ETV Bharat / sports

ವಿಶ್ವಕಪ್​ ಬಳಿಕ ಏಕದಿನ ಕ್ರಿಕೆಟ್​ಗೆ ವಿದಾಯ.. ವಿರಾಟ್​ ಜೊತೆ ಕಿತ್ತಾಡಿದ್ದ ಅಫ್ಘಾನ್​ ವೇಗಿ ನವೀನ್​ ಅಚ್ಚರಿಯ ನಿರ್ಧಾರ

author img

By ETV Bharat Karnataka Team

Published : Sep 28, 2023, 4:11 PM IST

ಅಫ್ಘಾನಿಸ್ತಾನ ತಂಡದ ವೇಗಿ ನವೀನ್​ ಉಲ್​ ಹಕ್​ ಏಕದಿನ ಕ್ರಿಕೆಟ್​ಗೆ ದಿಢೀರ್​ ವಿದಾಯ ಹೇಳಿದ್ದಾರೆ.

ನವೀನ್​ ಉಲ್​ ಹಕ್
ನವೀನ್​ ಉಲ್​ ಹಕ್

ಹೈದರಾಬಾದ್: ಚೇಸ್​ ಮಾಸ್ಟರ್​ ವಿರಾಟ್​ ಕೊಹ್ಲಿಯ ಜೊತೆಗೆ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ​(ಐಪಿಎಲ್​) ಕಿತ್ತಾಡಿಕೊಂಡು ಸುದ್ದಿಯಾಗಿದ್ದ ಅಫ್ಘಾನಿಸ್ತಾನದ ವೇಗಿ ನವೀನ್ ಉಲ್ ಹಕ್ ಭಾರತದಲ್ಲಿ ನಡೆಯುವ ವಿಶ್ವಕಪ್​ ಬಳಿಕ ಏಕದಿನ ಕ್ರಿಕೆಟ್​ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಈ ದಿಢೀರ್​ ನಿರ್ಧಾರ ಅಫ್ಘಾನ್​ ತಂಡ ಮತ್ತು ಅವರ ಅಭಿಮಾನಿಗಳಿಗೆ ಆಘಾತ ತಂದಿದೆ.

ಪವರ್ ಪ್ಲೇ ಮತ್ತು ಇನ್‌ಡೆತ್ ಓವರ್‌ಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ನವೀನ್, ತಂಡದ ಪರವಾಗಿ 7 ಏಕದಿನ ಪಂದ್ಯಗಳನ್ನು ಆಡಿದ್ದು, 25.42 ರ ಬೌಲಿಂಗ್ ಸರಾಸರಿಯೊಂದಿಗೆ 14 ವಿಕೆಟ್​ಗಳನ್ನು ಗಳಿಸಿದ್ದಾರೆ. ಬಲಗೈ ವೇಗಿ 2021 ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದರು. ವಿಶ್ವಕಪ್​ನ ತಾತ್ಕಾಲಿಕ ತಂಡದಲ್ಲಿ ಸ್ಥಾನ ಗಳಿಸಲು ವಿಫಲವಾಗಿದ್ದ ನವೀನ್​, ಬಳಿಕ ವಿಶ್ವಕಪ್​ ಅಂತಿಮ ತಂಡದಲ್ಲಿ ಕೊನೆಯ ಕ್ಷಣದಲ್ಲಿ ವಾಪಸಾಗಿದ್ದರು.

ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ನವೀನ್, ಭಾರವಾದ ಹೃದಯದಿಂದ 50 ಓವರ್​ಗಳ ಕ್ರಿಕೆಟ್​ನಿಂದ ನಿವೃತ್ತನಾಗಲು ನಿರ್ಧರಿಸಿದ್ದೇನೆ. ವಿಶ್ವಕಪ್​ ಬಳಿಕ ನಾನು ಏಕದಿನ ಕ್ರಿಕೆಟ್​ನಿಂದ ವಿಮುಖನಾಗಲಿದ್ದೇನೆ. ದೇಶದ ತಂಡದ ಪರವಾಗಿ ಟಿ20 ಯಲ್ಲಿ ಮುಂದುವರಿಯುವೆ ಎಂದು ಬರೆದುಕೊಂಡಿದ್ದಾರೆ.

