ETV Bharat / sports

MS Dhoni: ಧೋನಿಗೆ ಚಾಕಲೇಟ್ ನೀಡಿ ಸರ್ಪ್ರೈಸ್ ಕೊಟ್ಟ ಗಗನಸಖಿ.. ನಿಜಕ್ಕೂ ಸರ್ಪ್ರೈಸ್ ಆದದ್ದು ಮಾತ್ರ ಕ್ಯಾಂಡಿ ಕ್ರಶ್ ಗೇಮ್​​.. ​​ - MS Dhoni

ವಿಮಾನದಲ್ಲಿ ಧೋನಿಯ ಅಭಿಮಾನಿಯಾಗಿರುವ ಗಗನಸಖಿ ಒಬ್ಬಳು ಮಾಹಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಆದರೆ ಈ ಸರ್ಪ್ರೈಸ್ ಮಾತ್ರ ಹೆಚ್ಚಾಗಿ ಪರಿಣಾಮ ಬೀರಿದ್ದು ಕ್ಯಾಂಡಿ ಕ್ರಶ್ ಗೇಮ್​ ಮೇಲೆ ಹೇಗೆ ಅಂತಿರಾ ಸ್ಟೋರಿ ಓದಿ.. ​​

MS Dhoni
ಧೋನಿ
author img

By

Published : Jun 25, 2023, 7:41 PM IST

ಕ್ರಿಕೆಟ್​ ಪ್ರೇಮಿಗಳ ಹೊರತಾಗಿಯೂ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರಿಗೆ ಇರುವ ಅಭಿಮಾನಿಗಳ ಬಗ್ಗೆ ಈ ವರ್ಷದ ಐಪಿಎಲ್​ ವೇಳೆ ಸ್ಪಷ್ಟ ಚಿತ್ರಣವೇ ಸಿಕ್ಕಿದೆ ಎನ್ನಬಹುದು. ಏಕೆಂದರೆ ಐಪಿಎಲ್​ ಆನ್​ಲೈನ್​ ವೀಕ್ಷಣೆಯನ್ನು ಮಾಹಿ ಬ್ಯಾಟಿಂಗ್​ಗೆ ಇಳಿದಾಗ ಮಿಲಿಯನ್​ ಗಟ್ಟಲೆ ವೀಕ್ಷಣೆ ಪಡೆಯುತ್ತಿತ್ತು. ಮಳೆಯಿಂದಾಗಿ ಐಪಿಎಲ್​ ಫೈನಲ್​ ಪಂದ್ಯ ತಡ ರಾತ್ರಿ ನಡೆದರೂ ಚೆನ್ನೈ ತಂಡಕ್ಕಾಗಿ ಜನರು ವೀಕ್ಷಣೆ ಮಾಡಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪ್ರಾಂಚೈಸಿ ಬಗ್ಗೆ ಬಿಡುಗಡೆ ಆದ ವರದಿಯಲ್ಲೂ ಚೆನ್ನೈ ವಿಶ್ವದಲ್ಲೇ ಅಗ್ರ ಸ್ಥಾನವನ್ನು ಪಡೆದುಕೊಂಡಿತ್ತು.

ಅಲ್ಲದೇ ಭಾರತದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ತಮ್ಮ ಸರಳತೆ ಮತ್ತು ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದಾರೆ. ಬೆರಗುಗೊಳಿಸುವ ಜೀವನದಿಂದ ದೂರವಾಗಿ ಮನೆಯಲ್ಲಿ ಸಮಯ ಕಳೆಯಲು ಧೋನಿ ಆದ್ಯತೆ ನೀಡುತ್ತಾರೆ. ಧೋನಿಯ ಫ್ಯಾನ್ ಫಾಲೋಯಿಂಗ್‌ಗೆ ಕಮ್ಮಿ ಇಲ್ಲ. ಧೋನಿ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು, ಆದರೆ ಅವರ ಸರಳತೆ ಅವರನ್ನು ಉಳಿದವರಿಗಿಂತ ಭಿನ್ನವಾಗಿಸುತ್ತದೆ. ಧೋನಿ ಇತ್ತೀಚೆಗೆ ತಮ್ಮ ಪತ್ನಿ ಸಾಕ್ಷಿಯೊಂದಿಗೆ ಎಕಾನಮಿ ಕ್ಲಾಸ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅಲ್ಲಿ ಅಭಿಮಾನಿಯೊಬ್ಬರಿಂದ ರೋಮ್ಯಾಂಟಿಕ್ ಸರ್ಪ್ರೈಸ್ ಸಿಕ್ಕಿದೆ. ಅವರ ಪಕ್ಕದಲ್ಲಿ ಕುಳಿತಿದ್ದ ಪತ್ನಿ ಸಾಕ್ಷಿ ಕೂಡ ಆಶ್ಚರ್ಯಚಕಿತರಾಗಿದ್ದಾರೆ.

