ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಅವರ ನಡುವಿನ ಮೈದಾನದ ಜಗಳ ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದಿದೆ. ಕ್ರಿಯೆ ಪ್ರತಿಕ್ರಿಯೆ ಎಂಬಂತೆ ಒಬ್ಬರಿಗೊಬ್ಬರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಕೆಣಕುತ್ತಿದ್ದಾರೆ. ನಿನ್ನೆ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟ್ ಆಗಿದ್ದಕ್ಕೆ ವ್ಯಂಗ್ಯವಾಗಿ ನವೀನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿಕೊಂಡು ಕಾಲೆಳೆದಿದ್ದಾರೆ. ಅದು ಮಾತ್ರವಲ್ಲದೇ ಮ್ಯಾಚ್ ಸೋತಾಗಲೂ ಮತ್ತೊಂದು ಸ್ಟೋರಿ ಹಾಕಿಕೊಂಡಿದ್ದಾರೆ.
ನವೀನ್ ಉಲ್ ಹಕ್ ಅವರ ಸ್ಟೋರಿಗೆ ವಿರಾಟ್ ಕೂಡಾ ಪ್ರತಿಕ್ರಿಯೆ ನೀಡಿರುವುದು ಕುತೂಹಲವಾಗಿದೆ. ವಿರಾಟ್ ಅವರ ಸ್ವಭಾವವೇ ಹಾಗೇ ಯಾರೇ ಏನೇ ಹೇಳಿದರು ಅವರು ತಿರುಗಿ ಉತ್ತರಿಸುತ್ತಿರುತ್ತಾರೆ. ಇದಕ್ಕೆ ಲಕ್ನೋ ವಿರುದ್ಧದ ಪಂದ್ಯ ಒಂದು ರೀತಿಯ ಉದಾಹರಣೆ. ಇದಕ್ಕೂ ಮುನ್ನ ಬಹಳಷ್ಟು ಬಾರಿ ವಿರಾಟ್ ಅವರು ಈ ರೀತಿ ಏಟಿಗೆ ಎದಿರೇಟು ನೀಡಿದ್ದರು. ಈಗ ನವೀನ್ ಸ್ಟೋರಿಗೆ ನೀನು ನನಗೆ ಸ್ಪರ್ಧಿಯೇ ಅಲ್ಲ ಎಂದು ವಿರಾಟ್ ಕೊಹ್ಲಿ ಪಂಚ್ ಕೊಟ್ಟಿದ್ದಾರೆ.
-
The competition is all in your head. In reality it’s always you vs you. pic.twitter.com/59OYBZ4WSF
— Virat Kohli (@imVkohli) May 10, 2023 " class="align-text-top noRightClick twitterSection" data="
">The competition is all in your head. In reality it’s always you vs you. pic.twitter.com/59OYBZ4WSF
— Virat Kohli (@imVkohli) May 10, 2023The competition is all in your head. In reality it’s always you vs you. pic.twitter.com/59OYBZ4WSF
— Virat Kohli (@imVkohli) May 10, 2023
ನಿನ್ನೆ (ಮೇ 9) ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿದಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಆರ್ಸಿಬಿ ತನ್ನ ಪ್ರಥಮ ವಿಕೆಟ್ ಅನ್ನು ಬೇಗ ಕಳೆದುಕೊಂಡಿತು. ವಿರಾಟ್ ಕೊಹ್ಲಿ ಮತ್ತು ಫಾಫ್ ಈ ಆವೃತ್ತಿಯಲ್ಲಿ ತಂಡಕ್ಕೆ ಉತ್ತಮ ಜೊತೆಯಾಟದ ಆರಂಭ ನೀಡುತ್ತಿದ್ದರು. ಆದರೆ ವಿರಾಟ್ 4 ಎಸೆತಗಳಲ್ಲಿ 1 ರನ್ ಗಳಿಸಿ ಔಟ್ ಆದರು. ಈ ವಿಕೆಟ್ ಬೀಳುತ್ತಿದ್ದಂತೆ ನವೀನ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಟಿವಿಯ ಜೊತೆಗೆ ಮಾವಿನ ಹಣ್ಣಿನ ಫೋಟೋ ಹಾಕಿ 'ಸಿಹಿ ಮಾವಿನ ಹಣ್ಣುಗಳು’ ಎಂದು ಬರೆದುಕೊಂಡಿದ್ದರು.
ಮುಂಬೈ ಬ್ಯಾಟಿಂಗ್ಗೆ ಬಂದಾಗ ವಿಕೆಟ್ ಮೊದಲು ವಿಕೆಟ್ ನಷ್ಟ ಅನುಭವಿಸಿದರೂ ನಂತರ ಸೂರ್ಯ ಕುಮಾರ್ ಯಾದವ್ ಮತ್ತು ವಧೇರಾ ಅಬ್ಬರದ ಬ್ಯಾಟಿಂಗ್ನಿಂದ ಆರ್ಸಿಬಿಯ ಬಳಿ ಇದ್ದ ಪಂದ್ಯ ಮುಂಬೈಗೆ ತಿರುಗಿತ್ತು. ಇವರುಗಳ ಬ್ಯಾಟಿಂಗ್ ಸಹಾಯದಿಂದ ಮುಂಬೈ 21 ಬಾಲ್ ಉಳಿಸಿಕೊಂಡು ಗೆಲುವು ದಾಖಲಿಸಿತ್ತು.