ಈ ನಿರ್ಧಾರ ಸುಲಭವಲ್ಲ. ಆದರೆ, ನನ್ನ ವೃತ್ತಿಜೀವನವನ್ನು ವಿಸ್ತರಿಸಲು ಈ ಕಠಿಣ ನಿರ್ಣಯಕ್ಕೆ ಬಂದಿದ್ದೇನೆ. ಇಲ್ಲಿಯವರೆಗೂ ಬೆಂಬಲಿಸಿದ ಅಪ್ಘಾನಿಸ್ತಾನ ಕ್ರಿಕೆಟ್​ ಮಂಡಳಿ ಮತ್ತು ನನ್ನೆಲ್ಲಾ ಅಭಿಮಾನಿಗಳಿಗೆ ಪ್ರೀತಿಯ ಧನ್ಯವಾದಗಳು ಎಂದಿದ್ದಾರೆ.

ಕ್ರಿಕೆಟಿಗರಿಂದ ಶುಭ ಹಾರೈಕೆ: ನವೀನ್​ ಉಲ್ ಹಕ್ ಏಕದಿನಕ್ಕೆ ಅಚ್ಚರಿಯ ವಿದಾಯ ಹೇಳಿದ ನಿರ್ಧಾರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ. ಜೊತೆಗೆ ಅಫ್ಘಾನಿಸ್ತಾನ ಕ್ರಿಕೆಟಿಗರಾದ ರಹಮಾನುಲ್ಲಾ ಜದ್ರಾನ್ ಮತ್ತು ಅಬ್ದುಲ್ಲಾ ಆದಿಲ್ ಸೇರಿದಂತೆ ಹಿರಿಯ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ. 24 ನೇ ವಯಸ್ಸಿನಲ್ಲಿ ಏಕದಿನಕ್ಕೆ ವಿದಾಯ ಹೇಳಿದ ನಿರ್ಧಾರಕ್ಕೆ ನೆಟ್ಟಿಗರೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದು, ಅವರ ಮುಂದಿನ ಪ್ರಯತ್ನಕ್ಕೆ ಶುಭ ಹಾರೈಸುತ್ತೇನೆ ಎಂದಿದ್ದಾರೆ. ಮತ್ತೊಬ್ಬ ಎಕ್ಸ್​ ಬಳಕೆದಾರ ನವೀನ್ ಉಲ್ ಹಕ್ ವಿಶ್ವಕಪ್ ಮುಂಚಿತವಾಗಿ ನಿವೃತ್ತಿ ಘೋಷಿಸಿರುವುದು ಎಲ್ಲರನ್ನು ಆಶ್ಚರ್ಯಗೊಳಿಸಿದೆ ಎಂದು ಬರೆದುಕೊಂಡಿದ್ದಾರೆ.

ಮ್ಯಾಂಗೋ ಮಾರಾಟ-ವ್ಯಂಗ್ಯ: ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿಯ ಜೊತೆಗೆ ಕಿತ್ತಾಡಿಕೊಂಡಿದ್ದಾಗ, ಇಬ್ಬರ ಮಧ್ಯೆ ಟ್ವೀಟ್​ ವಾರ್​ ನಡೆದಿತ್ತು. ಬಳಿಕ ವಿರಾಟ್​ ಪಂದ್ಯವೊಂದರಲ್ಲಿ ಔಟ್​ ಆಗಿದ್ದಾಗ ನವೀನ್​ ಮಾವು ಇದ್ದ ಚಿತ್ರವನ್ನು ಹಂಚಿಕೊಂಡಿದ್ದರು. ಇದನ್ನೇ ವ್ಯಂಗ್ಯವಾಡಿರುವ ನೆಟ್ಟಿಗನೊಬ್ಬ, ನವೀನ್​ ಏಕದಿನ ವಿದಾಯದ ಬಳಿಕ ಸಿಹಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಯೋಜಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ನೀನು ನನಗೆ ಸ್ಪರ್ಧಿಯೇ ಅಲ್ಲ.. ನವೀನ್​ ಉಲ್​ ಹಕ್ ಗೆ​ ವಿರಾಟ್​ ಟಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.