ETV Bharat / sports

ಕುಗ್ಗಿಲ್ಲ ಧೋನಿ ಖದರ್ : ಸ್ಟೇಡಿಯಂ ಆಚೆ ಬಾಲ್​ ಅಟ್ಟಿದ ಮಾಹಿ... ವಿಡಿಯೋ

ಚೆನ್ನೈ ತಂಡವು ಏಪ್ರಿಲ್ 10 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರನ್ನರ್ಸ್ ಅಪ್ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಈ ಋತುವಿನ ತಮ್ಮ ಮೊದಲ ಪಂದ್ಯ ಆಡಲಿದೆ.

Dhoni
ಎಂ.ಎಸ್.ಧೋನಿ
author img

By

Published : Mar 12, 2021, 12:44 PM IST

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14 ನೇ ಆವೃತ್ತಿ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಗುರುವಾರ, ಸಿಎಸ್​​ಕೆ ಟ್ವಿಟ್ಟರ್​​ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಧೋನಿ ಬ್ಯಾಟಿಂಗ್​ ಅಭ್ಯಾಸ ನಡೆಸಿರುವುದನ್ನು ಕಾಣಬಹುದಾಗಿದೆ. ಅಭ್ಯಾಸದ ವೇಳೆ ಧೋನಿ ಬಾಲನ್ನು ಸ್ಟೇಡಿಯಂನಿಂದ ಆಚೆಗೆ ಹೊಡೆದಿದ್ದಾರೆ. "ನಾವು ಮುಂಬರುವ ಐಪಿಎಲ್ 14 ಆವೃತ್ತಿಯ ತಯಾರಿಗಾಗಿ ಮಾರ್ಚ್ 8 ಅಥವಾ 9 ರಿಂದ ನಮ್ಮ ಶಿಬಿರ ಪ್ರಾರಂಭಿಸಿದ್ದೇವೆ. ನಾಯಕ ಎಂಎಸ್ ಧೋನಿ ಹಾಗೂ ಅಂಬಾಟಿ ರಾಯುಡು ಈಗಾಗಲೆ ಶಿಬಿರದಲ್ಲಿ ಭಾಗಿಯಾಗಿದ್ದು, ಉಳಿದ ಆಟಗಾರರು ಆದಷ್ಟೂ ಬೇಗ ಶಿಬಿರ ಸೇರಲಿದ್ದಾರೆ." ಎಂದು ಸಿಎಸ್‌ಕೆ ಸಿಇಒ ವಿಶ್ವನಾಥನ್ ಹೇಳಿದರು.

ಚೆನ್ನೈ ತಂಡವು ಏಪ್ರಿಲ್ 10 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರನ್ನರ್ಸ್ ಅಪ್ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಈ ಋತುವಿನ ತಮ್ಮ ಮೊದಲ ಪಂದ್ಯ ಆಡಲಿದೆ.

ಓದಿ : ಮಿಥಾಲಿ ರಾಜ್​ ಮತ್ತೊಂದು ದಾಖಲೆ: ಭಾರತ ಪರ 10,000 ರನ್​​ ಗಳಿಸಿದ ಮೊದಲ ಆಟಗಾರ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.