ಲೀಡ್ಸ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಲಾರ್ಡ್ಸ್ನಲ್ಲಿ ಗೆಲುವು ಸಾಧಿಸಿದ ತಂಡವನ್ನು ಇಂದಿನ ಪಂದ್ಯದಲ್ಲೂ ಉಳಿಸಿಕೊಳ್ಳಲಾಗಿದೆ.
ಆದರೆ, ಅತಿಥೇಯ ಇಂಗ್ಲೆಂಡ್ ತಂಡ ಎರಡು ಬದಲಾವಣೆ ಮಾಡಿಕೊಂಡಿದೆ. ಆರಂಭಿಕ ಬ್ಯಾಟ್ಸ್ಮನ್ ಡಾಮ್ ಸಿಬ್ಲೀ ಬದಲಿಗೆ ಡೇವಿಡ್ ಮಲನ್ ಮತ್ತು ವೇಗಿ ಮಾರ್ಕ್ ವುಡ್ ಬದಲಿಗೆ ಕ್ರೇಗ್ ಓವರ್ಟನ್ರನ್ನು ಆಯ್ಕೆ ಮಾಡಿದೆ.
ಭಾರತದಲ್ಲಿ ಕೈಯಲ್ಲಿದ್ದ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, 2ನೇ ಪಂದ್ಯದಲ್ಲಿ 151 ರನ್ಗಳ ಜಯ ಸಾಧಿಸಿದ ಟೀಮ್ ಇಂಡಿಯಾ 5 ಪಂದ್ಯಗಳ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಲಾರ್ಡ್ಸ್ ವಿಜಯದ ಹುಮ್ಮಸ್ಸಿನಲ್ಲಿರುವ ಭಾರತ ಲೀಡ್ಸ್ ಟೆಸ್ಟ್ ಗೆಲ್ಲುವ ಮೂಲಕ ಆಂಗ್ಲರ ವಿರುದ್ಧ 2-0ಯಲ್ಲಿ ಮುನ್ನಡೆ ಸಾಧಿಸುವತ್ತ ಕಣ್ಣಿಟ್ಟಿದೆ.
-
Toss news from Headingley 🗞
— ICC (@ICC) August 25, 2021 " class="align-text-top noRightClick twitterSection" data="
Virat Kohli has chosen to bat first in the third #ENGvIND Test 🏏#WTC23 | https://t.co/qmnhRc14r1 pic.twitter.com/kBo7cMbQTT
">Toss news from Headingley 🗞
— ICC (@ICC) August 25, 2021
Virat Kohli has chosen to bat first in the third #ENGvIND Test 🏏#WTC23 | https://t.co/qmnhRc14r1 pic.twitter.com/kBo7cMbQTTToss news from Headingley 🗞
— ICC (@ICC) August 25, 2021
Virat Kohli has chosen to bat first in the third #ENGvIND Test 🏏#WTC23 | https://t.co/qmnhRc14r1 pic.twitter.com/kBo7cMbQTT
19 ವರ್ಷಗಳ ನಂತರ ಮುಖಾಮುಖಿ:
ಭಾರತ ತಂಡ ಹೆಡಿಂಗ್ಲೆಯಲ್ಲಿ ಬರೋಬ್ಬರಿ 19 ವರ್ಷಗಳ ನಂತರ ಇಂಗ್ಲೆಂಡ್ ಎದುರು ಕಣಕ್ಕಿಳಿಯಲಿದೆ. ಕೊನೆಯ ಬಾರಿ ಭಾರತ ತಂಡ ಸೌರವ್ ಗಂಗೂಲಿ ನೇತೃತ್ವದಲ್ಲಿ ಈ ಕ್ರೀಡಾಂಗಣದಲ್ಲಿ ಆಡಿ, ಇನ್ನಿಂಗ್ಸ್ ಹಾಗೂ 46 ರನ್ಗಳಿಂದ ಆಂಗ್ಲರನ್ನು ಮಣಿಸಿತ್ತು. 2002 ಆಗಸ್ಟ್ 22-26 ಮಧ್ಯೆ ನಡೆದಿದ್ದ ಆ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 628 ರನ್ಗಳಿಸಿತ್ತು. ರಾಹುಲ್ ದ್ರಾವಿಡ್(148), ಸಚಿನ್ ತೆಂಡೂಲ್ಕರ್ 193 ಮತ್ತು ಸೌರವ್ ಗಂಗೂಲಿ(128) ಭರ್ಜರಿ ಶತಕ ಸಿಡಿಸಿದ್ದರು. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 273 ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 309ರನ್ಗಳಿಗೆ ಆಲೌಟ್ ಆಗಿ ಇನ್ನಿಂಗ್ಸ್ ಮತ್ತು 46 ರನ್ಗಳ ಸೋಲು ಕಂಡಿತ್ತು.
ಭಾರತ ಈ ಮೈದಾನದಲ್ಲಿ ಕೊನೆಯ ಬಾರಿ ಸೋತಿರುವುದು 1967ರಲ್ಲಿ. ನಂತರ ಆಡಿರುವ 3 ಪಂದ್ಯಗಳಲ್ಲಿ ಟೀಂ ಇಂಡಿಯಾ 2ರಲ್ಲಿ ಜಯ ಸಾಧಿಸಿದರೆ, ಮತ್ತೊಂದು ಪಂದ್ಯದಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಭಾರತ ಸ್ನೇಹಿಯಾಗಿರುವ ಈ ಮೈದಾನ ಇಂಗ್ಲೆಂಡ್ ಕಹಿ ನೆನಪಿನ ತಾಣವಾಗಿದೆ. ಈ ಮೈದಾನದಲ್ಲಿ ಆಡಿರುವ ಕೊನೆಯ 11 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದರೆ, 6ರಲ್ಲಿ ಸೋಲು ಮತ್ತು ಒಂದರಲ್ಲಿ ಡ್ರಾ ಸಾಧಿಸಿದೆ.
ಭಾರತ ತಂಡ : ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್) ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರ್ರನ್, ಕ್ರೇಗ್ ಓವರ್‌ಟನ್, ಆಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್