ETV Bharat / sports

ನಾವು ಮತ್ತೆ ಬಲಶಾಲಿಯಾಗಿ ಮುಂದಿನ ಆವೃತ್ತಿಯಲ್ಲಿ ಬರುತ್ತೇವೆ: ವಿರಾಟ್ ಭಾವನಾತ್ಮಕ ಧನ್ಯವಾದ - ETV Bharath Kannada news

16ನೇ ಆವೃತ್ತಿಯ ಐಪಿಎಲ್​ ಲೀಗ್​ನಿಂದ ಆರ್​ಸಿಬಿ ಹೊರಗುಳಿದ ನಂತರ ತಂಡದ ನಾಯಕ ಫಾಫ್​ ಡು ಪ್ಲೆಸಿಸ್​ ಮತ್ತು ವಿರಾಟ್​ ಕೊಹ್ಲಿ ಭಾವನಾತ್ಮಕವಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

We aim to be back stronger says Virat Kohli after RCBs exit from IPL 2023
ನಾವು ಮತ್ತೆ ಬಲಶಾಲಿಯಾಗಿ ಮುಂದಿನ ಆವೃತ್ತಿಯಲ್ಲಿ ಬರುತ್ತೇವೆ: ವಿರಾಟ್
author img

By

Published : May 23, 2023, 4:27 PM IST

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್​) ​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ನಾಲ್ಕರ ಘಟ್ಟ ಪ್ರವೇಶಿಸುವಲ್ಲಿ ಎಡವಿದೆ. ಆದರೆ, ಆರ್​ಸಿಬಿ ಲೀಗ್​ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ ಅಭಿಮಾನಿಗಳಿಗೆ ಮನರಂಜನೆ ನೀಡುವಲ್ಲಿ ಎಡವಿಲ್ಲ ಎನ್ನಬಹುದು. ಈ ಬಾರಿ ವಿರಾಟ್​ ಮತ್ತು ಫಾಫ್​ ಡು ಪ್ಲೆಸಿಸ್​ ಫಾರ್ಮ್​ನಲ್ಲಿದ್ದ ಕಾರಣ ಟ್ರೋಫಿ ಜಯಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು. ಆದರೆ ಲೀಗ್ ಹಂತದಲ್ಲೇ ತಂಡದ ಎಲಿಮಿನೇಟ್​ ಆಗಬೇಕಾಯಿತು.

  • A season which had it's moments but unfortunately we fell short of the goal. Disappointed but we must hold our heads high. To our loyal supporters, grateful for backing us every step of the way. pic.twitter.com/82O4WHJbbn

    — Virat Kohli (@imVkohli) May 23, 2023 " class="align-text-top noRightClick twitterSection" data=" ">

ಆರ್​ಸಿಬಿಯ ಐಪಿಎಲ್ 2023 ರಿಂದ ನಿರಾಶಾದಾಯಕ ನಿರ್ಗಮನದ ನಂತರ ಮುಂದಿನ ಋತುವಿನಲ್ಲಿ ತಂಡವು ಬಲವಾದ ಪುನರಾಗಮನವನ್ನು ಮಾಡುವ ಗುರಿಯನ್ನು ಹೊಂದಿದೆ ಎಂದು ಸ್ಟಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೋಹ್ಲಿ ಹೇಳಿದ್ದಾರೆ. ಟ್ವಿಟರ್​ನಲ್ಲಿ ವಿರಾಟ್​ ಅಭಿಮಾನಿಗಳ ಬಗ್ಗೆ ಮತ್ತು ತಂಡದ ಬಗ್ಗೆ ತುಂಬು ಹೃದಯದಿಂದ ಬರೆದುಕೊಂಡಿದ್ದಾರೆ.

ವಿರಾಟ್​​ ಟ್ವಿಟರ್​ನಲ್ಲಿ ಪೋಸ್ಟ್​ ಮೂರು ಫೋಟೋಗಳನ್ನು ಹಂಚಿಕೊಂಡು ಅದರಲ್ಲಿ ಧನ್ಯವಾದ ಬೆಂಗಳೂರು ಎಂದು ಬರೆದುಕೊಂಡಿದ್ದಾರೆ. ಅದಕ್ಕೆ "ಗೆಲುವಿನ ಕ್ಷಣಗಳನ್ನು ಹೊಂದಿದ್ದೆವು. ಆದರೆ, ದುರದೃಷ್ಟವಶಾತ್ ನಾವು ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಲಿಲ್ಲ. ನಿರಾಶೆಯಾಗಿದೆ, ಆದರೆ ನಾವು ತಲೆ ತಗ್ಗಿಸುವ ಅಗತ್ಯವಿಲ್ಲ. ನಮ್ಮ ನಿಷ್ಠಾವಂತ ಅಭಿಮಾನಿಗಳು ಪ್ರತಿ ಹಂತದಲ್ಲೂ ನಮಗೆ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞ. ತರಬೇತುದಾರರಿಗೆ, ಆರ್​ಸಿಬಿ ತಂಡಕ್ಕೆ ಮತ್ತು ನನ್ನ ಸಹ ಆಟಗಾರಿಗೆ ಧನ್ಯವಾದಗಳು. ನಾವು ಮತ್ತೆ ಬಲಶಾಲಿಯಾಗುವ ಗುರಿ ಹೊಂದಿದ್ದೇವೆ" ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಮತ್ತೊಂದೆಡೆ, ಪ್ರಸ್ತುತ ಐಪಿಎಲ್ 2023 ರ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿರುವ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಇತರ ತಂಡಗಳಿಗೆ ಪ್ಲೇಆಫ್‌ಗೆ ಶುಭ ಹಾರೈಸಿದ್ದಾರೆ. "2 ತಿಂಗಳ @iplt20 ಎಷ್ಟು ಅದ್ಭುತವಾಗಿದೆ. ದುರದೃಷ್ಟವಶಾತ್ ಪಂದ್ಯಾವಳಿಯು ನಮಗೆ ಕೊನೆಗೊಂಡಿದೆ. ಬೆಂಬಲಿಸಿದ್ದಕ್ಕಾಗಿ ಮತ್ತು ಅದನ್ನು ವಿಶೇಷವಾಗಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಪ್ಲೇ ಆಪ್​ ಪ್ರವೇಶಿಸಿದ 4 ತಂಡಗಳಿಗೆ ಶುಭವಾಗಲಿ. ಈಗ ಸ್ವಲ್ಪ ಮನೆಯ ಸಮಯ" ಎಂದು ಡು ಪ್ಲೆಸಿಸ್ ಇನ್​ಸ್ಟಾಗ್ರಾಮ್​ನಲ್ಲಿ ಬರೆದಿದ್ದಾರೆ.