ಟ್ವಿಟರ್​ನಲ್ಲಿ ಧೋನಿ ಅಭಿಮಾನಿ ಗಗನ ಸಖಿಯೊಬ್ಬರ ವಿಡಿಯೋ ಫುಲ್​ ವೈರಲ್​ ಆಗುತ್ತಿದೆ. ವಿಡಿಯೋಕ್ಕೆ ಇತ್ತೀಚೆಗೆ ಬಿಡುಗಡೆಯಾದ ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್​ ಅಭಿನಯದ ಫ್ಯಾಮಿಲಿ ಡ್ರಾಮ "ಜರಾ ಹಟ್ಕೆ ಜರಾ ಬಚ್ಕೆ" ಸಿನಿಮಾದ ಹಾಡನ್ನು ಹಾಕಿ ರೀಲ್ಸ್​ ಮಾಡಲಾಗಿದೆ.

ಗಗನಸಖಿಯೊಬ್ಬರು ಚಾಕೊಲೇಟ್‌ಗಳು ಮತ್ತು ಇತರ ಉಡುಗೊರೆಗಳಿಂದ ತುಂಬಿದ ಟ್ರೇಯೊಂದಿಗೆ ಎಂಎಸ್ ಧೋನಿ ಬಳಿಗೆ ಬರುತ್ತಾರೆ ಮತ್ತು ಅವರಿಗೆ ಅದ್ಭುತವಾದ ರೋಮ್ಯಾಂಟಿಕ್ ಸರ್ಪ್ರೈಸ್ ನೀಡಿದ್ದಾರೆ. ಈ ಸಮಯದಲ್ಲಿ, ಅವರು ಧೋನಿಗೆ ಏನನ್ನಾದರೂ ಹೇಳುತ್ತಾರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಧೋನಿ ಅವರಿಗೆ ನಗುತ್ತಾ ಧನ್ಯವಾದ ಹೇಳಿದ್ದಾರೆ. ಆಗ ಗಗನಸಖಿ ಕೈ ಬರಹದ ಚೀಟಿಯನ್ನೂ ಕೊಟ್ಟಿದ್ದಾರೆ. ಇದನ್ನು ಓದಿದ ಧೋನಿ ಮುಗುಳ್ನಕ್ಕರು. ಧೋನಿ ಟ್ರೇನಿಂದ ಒಂದು ಚಾಕೊಲೇಟ್ ಅನ್ನು ಎತ್ತಿಕೊಂಡು ಉಳಿದದ್ದನ್ನು ಹಿಂದಿರುಗಿಸಿ ಇದು ಸಾಕು ಎಂದು ಹೇಳಿದ್ದು ಕಾಣುತ್ತದೆ. ಧೋನಿ ಮತ್ತು ಗಗನಸಖಿ ನಡುವಿನ ಕೆಮಿಸ್ಟ್ರಿ ನೋಡಿ ಸಾಕ್ಷಿ ಕೂಡ ಅಚ್ಚರಿಗೊಂಡಿದ್ದಾರೆ.

ಮೂರು ಗಂಟೆಯಲ್ಲಿ 3.6 ವಿಲಿಯನ್ ಕ್ಯಾಂಡಿ ಕ್ರಶ್​ ಡೌನ್‌ಲೋಡ್‌: ಈ ವೇಳೆ ಧೋನಿ ಅವರ ಬಳಿ ಇರುವ ಟ್ಯಾಬ್ಲೆಟ್​ನಲ್ಲಿ ಕ್ಯಾಂಡಿ ಕ್ರಶ್​ ಗೇಮ್​ ಆಡುತ್ತಿರುವುದು ಕಾಣಿಸುತ್ತಿದೆ. ಇದನ್ನೂ ಗಮನಿಸಿದ ಅಭಿಮಾನಿಗಳೂ ನಾನು ಇನ್ನು ಕ್ಯಾಂಡಿ ಕ್ರಶ್​ ಆಡುತ್ತೇನೆ ಎಂದು ಬರೆದು ಕಮೆಂಟ್​ ಮಾಡಿದ್ದಾರೆ. ಅಲ್ಲದೇ ಬಹುತೇಕ ಅಭಿಮಾನಿಗಳು ಡೌನ್‌ಲೋಡ್‌ ಮಾಡಿದ್ದಾರೆ ಸಹ. ಇದರ ಬಗ್ಗೆ ಕ್ಯಾಂಡಿ ಕ್ರಶ್​ ಸಾಗ ಇಂಡಿಯಾ ಟ್ವಿಟರ್​ ಖಾತೆ ತಿಳಿಸಿದೆ.

ಕ್ಯಾಂಡಿ ಕ್ರಶ್​ ಸಾಗ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವಂತೆ,"ಜಸ್ಟ್ ಇನ್ - ನಾವು ಕೇವಲ 3 ಗಂಟೆಗಳಲ್ಲಿ 3.6 ಮಿಲಿಯನ್ ಹೊಸ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದ್ದೇವೆ. ಭಾರತೀಯ ಕ್ರಿಕೆಟ್ ದಂತಕಥೆ @msdhoni ಅವರಿಗೆ ಧನ್ಯವಾದಗಳು. ನಿಮ್ಮಿಂದಾಗಿ ನಾವು ಭಾರತದಲ್ಲಿ ಟ್ರೆಂಡಿಂಗ್ ಆಗಿದ್ದೇವೆ" ಎಂದಿದೆ.

ಇದನ್ನೂ ಓದಿ: Virender Sehwag: "ಆದಿಪುರುಷ ನೋಡಿದ ನಂತರ, ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂದು ಅರಿವಾಯಿತು".. ವೀರು ವಿಡಂಬನಾತ್ಮಕ ವಿಮರ್ಶೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.