ETV Bharat / sports

ಇಂದು ಹೈ ವೋಲ್ಟೇಜ್​ ಮ್ಯಾಚ್​.. ಪಾಕಿಸ್ತಾನದ ಬೌಲಿಂಗ್​ ದಾಳಿಯನ್ನು ಅನುಭವದಡಿಯಲ್ಲಿ ಎದುರಿಸುತ್ತೇವೆ: ರೋಹಿತ್​ ಶರ್ಮಾ - ETV Bharath Kannada news

ಏಷ್ಯಾಕಪ್‌ನಲ್ಲಿ ಶನಿವಾರ ನಡೆಯಲಿರುವ ಪಾಕಿಸ್ತಾನ-ಭಾರತ ತಂಡಗಳ ನಡುವಿನ ಆರಂಭಿಕ ಕ್ರಿಕೆಟ್‌ ಪಂದ್ಯಕ್ಕೂ ಮುನ್ನ, ನಾಯಕ ರೋಹಿತ್​ ಶರ್ಮಾ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿ, ಭಾರತ ಈ ವರ್ಷದ ಏಷ್ಯಾಕಪ್​ನ ಫೈನಲ್ ಆಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

Etv Bharat
Etv Bharat
author img

By ETV Bharat Karnataka Team

Published : Sep 1, 2023, 7:51 PM IST

Updated : Sep 2, 2023, 8:35 AM IST

ಪಲ್ಲೆಕೆಲೆ (ಶ್ರೀಲಂಕಾ): ನಾವು ನಮ್ಮ ಅನುಭವದಡಿಯಲ್ಲಿ ಪಾಕಿಸ್ತಾನದ ಅತ್ಯುತ್ತಮ ಬೌಲರ್‌ಗಳಾದ ಶಾಹೀನ್ ಅಫ್ರಿದಿ, ನಸೀಮ್ ಶಾ ಹಾಗು ಹ್ಯಾರಿಸ್ ರೌಫ್ ಅವರನ್ನು ದಿಟ್ಟವಾಗಿ ಎದುರಿಸುತ್ತೇವೆ ಎಂದು ಟೀಂ​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದರು.

"ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ನಮ್ಮ ತಂಡ ಉತ್ತಮ ಆರಂಭ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಕೆಲಸ. ನಾನು ದೀರ್ಘಕಾಲ ಕ್ರೀಸ್​ನಲ್ಲಿ ಉಳಿಯುವ ನಂಬಿಕೆ ಇದೆ. 16 ವರ್ಷಗಳ ಎಲ್ಲಾ ಅನುಭವವನ್ನು ಬಳಸಲು ಪ್ರಯತ್ನಿಸುತ್ತೇನೆ. ಆಟದಲ್ಲಿ ಹೆಚ್ಚು ರಿಸ್ಕ್​ ತೆಗೆದುಕೊಳ್ಳುವ ಕೆಲಸ ಮಾಡುತ್ತೇನೆ" ಎಂದರು.

"ಪಾಕಿಸ್ತಾನ ಇತ್ತೀಚೆಗೆ ಏಕದಿನ ಮತ್ತು ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಲು ಶ್ರಮಿಸಿದೆ. ನಾಳೆ ಅವರ ವಿರುದ್ಧ ಆಡುತ್ತಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ. ವಿಶ್ವಕಪ್​ಗೂ ಮುನ್ನ ನಾವು ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಇದಕ್ಕೆ ಏಷ್ಯಾಕಪ್​ ಒಂದು ವೇದಿಕೆ. ಆದರೆ ಇಲ್ಲಿ ಪ್ರಯೋಗ ಮಾಡುವ ಅವಕಾಶವಿಲ್ಲ. ನಮ್ಮ ಆಟವನ್ನು ಶ್ರದ್ಧೆಯಿಂದ ಆಡಬೇಕು" ಎಂದು ತಿಳಿಸಿದರು.

