ಅಹ್ಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ 6 ಬೌಂಡರಿ(ಫೋರ್) ಬಾರಿಸಿದ ಎರಡನೇ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. 2012 ರಲ್ಲಿ ಅಜಿಂಕ್ಯ ರಹಾನೆ ಆರ್ಸಿಬಿ ಬೌಲರ್ ಎಸ.ಅರವಿಂದ್ ಅವರಿಗೆ ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿದ್ದರು.
ಕೆಕೆಆರ್ ವಿರುದ್ಧ ಅಹ್ಮದಾಬಾದ್ನಲ್ಲಿ ನಡೆಯುತ್ತಿರುವ ಐಪಿಎಲ್ನ 25 ನೇ ಪಂದ್ಯದಲ್ಲಿ ಪೃಥ್ವಿ ಶಾ ಡೆಲ್ಲಿ ಇನ್ನಿಂಗ್ಸ್ನ ಮೊದಲ ಓವರ್ನಲ್ಲೀ ಈ ಸಾಧನೆ ಮಾಡಿದ್ದಾರೆ,
-
Wd, 4, 4, 4, 4, 4, 4@PrithviShaw 24 (6) has set the stage on 🔥
— IndianPremierLeague (@IPL) April 29, 2021 " class="align-text-top noRightClick twitterSection" data="
Six boundaries in the 1st over bowled by Mavi.😳https://t.co/iEiKUVwBoy #DCvKKR #VIVOIPL pic.twitter.com/5ISeFsKWA0
">Wd, 4, 4, 4, 4, 4, 4@PrithviShaw 24 (6) has set the stage on 🔥
— IndianPremierLeague (@IPL) April 29, 2021
Six boundaries in the 1st over bowled by Mavi.😳https://t.co/iEiKUVwBoy #DCvKKR #VIVOIPL pic.twitter.com/5ISeFsKWA0Wd, 4, 4, 4, 4, 4, 4@PrithviShaw 24 (6) has set the stage on 🔥
— IndianPremierLeague (@IPL) April 29, 2021
Six boundaries in the 1st over bowled by Mavi.😳https://t.co/iEiKUVwBoy #DCvKKR #VIVOIPL pic.twitter.com/5ISeFsKWA0
ಕಳೆದ ಪಂದ್ಯದಲ್ಲಿ 4 ಓವರ್ಗಳಲ್ಲಿ ಕೇವಲ 15 ರನ್ ನೀಡಿದ್ದ ತಮ್ಮ ನಾಯಕತ್ವದಲ್ಲಿ ಆಡಿದ್ದ ವೇಗಿ ಶಿವಂ ಮಾವಿ ಓವರ್‌ನಲ್ಲಿ ಶಾ 6ಕ್ಕೆ6 ಫೋರ್ ಬಾರಿಸಿದರು. ಒಂದು ವೈಡ್ ಸೇರಿದಂತೆ ಈ ಓವರ್‌ನಲ್ಲಿ ಒಟ್ಟು 25 ರನ್ ಬಂದಿತು.
ಮೊದಲ ಓವರ್‌ನಲ್ಲಿ ಅಧಿಕ ರನ್ ದಾಖಲೆ
ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿದ ದಾಖಲೆ ಜೊತೆಗೆ ಆರಂಭಿಕ ಓವರ್‌ನಲ್ಲಿ ಗರಿಷ್ಠ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಶಾ ತಮ್ಮ ಹೆಸರಿಗೆ ಬರೆದುಕೊಂಡರು. ಶಾ 25 ರನ್ ಬಾರಿಸಿದರೆ, ನಮನ್ ಓಜಾ 2009ರಲ್ಲಿ ಮತ್ತು 2018ರಲ್ಲಿ ನರೈನ್ 21 ರನ್ ಬಾರಿಸಿದ್ದದ್ದು ಈವರೆಗಿನ ದಾಖಲೆಯಾಗಿತ್ತು. ಗಿಲ್ಕ್ರಿಸ್ಟ್ ಒಮ್ಮೆ ಮತ್ತು , ಕ್ರಿಸ್ ಗೇಲ್ ಎರಡು ಬಾರಿ ತಲಾ 20 ರನ್ ಬಾರಿಸಿದ್ದಾರೆ.
ಇದನ್ನು ಓದಿ: 'ಮಿಷನ್ ಆಕ್ಸಿಜನ್': ಕೋವಿಡ್ ವಿರುದ್ಧ ಹೋರಾಟಕ್ಕೆ 1 ಕೋಟಿ ರೂ.ದೇಣಿಗೆ ನೀಡಿದ ಸಚಿನ್