ETV Bharat / sports

ಐಪಿಎಲ್​ನಿಂದ ಹೊರ ಬಂದ ಭಾರತದ ಟಾಪ್​ ಅಂಪೈರ್

author img

By

Published : Apr 29, 2021, 2:04 PM IST

ತಾಯಿ ಮತ್ತು ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಭಾರತದ ಪ್ರಮುಖ​ ಅಂಪೈರ್​ ಐಪಿಎಲ್​ನಿಂದ ಹೊರ ಬಂದಿದ್ದಾರೆ.

Now umpires Menon and Reiffel pull out,  Now umpires Menon and Reiffel pull out of IPL  IPL 2021  IpL 2021 news  ಐಪಿಎಲ್​ನಿಂದ ಹೊರ ಬಂದ ಭಾರತದ ಟಾಪ್​ ಅಂಪೈರ್  ಐಪಿಎಲ್​ನಿಂದ ಹೊರ ಬಂದ ಭಾರತದ ಟಾಪ್​ ಅಂಪೈರ್ ಮೆನನ್​ ಮೆನನ್​ ತಾಯಿಗೆ ಕೊರೊನಾ  ಐಪಿಎಲ್​ 2021  ಐಪಿಎಲ್​ 2021 ಸುದ್ದಿ
ಐಪಿಎಲ್​ನಿಂದ ಹೊರ ಬಂದ ಭಾರತದ ಟಾಪ್​ ಅಂಪೈರ್​​

ನವದೆಹಲಿ : ಭಾರತದ ಪ್ರಮುಖ​ ಅಂಪೈರ್‌ ನಿತಿನ್ ಮೆನನ್ ಮತ್ತು ಆಸ್ಟ್ರೇಲಿಯಾದ ಕೌಂಟರ್ ಪಾಲ್ ರೀಫೆಲ್ ವೈಯಕ್ತಿಕ ಕಾರಣಗಳಿಂದ ಐಪಿಎಲ್‌ನಿಂದ ಹೊರ ಬಂದಿದ್ದಾರೆ.

ಇಂದೋರ್ ನಿವಾಸಿ ಮೆನನ್​ರ ತಾಯಿ ಮತ್ತು ಪತ್ನಿಗೆ ಕೊರೊನಾ ದೃಢಪಟ್ಟಿದ್ದು ಅವರು ಟೂರ್ನಿ ನಡೆಯುವ ಬಯೋ ಬಬಲ್​ನಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಐಸಿಸಿ ಗಣ್ಯರ ಅಂಪೈರ್‌ಗಳ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿರುವ ಮೆನನ್ ತವರಿನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ನೀಡಿದ ಕೆಲವು ತೀರ್ಪುಗಳು ಪ್ರಶಂಸೆಗೆ ಕಾರಣವಾಗಿದ್ದವು. ಅವರ ಕುಟುಂಬ ಸದಸ್ಯರಿಗೆ ಸದ್ಯ ಕೋವಿಡ್​ ದೃಢಪಟ್ಟಿದ್ದು, ಅವರು ಪ್ರಸ್ತುತ ಆಟಗಳನ್ನು ನಡೆಸುವ ಮಾನಸಿಕ ಸ್ಥಿತಿಯಲ್ಲಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಹೆಚ್ಚುತ್ತಿರುವ ಕೋವಿಡ್​ ಪ್ರಕರಣಗಳ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರವು ಭಾರತದಿಂದ ಬರುವ ವಿಮಾನಗಳಿಗೆ ತಾತ್ಕಾಲಿಕ ನಿಷೇಧ ಹೇರಿದ್ದು, ಕೌಂಟರ್ ಪಾಲ್ ಶೀಘ್ರವಾಗಿ ನಿರ್ಗಮಿಸಲು ಕಾರಣವಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.