"ನಮ್ಮೆಲ್ಲಾ ಆರು ಬೌಲರ್‌ಗಳು ನಿಸ್ಸಂದೇಹವಾಗಿ ಶ್ರೇಷ್ಠ ಬೌಲರ್‌ಗಳೇ. ಅದನ್ನವರು ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಬುಮ್ರಾ, ಶಮಿ ಮತ್ತು ಸಿರಾಜ್ ಉತ್ತಮ ಲಯದಲ್ಲಿದ್ದಾರೆ. ವಿಶೇಷವಾಗಿ ಬುಮ್ರಾ ಗಾಯದಿಂದ ಕಮ್​ಬ್ಯಾಕ್​ ಮಾಡಿದ್ದಾರೆ. ಐರ್ಲೆಂಡ್​ ವಿರುದ್ಧ ತಂಡಕ್ಕೆ ಮರಳಿರುವ ಅವರು ಉತ್ತಮವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ನಾವು ಹೊಂದಿದ್ದ ಸಣ್ಣಪುಟ್ಟ ಶಿಬಿರದಲ್ಲಿಯೂ ಉತ್ತಮವಾಗಿ ಕಾಣುತ್ತಿದ್ದರು. ಹೊಸ ಉತ್ಸಾಹದಲ್ಲಿದ್ದಾರೆ, ಇದು ನಮಗೆ ಒಳ್ಳೆಯ ಸಂಕೇತ. ಇನ್ನು ಕಳೆದ ಕೆಲವು ವರ್ಷಗಳಿಂದ ಸಿರಾಜ್ ಮತ್ತು ಶಮಿ ಉತ್ತಮವಾಗಿಯೇ ಬೌಲಿಂಗ್ ನಿಭಾಯಿಸುತ್ತಿದ್ದಾರೆ. ಆದ್ದರಿಂದ ಅವರೆಲ್ಲರೂ ಮುಂದಿನ ಎರಡು ತಿಂಗಳು ತಂಡಕ್ಕೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿದ್ದಾರೆ" ಎಂದು ರೋಹಿತ್ ಬೌಲಿಂಗ್​ ಕ್ಷೇತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದರು.

  • Rohit Sharma said - "I have played with a high risk approach Cricket in last couple of years. I have to balance my game, play aggressive and play long and set the platform for my team and I always see to put the my team in good position" pic.twitter.com/xrRJwCoE9F

    — CricketMAN2 (@ImTanujSingh) September 1, 2023 " class="align-text-top noRightClick twitterSection" data=" ">

ವಿಶ್ವಕಪ್​ ಹಿನ್ನೆಲೆಯಲ್ಲಿ ಏಷ್ಯಾಕಪ್​ ಅನ್ನು ಫಿಟ್​ನೆಸ್​ ಪರೀಕ್ಷೆಯ ವೇದಿಕೆಯ ರೀತಿ ನೋಡುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. "ಯಾವುದೇ ರೀತಿಯಿಂದಲೂ ಈ ಪಂದ್ಯಾವಳಿಯು ಫಿಟ್ನೆಸ್ ಪರೀಕ್ಷೆಯಲ್ಲ. ಏಷ್ಯಾ ಕಪ್ ಅನ್ನು ಏಷ್ಯಾದ ಆರು ಅಗ್ರ ತಂಡಗಳ ನಡುವೆ ಆಡಿಸಲಾಗುತ್ತದೆ. ಈ ಕಪ್​ಗೆ ಶ್ರೀಮಂತ ಇತಿಹಾಸವಿದೆ. ಇದು ಬಹಳ ದೊಡ್ಡ ಟೂರ್ನಿ" ಎಂದು ರೋಹಿತ್ ಶರ್ಮಾ ಹೇಳಿದರು.

ಇದನ್ನೂ ಓದಿ: ಏಷ್ಯಾಕಪ್​: ಭಾರತ-ಪಾಕ್‌ ಹೈವೋಲ್ಟೇಜ್​ ಮ್ಯಾಚ್​ಗೆ ಮಳೆ ಆತಂಕ, ಪಂದ್ಯ ರದ್ದಾದರೆ ಏನಾಗುತ್ತೆ?

Last Updated : Sep 2, 2023, 8:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.