ಬೆಂಗಳೂರು: 88 ವರ್ಷಗಳ ಇತಿಹಾಸವಿರುವ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ಹೊಸದೊಂದು ಇತಿಹಾಸ ರಚಿಸಿದೆ. 41 ಬಾರಿಯ ಚಾಂಪಿಯನ್, ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿ ಮಧ್ಯಪ್ರದೇಶ ರಣಜಿ ಚಾಂಪಿಯನ್ ಆಗಿ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ತನ್ನ ತನ್ನೆಲ್ಲಾ ಬಲ ಪ್ರಯೋಗಿಸಿದರೂ, ಮಧ್ಯಪ್ರದೇಶದ ಮುಂದೆ ಶರಣಾಗಿದೆ. ಪ್ರತಿ ವರ್ಷವೂ ರಣಜಿ ಟೂರ್ನಿ ಗೆಲ್ಲುವ ಫೇವರೇಟ್ ತಂಡವಾದ ಮುಂಬೈ ಅನ್ನು ಇದೇ ಮೊದಲ ಬಾರಿಗೆ ಮಧ್ಯಪ್ರದೇಶ ತಂಡ ಅದರ ಎಲ್ಲಾ ತಂತ್ರಗಳನ್ನು ತಲೆಕೆಳಗೆ ಮಾಡಿದೆ.
-
𝗪𝗛𝗔𝗧. 𝗔. 𝗪𝗜𝗡! 👏 👏
— BCCI Domestic (@BCCIdomestic) June 26, 2022 " class="align-text-top noRightClick twitterSection" data="
Madhya Pradesh beat Mumbai by 6 wickets & clinch their maiden #RanjiTrophy title👍 👍 @Paytm | #Final | #MPvMUM
Scorecard ▶️ https://t.co/xwAZ13D0nP pic.twitter.com/XrSp2YzwSu
">𝗪𝗛𝗔𝗧. 𝗔. 𝗪𝗜𝗡! 👏 👏
— BCCI Domestic (@BCCIdomestic) June 26, 2022
Madhya Pradesh beat Mumbai by 6 wickets & clinch their maiden #RanjiTrophy title👍 👍 @Paytm | #Final | #MPvMUM
Scorecard ▶️ https://t.co/xwAZ13D0nP pic.twitter.com/XrSp2YzwSu𝗪𝗛𝗔𝗧. 𝗔. 𝗪𝗜𝗡! 👏 👏
— BCCI Domestic (@BCCIdomestic) June 26, 2022
Madhya Pradesh beat Mumbai by 6 wickets & clinch their maiden #RanjiTrophy title👍 👍 @Paytm | #Final | #MPvMUM
Scorecard ▶️ https://t.co/xwAZ13D0nP pic.twitter.com/XrSp2YzwSu
23 ವರ್ಷಗಳ ಬಳಿಕ ಫೈನಲ್, ಚಾಂಪಿಯನ್: ಮಧ್ಯಪ್ರದೇಶ ತಂಡ ರಣಜಿ ಟೂರ್ನಿಯ ಸಾಧನೆ ಅಷ್ಟಕ್ಕಷ್ಟೇ. 23 ವರ್ಷಗಳ ಹಿಂದೆ ಅಂದರೆ, 1998-99 ರಲ್ಲಿ ಚಂದ್ರಕಾಂತ್ ಪಂಡಿತ್ ನೇತೃತ್ವದಲ್ಲಿ ಫೈನಲ್ ಪ್ರವೇಶಿಸಿದ್ದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಆ ಬಳಿಕ ಅಂದಿನಿಂದ 23 ವರ್ಷಗಳವರೆಗೆ ಮಧ್ಯಪ್ರದೇಶ ಫೈನಲ್ ತಲುಪಿರಲಿಲ್ಲ. 2022 ರ ಸಾಲಿನ ರಣಜಿಯಲ್ಲಿ ತಂಡ ಫೈನಲ್ ತಲುಪುವ ಮೂಲಕ ಮುಂಬೈ ತಂಡವನ್ನು ಸೋಲಿಸಿ ಚಾಂಪಿಯನ್ ಆಗುವ ಮೂಲಕ ಇತಿಹಾಸ ಬರೆದಿದೆ.
