ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಐದು ಸಲ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಈ ಸಲದ ಪ್ಲೇ-ಆಫ್ ರೇಸ್ನಿಂದ ಈಗಾಗಲೇ ಹೊರಬಿದ್ದಿದೆ. ಆದರೆ, ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಅಂಡರ್-19 ತಂಡದ ಮಾಜಿ ಪ್ಲೇಯರ್ ತಿಲಕ್ ವರ್ಮಾ ಬಗ್ಗೆ ಹೆಚ್ಚಿನ ಗುಣಗಾನ ವ್ಯಕ್ತವಾಗ್ತಿದೆ. ಇದೀಗ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಇವರ ಬಗ್ಗೆ ಮಾತನಾಡಿದ್ದಾರೆ.
ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ತಿಲಕ್ ವರ್ಮಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇವರ ಪ್ರದರ್ಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ಕಪ್ತಾನ್ ರೋಹಿತ್ ಶರ್ಮಾ, ಆದಷ್ಟು ಬೇಗ ಈ ಪ್ಲೇಯರ್ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದಿದ್ದಾರೆ.
ಉದಯೋನ್ಮುಖ ಪ್ರತಿಭೆ ತಿಲಕ್ ವರ್ಮಾ ಐಪಿಎಲ್ನಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಐಪಿಎಲ್ನ ಮೊದಲ ವರ್ಷವೇ ಇಷ್ಟೊಂದು ತಾಳ್ಮೆಯಿಂದ ಬ್ಯಾಟ್ ಬೀಸುವುದು ಕಷ್ಟಕರ. ನನ್ನ ಪ್ರಕಾರ ಅವರು ಆದಷ್ಟು ಬೇಗ ಟೀಂ ಇಂಡಿಯಾ ಪರ ಎಲ್ಲ ಮಾದರಿ ಕ್ರಿಕೆಟ್ನಲ್ಲೂ ಆಡಲಿದ್ದಾರೆ ಎಂದಿದ್ದಾರೆ.
ತಿಲಕ್ ಉತ್ತಮ ತಂತ್ರಗಾರಿಕೆ ಹೊಂದಿದ್ದಾರೆ. ಓರ್ವ ಬ್ಯಾಟರ್ಗೆ ಇದು ಅತಿ ಅವಶ್ಯ. ಪಂದ್ಯವನ್ನ ಗೆಲ್ಲಿಸಬೇಕೆಂಬ ಹಂಬಲ ಅವರಲ್ಲಿ ಎದ್ದು ಕಾಣಿಸುತ್ತದೆ. ಬರುವ ದಿನಗಳಲ್ಲೂ ಇದನ್ನ ಮುಂದುವರೆಸಿಕೊಂಡು ಹೋದರೆ ಖಂಡಿತವಾಗಿ ಓರ್ವ ಅತ್ಯುತ್ತಮ ಬ್ಯಾಟರ್ ಆಗಿ ರೂಪಗೊಳ್ಳಲಿದ್ದಾರೆ ಎಂದರು. 2022ರ ಐಪಿಎಲ್ನಲ್ಲಿ ತಿಲಕ್ ವರ್ಮಾ ಆಡಿರುವ 12 ಪಂದ್ಯಗಳಿಂದ 368 ರನ್ಗಳಿಕೆ ಮಾಡಿದ್ದು, ಈ ಹಿಂದೆ 2017ರಲ್ಲಿ ರಿಷಭ್ ಪಂತ್(ಯುವ ಪ್ಲೇಯರ್) ನಿರ್ಮಾಣ ಮಾಡಿದ್ದ ದಾಖಲೆ ಬ್ರೇಕ್ ಮಾಡಿದ್ದಾರೆ.