ಮೆಲ್ಬೋರ್ನ್: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವಕ್ಕೆ ಟಿಮ್ ಪೇನ್ ರಾಜೀನಾಮೆ ನೀಡಿದ ಒಂದು ವಾರದ ಬಳಿಕ ಆಲ್ರೌಂಡರ್ ಪ್ಯಾಟ್ ಕಮಿನ್ಸ್ ಅವರನ್ನು ನೂತನ ನಾಯಕರನ್ನಾಗಿ ನೇಮಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರು ಟೆಸ್ಟ್ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ಕಮಿನ್ಸ್ ಆಸ್ಟ್ರೇಲಿಯಾ ಪುರುಷರ ಟೆಸ್ಟ್ ಕ್ರಿಕೆಟ್ ತಂಡದ 47ನೇ ನಾಯಕರಾಗಿದ್ದಾರೆ. ಅಲ್ಲದೇ ಅವರು ಆಸೀಸ್ ಟೆಸ್ಟ್ ತಂಡದ ಪೂರ್ಣ ಸಮಯದ ನಾಯಕರಾಗಿರುವ ಮೊದಲ ವೇಗದ ಬೌಲರ್ ಆಗಿದ್ದಾರೆ. 2017ರಲ್ಲಿ ಲೈಂಗಿಕವಾಗಿ ಕೆರಳಿಸುವ ಸಂದೇಶ ಕಳುಹಿಸಿದ್ದ ಘಟನೆಯ ಬಹಿರಂಗವಾದ ನಂತರ ಟಿಮ್ ಪೇನ್ ಕಳೆದ ವಾರ ನಾಯಕತ್ವ ಹುದ್ದೆಗೆ ರಾಜೀನಾಮೆ ನೀಡಿದ್ದರು.
-
The 47th captain of the Australian men's Test cricket team! @patcummins30 🇦🇺 pic.twitter.com/bM4QefTATt
— Cricket Australia (@CricketAus) November 26, 2021 " class="align-text-top noRightClick twitterSection" data="
">The 47th captain of the Australian men's Test cricket team! @patcummins30 🇦🇺 pic.twitter.com/bM4QefTATt
— Cricket Australia (@CricketAus) November 26, 2021The 47th captain of the Australian men's Test cricket team! @patcummins30 🇦🇺 pic.twitter.com/bM4QefTATt
— Cricket Australia (@CricketAus) November 26, 2021
ಆ್ಯಶಸ್ ಸರಣಿಯಲ್ಲಿ ನಾಯಕನಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ಬಗ್ಗೆ ನನಗೆ ಗೌರವವಿದೆ ಎಂದು ನಂ.1 ಟೆಸ್ಟ್ ಬೌಲರ್ ಕೂಡ ಆಗಿರುವ ಪ್ಯಾಟ್ ಕಮಿನ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಟಿಮ್ ಪೇನ್ ಅವರು ನಾಯಕನಾಗಿ ತಂಡಕ್ಕೆ ನೀಡಿದ ಕೊಡುಗೆಯನ್ನು ಮುಂದುವರೆಸಲು ಪ್ರಯತ್ನಿಸುತ್ತೇನೆ. ಸ್ಟೀವ್, ನಾನು ಇತರ ಹಿರಿಯ ಆಟಗಾರರು ಮತ್ತು ಯುವ ಪ್ರತಿಭೆಗಳೊಂದಿಗೆ ಪ್ರಬಲ ತಂಡವಾಗಿದ್ದೇವೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 8ರಿಂದ ಗಬ್ಬಾದಲ್ಲಿ ನಡೆಯಲಿದೆ.
ಇದನ್ನೂ ಓದಿ: ಆ್ಯಶಸ್ ಟೆಸ್ಟ್ ಸರಣಿಗೂ ಮುನ್ನ ಆಸೀಸ್ಗೆ ಮತ್ತೊಂದು ಶಾಕ್.. ಕ್ರಿಕೆಟ್ನಿಂದ ದೂರ ಸರಿದ ಟಿಮ್ ಪೇನ್