ಇತ್ತೀಚಿನ ಕೆಲ ಸೀಸನ್​ಗಳಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಲೋಗನ್​ ರೀತಿಯೇ ಆಗಿದ್ದ ಈ ಸಲ ಕಪ್​ ನಮ್ದೆ ಎನ್ನುವುದು ಈ ಬಾರಿಯೂ ಜೋರು ಸದ್ದು ಮಾಡಿತು. ಆರ್​ಸಿಬಿ ಗೇಲ್​ ಮತ್ತು ಎಬಿ ಡಿವಿಲಿಯರ್ಸ್​ಗೆ ನಿವೃತ್ತಿಯ ಲೆಕ್ಕದ ಹಾನರ್ಸ್​ ಕೊಟ್ಟು ಗೌರವಿಸಿತ್ತು. ಈ ವೇಳೆ ವೇದಿಕೆಯಲ್ಲಿ ಎಬಿ ಡಿವಿಲಿಯರ್ಸ್​ ಈ ಸಲ ಕಪ್​ ನಮ್ದೆ ಎನ್ನುವ ಮೂಕಲ ಈ ಸ್ಟಾರ್ಟ್​ ಮಾಡಿದ್ದರು.

ಈ ವರ್ಷ ಆರ್​ಸಿಬಿ ತುಂಬಾ ಕಳಪೆ ಪ್ರದರ್ಶನವನ್ನೇನು ನೀಡಲಿಲ್ಲ. ಆರಂಭದಿಂದಲೇ ಉತ್ತಮವಾಗಿ ಕಂಡು ಬಂದಿದ್ದ ತಂಡ ಲೀಗ್​ನಲ್ಲಿ ನಡುವೆ ಎರಡು ಸುಲಭ ಪಂದ್ಯಗಳನ್ನು ಸೋತು, ಕೊನೆಯಲ್ಲಿ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿತು. ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023ರ 70ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ಗೆ ಆರ್​ಸಿಬಿಯನ್ನು ಮಣಿಸಿತು. ವಿರಾಟ್​ ಶತಕದ ನೆರವಿನಿಂದ 198 ರನ್​ನ ಗುರಿ ನೀಡಿದರೂ, ಗಿಲ್​ ಗಳಿಸಿದ 104 ರನ್​ ಜಿಟಿಗೆ ಸುಲಭ ಗೆಲುವು ನೀಡಿತ್ತು. ಈ ಪಂದ್ಯದ ಸೋಲಿನಿಂದ ಆರ್​ಸಿಬಿ ಪ್ಲೇ ಆಫ್​ನಿಂದ ಹೊರಗುಳಿಯ ಬೇಕಾಯಿತು.

ಆರ್​ಸಿಬಿಯ ಸೋಲು ಮುಂಬೈ ಇಂಡಿಯನ್ಸ್​ಗೆ ಪ್ಲೇ ಆಫ್​ ಪ್ರವೇಶವನ್ನು ಮಾಡಿಕೊಟ್ಟಿತು. ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​, 4 ಬಾರಿ ಕಪ್​ ವಿಜೇತ ತಂಡ ಚೆನ್ನೈ ಸೂಪರ್​ ಕಿಂಗ್ಸ್​​, ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಐದು ಬಾರಿಗೆ ಕಪ್​ ಎತ್ತಿದ ಮುಂಬೈ ಇಂಡಿಯನ್ಸ್​ ಪ್ಲೇ ಆಫ್​ ಪ್ರವೇಶವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: IPL​ ನಲ್ಲಿ ಕ್ರಿಸ್‌ ಗೇಲ್ ದಾಖಲೆ ಮುರಿದ ವಿರಾಟ್​: 'ಮತ್ತೆ ಕ್ರಿಕೆಟ್​ಗೆ ಬರುವೆ' ಎಂದ 'ಯೂನಿವರ್ಸ್‌ ಬಾಸ್'!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.