ಹೈದರಾಬಾದ್: ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಸಪ್ಟೆಂಬರ್ 29 ರಿಂದ ವಿಶ್ವಕಪ್ನ ಅಭ್ಯಾಸ ಪಂದ್ಯಗಳು ಆರಂಭವಾಗಲಿದೆ. ಅಕ್ಟೋಬರ್ 5ಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮುಖಾಮುಖಿಯ ಮೂಲಕ ವಿಶ್ವಕಪ್‌ಗೆ ಅಧಿಕೃತ ಚಾಲನೆ ದೊರೆಯಲಿದೆ. ಮಾರ್ಕ್ಯೂ ಈವೆಂಟ್‌ಗೆ ತಯಾರಿ ನಡೆಸಲು ಭಾರತಕ್ಕೆ ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ ತಂಡಗಳು ಭಾರತಕ್ಕೆ ಬಂದಿಳಿದಿವೆ.
ಆಸ್ಟ್ರೇಲಿಯಾ ಭಾರತದ ಜೊತೆಗೆ ಏಕದಿನ ಸರಣಿಯನ್ನು ಆಡಿದರೆ, ನೆದರ್ಲ್ಯಾಂಡ್ ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಿದೆ. ಅಚ್ಚರಿಯ ವಿಷಯ ಎಂದರೆ ಇಲ್ಲಿನ ಸ್ಪಿನ್ ಪಿಚ್ಗಳಲ್ಲಿ ಬ್ಯಾಟಿಂಗ್ ಮಾಡಲು ಕಲಿಯಲು ಇಲ್ಲಿನ ನೆಟ್ಸ್ ಬೌಲರ್ಗಳನ್ನು ತಂಡದ ಬೌಲಿಂಗ್ಗೆ ಆಯ್ಕೆ ಮಾಡಿಕೊಂಡಿದೆ. ನೆದರ್ಲೆಂಡ್ ಬೆಂಗಳೂರಿನ ಆಲೂರಿನ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ. ಆದರೆ, ಆಲೂರಿನಲ್ಲಿ ಅಭ್ಯಾಸ ಆರಂಭಿಸಿರುವ ನೆದರ್ಲೆಂಡ್ ತಂಡವು ಫುಡ್ ಡೆಲಿವರಿ ಬಾಯ್ ಒಬ್ಬರನ್ನು ನೆಟ್ ಬೌಲರ್ ಆಗಿ ನೇಮಿಸಿದೆ. ಭಾರತಕ್ಕೆ ತೆರಳುವ ಮುನ್ನ ನೆದರ್ಲ್ಯಾಂಡ್ ನೆಟ್ಸ್ನಲ್ಲಿ ಬೌಲಿಂಗ್ನಲ್ಲಿ ಮಾಡಲು ಉತ್ತಮ ಸ್ಪಿನ್ನರ್ಗಳು ಬೇಕು ಎಂದು ಜಾಹೀರು ಕೊಟ್ಟಿತ್ತು. ಅಲ್ಲದೇ ಭಾರತದ ಬೌಲರ್ಗಳೇ ಆಗಬೇಕು ಎಂದು ಷರತ್ತನ್ನು ವಿಧಿಸಿತ್ತು.
-
Our first training session in India for the #CWC23 began with a small induction ceremony for our four new net bowlers from different parts of India. 🙌 pic.twitter.com/ug0gHb73tn
— Cricket🏏Netherlands (@KNCBcricket) September 20, 2023 " class="align-text-top noRightClick twitterSection" data="
">Our first training session in India for the #CWC23 began with a small induction ceremony for our four new net bowlers from different parts of India. 🙌 pic.twitter.com/ug0gHb73tn
— Cricket🏏Netherlands (@KNCBcricket) September 20, 2023Our first training session in India for the #CWC23 began with a small induction ceremony for our four new net bowlers from different parts of India. 🙌 pic.twitter.com/ug0gHb73tn
— Cricket🏏Netherlands (@KNCBcricket) September 20, 2023
ಈಗ ನೆದರ್ಲೆಂಡ್ ಫುಡ್ ಡೆಲಿವರಿ ಬಾಯ್ ಒಬ್ಬರನ್ನು ನೆಟ್ ಬೌಲಿಂಗ್ಗಾಗಿ ನೇಮಕ ಮಾಡಿಕೊಂಡಿದೆ. ಮುಂಬರುವ ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳನ್ನು ಎದುರಿಸಲು ಡಚ್ ಬ್ಯಾಟರ್‌ಗಳಿಗೆ ಸಹಾಯ ಮಾಡಲು ನೆಟ್ ಬೌಲರ್ ಆಗಿ ಆಯ್ಕೆಯಾದ ಲೋಕೇಶ್ ಅವರ ಜೀವನ 48 ಗಂಟೆಗಳಲ್ಲಿ ತಲೆಕೆಳಗಾಗಿದೆ. ಬಿಸಿಲು ಮಳೆ ಎನ್ನದೇ ಆಹಾರಗಳನ್ನು ಮನೆ ಮನೆ ಕೊಡುತ್ತಿದ್ದ ಹುಡುಗ ಈಗ ಅಂತಾರಾಷ್ಟ್ರೀಯ ತಂಡದ ನೆಟ್ ಬೌಲರ್ ಆಗಿದ್ದಾರೆ.