ರಾಷ್ಟ್ರೀಯ ತಂಡಕ್ಕೆ ಅದೆಷ್ಟೋ ಘಟಾನುಘಟಿ ಕ್ರಿಕೆಟಿಗರನ್ನು ನೀಡಿದ್ದ ಮುಂಬೈ ತಂಡ ಈ ಬಾರಿಯೂ ಚಾಂಪಿಯನ್ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮಧ್ಯಪ್ರದೇಶದ ಮುಂದೆ ತಂಡ ಖ್ಯಾತಿಗೆ ತಕ್ಕಂತೆ ಆಡುವಲ್ಲಿ ವಿಫಲವಾಯಿತು.
ನಡೆಯದ ಮುಂಬೈ ಆಟ: ಮೊದಲ ಇನಿಂಗ್ಸ್ನಲ್ಲಿ ಭರವಸೆಯ ಆಟಗಾರ ಸರ್ಫರಾಜ್ ಖಾನ್ ಶತಕ ಮತ್ತು ಯಶಸ್ವಿ ಜೈಸ್ವಾಲ್ ಅರ್ಧಶತಕ ಹೊರತಾಗಿ ಬೇರೆ ಆಟಗಾರರು ಹೆಚ್ಚಿನ ರನ್ ಗಳಿಸದ ಕಾರಣ 374 ಮೊತ್ತ ದಾಖಲಿಸಿತ್ತು. ಇದಕ್ಕುತ್ತರವಾಗಿ ಮಧ್ಯಪ್ರದೇಶ ತಂಡ ಭರ್ಜರಿ ಬ್ಯಾಟಿಂಗ್ ಮಾಡಿತು. ಯಶ್ ದುಬೆ, ಶುಭಂ ಶರ್ಮಾ, ರಜತ್ ಪಾಟೀದಾರ್ರ ತ್ರಿವಳಿ ಶತಕಗಳು, ಸರನ್ಶಾರ ಅರ್ಧಶತಕ ಬಲದಿಂದ ತಂಡ 536 ರನ್ ಗಳಿಸಿ ಮುಂಬೈ ಭಾರಿ ಪೆಟ್ಟು ನೀಡಿತು.
4ನೇ ದಿನದ ಕೊನೆಯಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ಮುಂಬೈ ಬಿರುಸಿನ ಬ್ಯಾಟಿಂಗ್ಗೆ ಇಳಿದು ಕೈಸುಟ್ಟುಕೊಂಡಿತು. ನಾಯಕ ಪೃಥ್ವಿ ಶಾ 44, ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಸರ್ಫರಾಜ್ ಖಾನ್ 45 ರನ್ ಗಳಿಸಿದ್ದು ಬಿಟ್ಟರೆ ಯಾವ ಆಟಗಾರರು ಕನಿಷ್ಠ ಒಂದು ಅರ್ಧಶತಕ ದಾಖಲಿಸಲಿಲ್ಲ. ಇದರಿಂದ ತಂಡ 269 ರನ್ಗಳಿಸಿತು.
ಮೊದಲ ಇನಿಂಗ್ಸ್ನಲ್ಲಿ 162 ರನ್ ಮುನ್ನಡೆ ಪಡೆದಿದ್ದ ಮಧ್ಯಪ್ರದೇಶ ಗೆಲ್ಲಲು 108 ರನ್ಗಳ ಸಾಧಾರಣ ಮೊತ್ತವನ್ನು ಕೊನೆಯ ದಿನದಾಟದ 2ನೇ ಅವಧಿಯೊಳಗೆ ಗಳಿಸಿ ಗೆಲುವಿನ ನಗೆ ಬೀರಿತು.
ಪಂದ್ಯಶ್ರೇಷ್ಠ: ಶುಭಂ ಎಸ್ ಶರ್ಮಾ
ಸರಣಿ ಶ್ರೇಷ್ಠ: ಸರ್ಫರಾಜ್ ಖಾನ್
ಇನಿಂಗ್ಸ್ ಲೆಕ್ಕಾಚಾರ: ಮುಂಬೈ 374 &269, ಮಧ್ಯಪ್ರದೇಶ 536 & 108/4
ಓದಿ: ಭಾರತ-ಇಂಗ್ಲೆಂಡ್ ಟೆಸ್ಟ್‌ಗೂ ಮುನ್ನ ಕೋವಿಡ್‌ಗೆ ತುತ್ತಾದ ಕ್ಯಾಪ್ಟನ್ ರೋಹಿತ್ ಶರ್ಮಾ