ಇಸ್ಲಾಮಾಬಾದ್ (ಪಾಕಿಸ್ತಾನ) : ಬರೋಬ್ಬರಿ 24 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಪಾಕ್ ಪ್ರವಾಸ ಕೈಗೊಳ್ಳಲಿದೆ. ಮೂರು ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ.
ಇದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಇಂದು ಮಹತ್ವದ ಮಾಹಿತಿ ಹೊರ ಹಾಕಿದೆ. ಮಾರ್ಚ್ 4ರಿಂದ ಉಭಯ ತಂಡಗಳ ನಡುವಿನ ಕ್ರಿಕೆಟ್ ಟೂರ್ನಿ ಆರಂಭಗೊಳ್ಳಲಿದೆ.
ಈ ಹಿಂದೆ 1998ರಲ್ಲಿ ಆಸ್ಟ್ರೇಲಿಯಾ ತಂಡ ಕೊನೆಯದಾಗಿ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು. ಇದಾದ ಬಳಿಕ 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆದ ಬಳಿಕ ಅನೇಕ ವರ್ಷಗಳ ಕಾಲ ಯಾವುದೇ ತಂಡಗಳು ಇಲ್ಲಿಗೆ ಪ್ರವಾಸ ಕೈಗೊಂಡಿರಲಿಲ್ಲ.
ಆದರೆ, ಕಳೆದ ಕೆಲ ವರ್ಷಗಳಿಂದ ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಜಿಂಬಾಬ್ವೆ ಸೇರಿದಂತೆ ಅನೇಕ ದೇಶಗಳು ಪಾಕಿಸ್ತಾನಕ್ಕೆ ತೆರಳಿ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗಿಯಾಗಿವೆ.
-
JUST IN: Australia are going to Pakistan! https://t.co/3Av5yNpzc0
— cricket.com.au (@cricketcomau) February 4, 2022 " class="align-text-top noRightClick twitterSection" data="
">JUST IN: Australia are going to Pakistan! https://t.co/3Av5yNpzc0
— cricket.com.au (@cricketcomau) February 4, 2022JUST IN: Australia are going to Pakistan! https://t.co/3Av5yNpzc0
— cricket.com.au (@cricketcomau) February 4, 2022
ಆಸ್ಟ್ರೇಲಿಯಾ-ಪಾಕ್ ತಂಡಗಳ ನಡುವೆ ರಾವಲ್ಪಿಂಡಿ, ಕರಾಚಿ ಮತ್ತು ಲಾಹೋರ್ನಲ್ಲಿ ಟೆಸ್ಟ್ ಪಂದ್ಯಗಳು ನಡೆಯಲಿವೆ. ಏಪ್ರಿಲ್ 5ರಿಂದ ಮೂರು ಏಕದಿನ ಪಂದ್ಯಗಳು ತದನಂತರ ಮೂರು ಟಿ20 ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ.
ಇದನ್ನೂ ಓದಿರಿ: ಪಾಕ್ ಬೌಲರ್ನ ನಿಯಮಬಾಹಿರ ಬೌಲಿಂಗ್ ಶೈಲಿ: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ಗೆ ನಿಷೇಧ
ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನದ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ಭದ್ರತಾ ವೈಫಲ್ಯದ ಕಾರಣ ನೀಡಿ, ಅಲ್ಲಿಂದ ದಿಢೀರ್ ಆಗಿ ವಾಪಸ್ ಆಗಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಕೂಡ ತನ್ನ ಪ್ರವಾಸ ಕೈಬಿಟ್ಟಿತ್ತು. ಇದೀಗ ಆಸ್ಟ್ರೇಲಿಯಾ ಅಲ್ಲಿಗೆ ತೆರಳಲು ಮುಂದಾಗಿದೆ.
ಟೂರ್ನಾಮೆಂಟ್ ವೇಳಾಪಟ್ಟಿ ಇಂತಿದೆ..
- ಮಾರ್ಚ್ 4-8 : 1ನೇ ಟೆಸ್ಟ್, ರಾವಲ್ಪಿಂಡಿ
- ಮಾರ್ಚ್ 12-16 : 2ನೇ ಟೆಸ್ಟ್, ಕರಾಚಿ
- ಮಾರ್ಚ್ 21-25 : 3ನೇ ಟೆಸ್ಟ್, ಲಾಹೋರ್
- ಮಾರ್ಚ್ 29 : 1ನೇ ODI, ರಾವಲ್ಪಿಂಡಿ
- ಮಾರ್ಚ್ 31 : 2ನೇ ODI, ರಾವಲ್ಪಿಂಡಿ
- ಏಪ್ರಿಲ್ 2: 3ನೇ ODI, ರಾವಲ್ಪಿಂಡಿ
- ಏಪ್ರಿಲ್ 5: T20I, ರಾವಲ್ಪಿಂಡಿ