ನೆದರ್ಲ್ಯಾಂಡ್ ಜಾಹೀರಾತು ಕಂಡ ಲೋಕೇಶ್ ಆಲೂರು ಮೈದಾನಕ್ಕೆ ಹಾಜರಾಗಿದ್ದರು. 2018 ರಿಂದ ಆಹಾರ ವಿತರಣಾ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಲೋಕೇಶ್ ಅವರು ಪರೀಕ್ಷೆಗಳಲ್ಲಿ ಪಾಸ್ ಆದ ನಂತರ ನೆಟ್ ಬೌಲರ್ ಆಗಿ ತಂಡವನ್ನು ಸೇರಿಕೊಂಡಿದ್ದಾರೆ. ಸುಮಾರು 10,000 ಅಭ್ಯರ್ಥಿಗಳಿಂದ ನೆದರ್‌ಲ್ಯಾಂಡ್ಸ್ ತಂಡದ ಮ್ಯಾನೇಜ್‌ಮೆಂಟ್ ಆಯ್ಕೆ ಮಾಡಿದ ನಾಲ್ಕು ನೆಟ್ ಬೌಲರ್‌ಗಳಲ್ಲಿ ಲೋಕೇಶ್ ಒಬ್ಬರಾಗಿದ್ದಾರೆ.
-
𝐑𝐞𝐚𝐝𝐲 𝐭𝐨 𝐑𝐨𝐜𝐤 𝐢𝐧 𝐎𝐫𝐚𝐧𝐣𝐞!🎸
— Cricket🏏Netherlands (@KNCBcricket) September 22, 2023 " class="align-text-top noRightClick twitterSection" data="
🇳🇱 fans, time to show some love to our #CWC23 kit! @graynics pic.twitter.com/OHJadR3JMO
">𝐑𝐞𝐚𝐝𝐲 𝐭𝐨 𝐑𝐨𝐜𝐤 𝐢𝐧 𝐎𝐫𝐚𝐧𝐣𝐞!🎸
— Cricket🏏Netherlands (@KNCBcricket) September 22, 2023
🇳🇱 fans, time to show some love to our #CWC23 kit! @graynics pic.twitter.com/OHJadR3JMO𝐑𝐞𝐚𝐝𝐲 𝐭𝐨 𝐑𝐨𝐜𝐤 𝐢𝐧 𝐎𝐫𝐚𝐧𝐣𝐞!🎸
— Cricket🏏Netherlands (@KNCBcricket) September 22, 2023
🇳🇱 fans, time to show some love to our #CWC23 kit! @graynics pic.twitter.com/OHJadR3JMO
ಚೆನ್ನೈ ಮೂಲದವರಾದ ಲೋಕೇಶ್ ಸ್ವಿಗ್ಗಿಯಲ್ಲಿ ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. 29 ವರ್ಷದ ಲೋಕೇಶ್ ಕುಮಾರ್ ಎಡಗೈ ವೇಗಿ ಮತ್ತು ಮಣಿಕಟ್ಟು ಸ್ಪಿನ್ನರ್ ಆಗಿದ್ದಾರೆ. ನೆದರ್ಲೆಂಡ್ ಕ್ರಿಕೆಟ್ ತಂಡವು ನಾಲ್ಕು ವಿಭಾಗಗಳಲ್ಲಿ ತಲಾ ಒಬ್ಬ ಬೌಲರ್ ಅನ್ನು ಆಯ್ಕೆ ಮಾಡಲು ಬಯಸಿದೆ. ಅವರು ಎಡಗೈ ಸ್ಪಿನ್ನರ್, ಬಲಗೈ ಸ್ಪಿನ್ನರ್, ಚೀನಾಮನ್ ಮತ್ತು ಮಿಸ್ಟರಿ ಸ್ಪಿನ್ನರ್ಗಾಗಿ ಹುಡುಕುತ್ತಿದ್ದರು. 29ರ ಹರೆಯದ ಅವರು ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವದಿಂದ ಕಲಿಯಲು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್ನಲ್ಲಿ ನಾಳೆ: ಬಾಂಗ್ಲಾ ಮತ್ತು ಭಾರತೀಯ ವನಿತೆಯರ ಸೆಮಿಸ್ ಕಾದಾಟ.. ಗೆದ್ದವರಿಗೆ ಫೈನಲ್ ಟಿಕೆಟ್