ETV Bharat / sports

IPLನಲ್ಲಿ ಇಂದು: ಕೋಲ್ಕತ್ತಾ-ಹೈದರಾಬಾದ್‌ ಹಣಾಹಣಿಯಲ್ಲಿ ಯಾರಿಗೆ ಗೆಲುವು? ಹೇಗಿರಲಿದೆ ಪ್ಲೇಯಿಂಗ್‌ 11?

ಕೆಕೆಆರ್​ ತಂಡಕ್ಕೆ ಜೇಸನ್ ರಾಯ್ ಮತ್ತು ಲಿಟನ್ ದಾಸ್ ಸೇರಿಕೊಂಡಿದ್ದಾರೆ.

Kolkata Knight Riders vs Sunrisers Hyderabad Match preview
ಕೊಲ್ಕತ್ತಾ ಸೇರಿದ ಮತ್ತೆರಡು ಸ್ಫೋಟಕ ಬ್ಯಾಟರ್​ಗಳು, ಇಂದಿನ ಆಡುವ ಹನ್ನೊಂಡು ಹೀಗಿರಲಿದೆ..
author img

By

Published : Apr 14, 2023, 4:04 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂದು ಸಂಜೆ ಈಡನ್ ಗಾರ್ಡನ್​ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಐಪಿಎಲ್ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಪರಸ್ಪರ ಜಯದ ಪಥ ಮುಂದುವರೆಸಿಕೊಂಡು ಹೋಗಲು ಕಾತರಿಸುತ್ತಿವೆ. ಇತ್ತಂಡಗಳೂ ತಲಾ ಮೂರು ಪಂದ್ಯಗಳನ್ನು ಆಡಿವೆ. ಈ ಪೈಕಿ ಕೆಕೆಆರ್​ ಮೊದಲ ಪಂದ್ಯವನ್ನು ಮಳೆಯಿಂದ ಕಳೆದುಕೊಂಡಿತು. ನಂತರದ ಎರಡರಲ್ಲಿ ರೋಚಕ ಗೆಲುವು ಸಾಧಿಸಿತು. ಹೈದರಾಬಾದ್ ತಂಡ​ ಎರಡರಲ್ಲಿ ಸೋತು, ಕಳೆದ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದೆ.

ಕೆಕೆಆರ್ ತಂಡವನ್ನು ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಶಾರ್ದೂಲ್​ ಠಾಕೂರ್​ ಪರಾಕ್ರಮ ದಡ ಸೇರಿಸಿದರೆ, ಗುಜರಾತ್​ ವಿರುದ್ಧ ರಿಂಕು ಸಿಂಗ್​ ಅಬ್ಬರದಿಂದ ಗೆಲುವು ದೊರೆತಿತ್ತು. ತಂಡದ ಎಲ್ಲಾ ಆಟಗಾರರು ಫಾರ್ಮ್​ನಲ್ಲಿರುವುದು ಕೋಲ್ಕತ್ತಾ ತಂಡದ ಬಲ. ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್​​ ಅಯ್ಯರ್​, ನಿತೀಶ್​ ರಾಣ, ರಿಂಕು ಸಿಂಗ್​ ಮತ್ತು ಶಾರ್ದೂಲ್​ ಠಾಕೂರ್​​ ರನ್​ ಕಲೆ ಹಾಕುತ್ತಿದ್ದಾರೆ. ಕೆರಿಬಿಯನ್​ ಆಟಗಾರ ಆಂಡ್ರೆ ರಸೆಲ್​ ಇನ್ನೂ ಲಯಕ್ಕೆ ಬಂದಿಲ್ಲ. ಅವರೂ ಫಾರ್ಮ್​ಗೆ ಬಂದರೆ ತಂಡ ಇನ್ನಷ್ಟೂ ಬಲಿಷ್ಟವಾಗಲಿದೆ.

