ಹರಾರೆ: 127 ಪ್ರಥಮ ದರ್ಜೆ ಪಂದ್ಯಗಳಲ್ಲಿ 598 ವಿಕೆಟ್ ಪಡೆದಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ಅವಕಾಶ ಸಿಗದೇ ಕಂಗಾಲಾಗಿದ್ದ ಪಾಕಿಸ್ತಾನದ ತಬೀಶ್ ಖಾನ್ ಕೊನೆಗೂ 36ನೇ ವಯಸ್ಸಿನಲ್ಲಿ ಪಾಕಿಸ್ತಾನ ಪರ ಪದಾರ್ಪಣೆ ಮಾಡಿ ಮೊದಲ ಓವರ್ನಲ್ಲೇ ವಿಕೆಟ್ ಪಡೆದಿದ್ದಾರೆ.
ಕೆಲವೊಮ್ಮೆ ಸಾಮರ್ಥ್ಯವಿದ್ದರೂ ಅದೃಷ್ಟ ಇರುವುದಿಲ್ಲ ಎನ್ನುವುದಕ್ಕೆ ಪಾಕಿಸ್ತಾನದ ವೇಗದ ಬೌಲರ್ ತಬೀಶ್ ಖಾನ್ ಸಾಕ್ಷಿ. ಈತ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ಇನ್ನೂ ಹುಟ್ಟೇ ಇರದ ನಸೀಮ್ ಶಾ ಮತ್ತು ಅಂದು ಅಂಬೆಗಾಲಿಡುತ್ತಿದ್ದ ಶಾಹೀನ್ ಅಫ್ರಿದಿ, ಮೊಹಮ್ಮದ್ ಹಸ್ನೈನ್ ಅಂತಹವರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರೆಂದರೆ ತಬೀಶ್ ಎಂತಹ ನತದೃಷ್ಟ ಎಂಬುದನ್ನು ಊಹಿಸಿಕೊಳ್ಳಬಹುದು.
-
Last October Tabish Khan was upset after he remembered his late father after taking 5 wickets in a domestic match
— Saj Sadiq (@Saj_PakPassion) May 8, 2021 " class="align-text-top noRightClick twitterSection" data="
Today after 18 years of hard toil in domestic cricket, he took a wicket with his 6th ball in international cricket#ZIMvPAK #Cricket pic.twitter.com/YXNez45tQr
">Last October Tabish Khan was upset after he remembered his late father after taking 5 wickets in a domestic match
— Saj Sadiq (@Saj_PakPassion) May 8, 2021
Today after 18 years of hard toil in domestic cricket, he took a wicket with his 6th ball in international cricket#ZIMvPAK #Cricket pic.twitter.com/YXNez45tQrLast October Tabish Khan was upset after he remembered his late father after taking 5 wickets in a domestic match
— Saj Sadiq (@Saj_PakPassion) May 8, 2021
Today after 18 years of hard toil in domestic cricket, he took a wicket with his 6th ball in international cricket#ZIMvPAK #Cricket pic.twitter.com/YXNez45tQr
ಒಂದು ವೇಳೆ ಆತ ಅಸಮರ್ಥ, ಗುಣಮಟ್ಟದ ಬೌಲರ್ ಅಲ್ಲ ಎಂದಾಗಿದ್ದರೆ ಯಾವುದೇ ಆಶ್ಚರ್ಯಪಡುವ ಅಗತ್ಯವಿಲ್ಲ, ಆದರೆ, ಆತ ಬರೋಬ್ಬರಿ 127 ದೇಶಿ ಪಂದ್ಯಗಳನ್ನಾಡಿದ್ದಾರೆ. 598 ವಿಕೆಟ್, ಇದರಲ್ಲಿ 29 ಬಾರಿ 4 ವಿಕೆಟ್, 38 ಬಾರಿ 5 ವಿಕೆಟ್ ಮತ್ತು 7 ಬಾರಿ 10 ವಿಕೆಟ್ ಪಡೆದ ಸಾಧನೆ ಕೂಡ ಮಾಡಿದ್ದಾರೆ. ಕೊನೆಗೂ 66 ವರ್ಷಗಳ ಬಳಿಕ ಪಾಕಿಸ್ತಾನದ ಪರ ಪದಾರ್ಪಣೆ ಮಾಡಿದ ಹಿರಿಯ ಕ್ರಿಕೆಟರ್ ಎಂಬ ಶ್ರೇಯದೊಂದಿಗೆ ಜಿಂಬಾಬ್ವೆ ವಿರುದ್ಧ ಪದಾರ್ಪಣೆ ಮಾಡಿದ್ದಾರೆ.
ತಮ್ಮ 36ನೇ ವರ್ಷದಲ್ಲಾದರೂ ಹಸಿರು ಜರ್ಸಿ ತೊಡುವ ಅದೃಷ್ಟ ಅವರ ಪಾಲಿಗೆ ಬಂದಿದ್ದು ಕ್ರಿಕೆಟ್ ಆಟಕ್ಕೆ ಗೌರವ ಸಿಕ್ಕಂತಾಗಿದೆ. ಅದಕ್ಕೆ ತಕ್ಕಂತೆ ತನ್ನ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಜಿಂಬಾಬ್ವೆ ಆರಂಭಿಕ ಬ್ಯಾಟ್ಸ್ಮನ್ ತಾರಿಸೈ ಮುಸಕಂಡ ವಿಕೆಟ್ ಪಡೆಯುವ ಮೂಲಕ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಪಡೆದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿ: ರೋಹಿತ್ ಗೊತ್ತು, ಆದರೆ ಕೊಹ್ಲಿಯನ್ನು ಇನ್ನೂ ಭೇಟಿ ಮಾಡಿಲ್ಲ: ವೇಗಿ ನಾಗ್ವಾಸ್ವಾಲಾ