ETV Bharat / sports

IPL: ಡುಪ್ಲೆಸಿಸ್‌, ಕೊಹ್ಲಿ, ಸಿರಾಜ್‌ ಆಕರ್ಷಕ ಪ್ರದರ್ಶನ; ಪಂಜಾಬ್​​ ವಿರುದ್ಧ ಗೆದ್ದು ಬೀಗಿದ ಆರ್‌ಸಿಬಿ

ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 4 ವಿಕೆಟ್​ ನಷ್ಟಕ್ಕೆ 174 ರನ್ ಗಳಿಸಿತ್ತು. ಈ ಗುರಿ ಮುಟ್ಟುವಲ್ಲಿ ಪಂಜಾಬ್ ವಿಫಲವಾಯಿತು.

punjab-kings-vs-royal-challengers-bangalore
IPL : ಪಂಜಾಬ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ಗೆ 24 ರನ್​ಗಳ​ ಜಯ
author img

By

Published : Apr 20, 2023, 5:28 PM IST

Updated : Apr 20, 2023, 7:55 PM IST

ಮೊಹಾಲಿ (ಪಂಜಾಬ್)​ : ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ಸಂಘಟಿತ ಪ್ರದರ್ಶನದಿಂದ ಪಂಜಾಬ್​ ಕಿಂಗ್ಸ್​ ತಂಡವನ್ನು 24 ರನ್​ಗಳಿಂದ ಸೋಲಿಸಿತು. ಆರ್‌ಸಿಬಿ ನೀಡಿದ 174 ರನ್​​ಗಳ ಗುರಿ ಬೆನ್ನತ್ತಿದ್ದ ಪಂಜಾಬ್​ 150 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಪಂಜಾಬ್​ ಕಿಂಗ್ಸ್​ ವಿರುದ್ಧ ಟಾಸ್ ಸೋತು​ ಬ್ಯಾಟಿಂಗ್​ ಮಾಡಿದ ಆರ್‌ಸಿಬಿ ನಾಲ್ಕು ವಿಕೆಟ್​ ನಷ್ಟಕ್ಕೆ 174 ರನ್​​ ಪೇರಿಸಿತು. ವಿರಾಟ್​​ ಕೊಹ್ಲಿ ಮತ್ತು ಫಾಪ್​ ಡುಪ್ಲೆಸಿಸ್​ ಉತ್ತಮ ಜೊತೆಯಾಟ ಇದಕ್ಕೆ ಕಾರಣವಾಗಿತ್ತು. ಕೊಹ್ಲಿ 47 ಎಸೆತಗಳಿಂದ 5 ಬೌಂಡರಿ ಮತ್ತು 1 ಸಿಕ್ಸರ್​ ಮೂಲಕ 59 ರನ್​ ಗಳಿಸಿದರು. ಡುಪ್ಲೆಸಿಸ್​ 56 ಎಸೆತಗಳನ್ನು ಎದುರಿಸಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ಮೂಲಕ 84 ರನ್​ ಗಳಿಸಿದರು.

ವಿರಾಟ್​ ಕೊಹ್ಲಿ, ಹರ್ ಪ್ರೀತ್​ ಬ್ರಾರ್​ ಬೌಲಿಂಗ್​ನಲ್ಲಿ ಜಿತೇಶ್​ ಶರ್ಮಾಗೆ ಕ್ಯಾಚಿತ್ತು ಔಟಾದರು. ಡುಪ್ಲೆಸಿಸ್​​ ನಥಾನ್​ ಎಸೆತದಲ್ಲಿ ಸ್ಯಾಮ್​ ಕರನ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಬಂದ ಸ್ಪೋಟಕ ಬ್ಯಾಟರ್​​ ಗ್ಲೆನ್​ ಮಾಕ್ಸ್​​ವೆಲ್​ ಡಕ್​ ಔಟಾದರು. ನಂತರದ ಯಾವುದೇ ಆಟಗಾರರು ಉತ್ತಮ ಪ್ರದರ್ಶನ ನೀಡಲಿಲ್ಲ. ಪಂಜಾಬ್​ ಪರ ಹರ್‌ಪ್ರೀತ್​ ಬ್ರಾರ್​ 31 ರನ್​ 2 ವಿಕೆಟ್​ ಪಡೆದರೆ, ಅರ್ಷದೀಪ್​ ಸಿಂಗ್​ 1 ವಿಕೆಟ್​ ಪಡೆದರು.

175 ರನ್​​ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಪಂಜಾಬ್​ ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾದ ಅಥರ್ವ 4 ರನ್​ ಗಳಿಸಿ ಸಿರಾಜ್​ಗೆ ವಿಕೆಟ್​ ಒಪ್ಪಿಸಿದರು. ಮತ್ತೊಬ್ಬ ಆಟಗಾರ ಪ್ರಭ್​ ಸಿಮ್ರಾನ್​ ಸಿಂಗ್​ 30 ಎಸೆತದಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್​ ಮೂಲಕ 46 ರನ್​​ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆಗಮಿಸಿದ ಯಾವುದೇ ಆಟಗಾರರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಜಿತೇಶ್ ಶರ್ಮ 27 ಎಸೆತದಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ ಮೂಲಕ 41 ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಪ್ರಯತ್ನಪಟ್ಟರು. ಆದರೆ ಬೆಂಗಳೂರು ತಂಡದ ಬಿಗಿ ಬೌಲಿಂಗ್​ ದಾಳಿಗೆ ಎಲ್ಲ ಪಂಜಾಬ್‌ನ ಬ್ಯಾಟರ್​ಗಳು ಪೆವಿಲಿಯನ್​ ಪರೇಡ್​ ನಡೆಸಿದರು.

ಪಂಜಾಬ್​ ಪರ ಮ್ಯಾಥ್ಯೂ ಶಾರ್ಟ್​ 8 ರನ್​, ಲಿವಿಂಗ್​ ಸ್ಟೋನ್​ 2 ರನ್​, ಹರ್​ಪ್ರೀತ್​ ಸಿಂಗ್​ ಭಾಟಿಯಾ 13 ರನ್​, ಸ್ಯಾಮ್​ ಕರನ್​ 10 ರನ್​​, ಶಾರುಖ್​ ಖಾನ್​​ 7 ರನ್, ಹರ್​ಪ್ರೀತ್​ ಬ್ರಾರ್​ 13 ರನ್​​, ನಥಾನ್​ ಎಲಿಸ್​​ 1 ರನ್​ ಗಳಿಸಿದರು. ಈ ಮೂಲಕ ಪಂಜಾಬ್​ 150 ರನ್​ ಗಳಿಸಲಷ್ಟೇ ಶಕ್ತವಾಯಿತು.

ಬೆಂಗಳೂರು ಪರ ಮೊಹಮ್ಮದ್​​ ಸಿರಾಜ್​ 21 ರನ್​​ ನೀಡಿ 4 ವಿಕೆಟ್​​ ಪಡೆದರೆ, ವನಿಂದು ಹಸರಂಗ 39 ರನ್​​ ನೀಡಿ 2 ವಿಕೆಟ್​ ಪಡೆದರು. ವಿಜಯ್​ಕುಮಾರ್​ ವೈಶಾಖ್​ ಮತ್ತು ಹರ್ಷಲ್​ ಪಟೇಲ್​​ ತಲಾ 1 ವಿಕೆಟ್​​ ಪಡೆದರು.

ಇದನ್ನೂ ಓದಿ : ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್​ಗೆ ₹12 ಲಕ್ಷ ದಂಡ

Last Updated : Apr 20, 2023, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.