ನವೀನ್ ಉಲ್ ಹಕ್ ಪಂದ್ಯ ಮುಂಬೈ ಗೆಲ್ಲಲು 27 ಬಾಲ್ನಲ್ಲಿ 8 ರನ್ ಬೇಕಿದ್ದಾಗ ಮತ್ತೆ ಮ್ಯಾಚ್ ನೋಡುತ್ತಿರುವ ಜೊತೆಗೆ ಮಾವಿನ ಹಣ್ಣಿನ ಫೋಟೋ ಹಂಚಿಕೊಂಡು "ರೌಂಡ್ ಎರಡರಲ್ಲೂ ಅತ್ಯುತ್ತಮ ಮಾವಿನ ಹಣ್ಣುಗಳನ್ನು ನೀಡಿದ್ದಕ್ಕಾಗಿ ಧವಲ್ ಪರಬ್ ಭಾಯ್ ನಿಮಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಆದರೆ ನವೀನ್ ಉಲ್ ಹಕ್ ಅವರ ಈ ಉದ್ಧಟತನಕ್ಕೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇಂತಹ ನಡೆ ನಿಮ್ಮ ವೃತ್ತಿ ಜೀವನಕ್ಕೆ ಒಳ್ಳೆಯದಲ್ಲ, ಕೆಲವು ಘಟನೆಗಳನ್ನು ಮೈದಾನದಲ್ಲೇ ಬಿಡುವುದು ಉತ್ತಮ ಎಂಬ ಸಲಹೆಗಳೂ ಬಂದಿದ್ದವು. ಲಕ್ನೋ ಎದುರಿನ ಪಂದ್ಯದಲ್ಲಿ ಗಲಾಟೆಗೆ ಸಂಬಂಧಿಸಿ, ಅದನ್ನು ವೈಯಕ್ತಿವಾಗಿ ತೆಗೆದುಕೊಂಡಂತೆ ಕಾಣ್ತಿದೆ. ಆದರೆ, ಕೊಹ್ಲಿ ಯಾವುದನ್ನೂ ಉಳಿಸಿಕೊಳ್ಳಲ್ಲ, ಮತ್ತೆ ಉತ್ತರ ಕೊಡಲಿದ್ದಾರೆ ಎಂದು ಸಹ ಕಮೆಂಟ್ಗಳು ಬಂದಿದ್ದವು.
ನೀನು ನನಗೆ ಸ್ಪರ್ಧೆಯಲ್ಲ: ವಿರಾಟ್ ಅವರು ವೈಯುಕ್ತಿಕ ವಿಚಾರ ಬಂದಾಗ ವೇಗವಾಗಿಯೇ ಪ್ರತಿಕ್ರಿಯಿಸುತ್ತಾರೆ. ಇದಕ್ಕೆ ಅಭಿಮಾನಿಗಳೂ ಕಾದಿದ್ದರು ಎಂದರೆ ತಪ್ಪಾಗದು. ಅದರಂತೆ ವಿರಾಟ್ ಇನ್ಸ್ಟಾಗ್ರಾಂ, ಟ್ವಿಟರ್, ಫೇಸ್ಬುಕ್ನಲ್ಲಿ ನೇರವಾಗಿಯೇ ತಿರುಗೇಟು ನೀಡಿದ್ದಾರೆ. ಏಕಾಂತದಲ್ಲಿ ಮೌನಿಯಾಗಿ ಕೂತಿರುವ ಫೋಟೋವನ್ನು ಹಂಚಿಕೊಂಡ ಕೊಹ್ಲಿ "ಸ್ಪರ್ಧೆ ಎಂಬುದು ನಿನ್ನ ತಲೆಯಲ್ಲಿದೆಯಷ್ಟೆ. ಆದರೆ ವಾಸ್ತವದಲ್ಲಿ ನನ್ನ ಪ್ರತಿಸ್ಪರ್ಧಿ ನಾನೇ" ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಎಲ್ಲಿಂದ ಜಗಳ ಆರಂಭ: ಮೇ 1 ರಂದು ನಡೆದ ಆರ್ಸಿಬಿ ಲಕ್ನೋ ಪಂದ್ಯದಲ್ಲಿ ನವೀನ್ ಉಲ್ ಹಕ್ ಬ್ಯಾಟಿಂಗ್ ನಡೆಸುತ್ತಿದ್ದಾಗ ಸಿರಾಜ್ ಖ್ಯಾತೆ ತೆಗೆದಿದ್ದರು, ವಿರಾಟ್ ನಡುವೆ ಪ್ರವೇಶಿಸಿದ್ದರು. ಅಲ್ಲಿಂದ ಗಲಾಟೆ ಇನ್ನಷ್ಟೂ ಹೆಚ್ಚಾಗಿ ಪಂದ್ಯದ ನಂತರ ಗಂಭೀರ್ ಮತ್ತು ವಿರಾಟ್ ನಡುವೆ ವಾಗ್ವಾದಕ್ಕೂ ಕಾರಣವಾಗಿತ್ತು. ಇದರಿಂದ ಮೂವರಿಗೂ ದಂಡವನ್ನು ಬಿಸಿಸಿಐ ವಿಧಿಸಿತ್ತು. ಇದರ ನಂತರ ಇಬ್ಬರು ಆಟಗಾರರ ನಡುವೆ ಮತ್ತೆ ಈ ವಾರ್ ಮುಂದುವರೆದಿದೆ.
ಇದನ್ನೂ ಓದಿ: CSK vs DC: ಡೆಲ್ಲಿ ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