ಬ್ಯಾಟಿಂಗ್​ನಲ್ಲಿ ಬಲಗೊಳ್ಳಬೇಕು ಎಸ್​ಆರ್​ಹೆಚ್​: ಸನ್​ ರೈಸರ್ಸ್​ ಹೈದರಾಬಾದ್ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ಎದುರಾಳಿಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರೂ, ಅದನ್ನೂ ಸಾಧಿಸುವಲ್ಲಿ ವಿಫಲವಾಗುತ್ತಿದೆ. ತಂಡದ ಬ್ಯಾಟರ್​​ಗಳಿಂದ ಬೃಹತ್​ ಜೊತೆಯಾಟ ಬಾರದೇ ಇರುವುದು ತಂಡಕ್ಕೆ ಮೈನಸ್​ ಆಗಿದೆ. ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ ಮತ್ತು ಐಡೆನ್ ಮಾರ್ಕ್ರಾಮ್​ರಂತಹ ಬ್ಯಾಟರ್​ಗಳು ರನ್​ ಕಲೆಹಾಕುವಲ್ಲಿ ಎಡವುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಎಸ್​ಆರ್​ಹೆಚ್​ 145 ರನ್​ ಗುರಿ ಸಾಧಿಸಲು 18 ಓವರ್ ತೆಗೆದುಕೊಂಡಿತ್ತು.

ಕೆಕೆಆರ್​ ಸೇರಿದ ರಾಯ್, ಲಿಟನ್: ಕೋಲ್ಕತ್ತಾ ನೈಟ್ ರೈಡರ್ಸ್ ಆರಂಭಿಕ ಆಟಗಾರರನ್ನು ಬದಲಿಸಬೇಕಾಗಬಹುದು. ರಹಮಾನುಲ್ಲಾ ಗುರ್ಬಾಜ್ ಇದುವರೆಗೆ ಮೂರು ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್​ ಕಟ್ಟಿದ್ದಾರೆ. ಜೇಸನ್ ರಾಯ್ ಮತ್ತು ಲಿಟನ್ ದಾಸ್ ತಂಡಕ್ಕೆ ಸೇರಿದ್ದರಿಂದ ಈ ಜೋಡಿ ಇಂದು ಆರಂಭಿಕರಾಗಿ ಕಣಕ್ಕಿಳಿದರೂ ಅಚ್ಚರಿಯೇನಿಲ್ಲ. ಆದರೆ ಈಗಾಗಲೇ ಉತ್ತಮ ಪ್ರದರ್ಶನ ನೀಡಿದವರಿಗೆ ಕೊಕ್​ ಕೊಡುತ್ತಾರಾ ಅಥವಾ ಅವರನ್ನೇ ಮುಂದುವರೆಸುತ್ತಾರಾ ಎಂಬುದು ಟಾಸ್​ ನಂತರವೇ ತಿಳಿಯಲಿದೆ.

ಮುಖಾಮುಖಿ: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಇದುವರೆಗೆ 23 ಪಂದ್ಯಗಳು ನಡೆದಿವೆ. ಕೋಲ್ಕತ್ತಾ ನೈಟ್ ರೈಡರ್ಸ್ 15 ಮತ್ತು ಸನ್ ರೈಸರ್ಸ್ ಹೈದರಾಬಾದ್ 8 ರಲ್ಲಿ ಗೆದ್ದಿವೆ.

ಸಂಭಾವ್ಯ ತಂಡಗಳು..: ಕೋಲ್ಕತ್ತಾ ನೈಟ್​ ರೈಡರ್ಸ್​: ಜೇಸನ್ ರಾಯ್, ರಹಮಾನುಲ್ಲಾ ಗುರ್ಬಾಜ್ /ಎನ್ ಜಗದೀಶನ್ (ವಿಕೆಟ್​ ಕೀಪರ್​), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ

ಸನ್​ ರೈಸರ್ಸ್​ ಹೈದರಾಬಾದ್​: ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್​ ಕೀಪರ್​), ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಾಂಡೆ, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್

ಇದನ್ನೂ ಓದಿ: ಒಂದೇ ಒಂದು ಸಿಕ್ಸ್​ ಬಾರಿಸದ ವಾರ್ನರ್​ ವಿರುದ್ಧ ಟೀಕೆಗಳ ಸುರಿಮಳೆ.. ಮೌನ ಮುರಿದ ವ್ಯಾಟ್ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.