆ.

ರಾಯಲ್ಸ್ ಈಗಾಗಲೇ ವೇಗು ಆ್ಯಂಡ್ರ್ಯೂ ಟೈ ಸ್ಥಾನಕ್ಕೆ ವಿಶ್ವ ಟಿ20ಯಲ್ಲಿ ನಂಬರ್ 1 ಸ್ಥಾನದಲ್ಲಿರುವ ತಬ್ರೈಜ್ ಶಂಸಿ ಮತ್ತು ಜೋಫ್ರಾ ಆರ್ಚರ್​ ಬದಲಿಗೆ ನ್ಯೂಜಿಲ್ಯಾಂಡ್​ ತಂಡದ ವಿಕೆಟ್ ಕೀಪರ್​ ಗ್ಲೇನ್ ಫಿಲಿಪ್ಸ್​ ಅವರನ್ನು 2021ರ 2ನೇ ಹಂತದ ಐಪಿಎಲ್​ಗೆ ಬದಲೀ ಆಟಗಾರರಾಗಿ ಘೋಷಿಸಿದೆ.

ರಾಜಸ್ಥಾನ್​ ರಾಯಲ್ಸ್​ 7 ಪಂದ್ಯಗಳನ್ನಾಡಿದ್ದು 3 ಗೆಲುವು ಮತ್ತು 4 ಸೋಲುಗಳಿಂದ 5ನೇ ಸ್ಥಾನದಲ್ಲಿದೆ.

ಇದನ್ನು ಓದಿ:2 ಹೊಸ Ipl ತಂಡಗಳಿಗೆ ಬಿಡ್ಡಿಂಗ್​: 2000 ಕೋಟಿ.ರೂ ಮೂಲಬೆಲೆ ನಿಗದಿ, 5000 ಕೋಟಿ ಆದಾಯ ನಿರೀಕ್ಷೆಯಲ್ಲಿ Bcci

ETV Bharat Logo

Copyright © 2025 Ushodaya Enterprises Pvt. Ltd., All Rights Reserved.