ETV Bharat / sports

ಅತ್ಯುನ್ನತ ಲಯದಲ್ಲಿರುವ ಭಾರತವನ್ನು ಎದುರಿಸುವುದೇ ಕಿವೀಸ್​ಗೆ ದೊಡ್ಡ ಸವಾಲು: ಇಶ್ ಸೋಧಿ - ಭಾರತ vs ನ್ಯೂಜಿಲ್ಯಾಂಡ್ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್

ಇತ್ತೀಚಿನ ದಿನಗಳಲ್ಲಿ ಹೆಚ್ಚು ಟಿ20 ಬೌಲರ್‌ ಆಗಿ ಮಾರ್ಪಟ್ಟಿರುವ ಸೋಧಿ, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ಬ್ಲಾಸ್ಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಕಿವೀಸ್​ ತಂಡದ ಆಟಗಾರರು WTC ಫೈನಲ್‌ನಲ್ಲಿ ಆಡಲಿದ್ದಾರೆ. ಭಾರತ ಅಸಾಧಾರಣ ಕ್ರಿಕೆಟ್ ಆಡುತ್ತಿದೆ ಮತ್ತು ಅವರ ಸಾಮರ್ಥ್ಯ ಉತ್ತುಂಗದಲ್ಲಿದೆ ಎಂದು ಸೋಧಿ ಹೇಳಿದ್ದಾರೆ.

ಇಶ್ ಸೋಧಿ
ಇಶ್ ಸೋಧಿ
author img

By

Published : Jun 8, 2021, 6:50 PM IST

ಲಂಡನ್: ಜೂನ್​ 18ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಭಾರತದ ವಿರುದ್ಧ ಕಿವೀಸ್ ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ ಎಂದು ಕಿವೀಸ್ ಲೆಗ್​ ಸ್ಪಿನ್ನರ್ ಇಶ್ ಸೋಧಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಟಿ20 ಬೌಲರ್‌ ಆಗಿ ಮಾರ್ಪಟ್ಟಿರುವ ಸೋಧಿ, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ಬ್ಲಾಸ್ಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಕಿವೀಸ್​ ತಂಡದ ಆಟಗಾರರು WTC ಫೈನಲ್‌ನಲ್ಲಿ ಆಡಲಿದ್ದಾರೆ. ಭಾರತ ಅಸಾಧಾರಣ ಕ್ರಿಕೆಟ್ ಆಡುತ್ತಿದೆ ಮತ್ತು ಅವರ ಸಾಮರ್ಥ್ಯ ಉತ್ತುಂಗದಲ್ಲಿದೆ ಎಂದು ಸೋಧಿ ಹೇಳಿದ್ದಾರೆ.

ತಟಸ್ಥ ಸ್ಥಳದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಆಡುತ್ತಿರುವುದು ನಿಜಕ್ಕೂ ಅದ್ಭುತವಾಗಿದೆ. ಭಾರತ ತಂಡ ಆಸ್ಟ್ರೇಲಿಯಾಕ್ಕೆ ಹೋಗಿ ಅಲ್ಲಿ ಎರಡು ಸರಣಿಗಳನ್ನು ಗೆದ್ದಿದ್ದಾರೆ. ಅವರು ಅಸಾಧಾರಣ ಕ್ರಿಕೆಟ್ ಆಡಿದ್ದಾರೆ. ಅವರ ಬೌಲರ್​ಗಳ ಪವರ್​ನಿಂದ ಉತ್ತುಂಗದಲ್ಲಿದ್ದಾರೆ. ಆದ್ದರಿಂದ ನೀವು(ಕಿವೀಸ್) ಅವರ ವಿರುದ್ಧ ಗೆಲ್ಲಬೇಕೆಂದು ತೆರಳಿದರೆ ಅದು ಅದ್ಭುತ ಸವಾಲಾಗಲಿದೆ. ಒಂದು ವೇಳೆ ನ್ಯೂಜಿಲ್ಯಾಂಡ್ ಗೆದ್ದರೆ ಅದು ನ್ಯೂಜಿಲ್ಯಾಂಡ್ ಕ್ರಿಕೆಟ್​ನ ಬಹುದೊಡ್ಡ ಸಾಧನೆಯಾಗಲಿದೆ" ಎಂದು ಸೋಧಿ ದ ಗ್ರೇಡ್​ ಕ್ರಿಕೆಟ್ ಎಂಬ ಯೂಟ್ಯೂಬ್​ ಶೋ ನಲ್ಲಿ ತಿಳಿಸಿದ್ದಾರೆ.

ನ್ಯೂಜಿಲ್ಯಾಂಡ್​ ಈಗಾಗಲೇ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿಯನ್ನಾರಂಭಿಸಿದೆ. ಮೊದಲ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದೆ. WTC ಫೈನಲ್​ಗೂ ಮುನ್ನ ಮತ್ತೊಂದು ಪಂದ್ಯ ನಡೆಯಲಿದ್ದು, ಇದು ಅವರಿಗೆ ಅಭ್ಯಾಸ ಪಂದ್ಯದಂತಾಗಲಿದೆ.

ಇದನ್ನು ಓದಿ:ಭಾರತ ಗೆದ್ದ ಬಾರ್ಡರ್​-ಗವಾಸ್ಕರ್ ಟ್ರೋಫಿಗೆ 'ಸಾರ್ವಕಾಲಿಕ ಟೆಸ್ಟ್​ ಸರಣಿ' ಪಟ್ಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.