ಚೆನ್ನೈ (ತಮಿಳುನಾಡು): ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ 50 ಆಸುಪಾಸಿನ ರನ್ ಸಹಾಯದಿಂದ ಅಗತ್ಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ಬೌಲರ್ಗಳು ಆರಂಭದಿಂದ ಮುಂಬೈನ ವಿಕೆಟ್ ಕಬಳಿಸುತ್ತಾ ರನ್ ಮೇಲೆ ಕಡಿವಾಣ ಹಾಕುತ್ತಾ ಬಂದರು. ನವೀನ್ ಉಲ್ ಹಕ್ ಮುಂಬೈನ ನಾಲ್ಕು ಬ್ಯಾಟರ್ಗಳನ್ನು ಉರುಳಿಸಿದರು. ಇದರಿಂದ ಸೂಪರ್ ಜೈಂಟ್ಸ್ ಗೆಲುವಿಗೆ 183 ರನ್ ಗಳಿಸಬೇಕಾಗಿದೆ.
-
Innings Break!
— IndianPremierLeague (@IPL) May 24, 2023 " class="align-text-top noRightClick twitterSection" data="
The Mumbai Indians finish with a challenging total of 182/8 on board 👌🏻👌🏻
An exciting chase on the cards. Who do you reckon is ahead in the #Eliminator?
Follow the match ▶️ https://t.co/CVo5K1wG31#TATAIPL | #LSGvMI pic.twitter.com/sv38cEu2G5
">Innings Break!
— IndianPremierLeague (@IPL) May 24, 2023
The Mumbai Indians finish with a challenging total of 182/8 on board 👌🏻👌🏻
An exciting chase on the cards. Who do you reckon is ahead in the #Eliminator?
Follow the match ▶️ https://t.co/CVo5K1wG31#TATAIPL | #LSGvMI pic.twitter.com/sv38cEu2G5Innings Break!
— IndianPremierLeague (@IPL) May 24, 2023
The Mumbai Indians finish with a challenging total of 182/8 on board 👌🏻👌🏻
An exciting chase on the cards. Who do you reckon is ahead in the #Eliminator?
Follow the match ▶️ https://t.co/CVo5K1wG31#TATAIPL | #LSGvMI pic.twitter.com/sv38cEu2G5
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವುದಾಗಿ ಹೇಳಿ ಕ್ರೀಸ್ಗೆ ಇಳಿದ ರೋಹಿತ್ 11 ರನ್ ಗಳಿಸುತ್ತಿದ್ದಂತೆ ಯಶ್ ಠಾಕೂರ್ಗೆ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ಕಿಶಾನ್ ಕಿಶನ್ ಸಹ 15 ರನ್ ಗಳಿಸಿ ನವೀನ್ ಉಲ್ ಹಕ್ಗೆ ಔಟ್ ಆದರು. ಮುಂಬೈ ಇಂದು ಉತ್ತಮ ಆರಂಭ ಕಾಣುವಲ್ಲಿ ಎಡವಿತು. ನಾಯಕ ತಂಡದ ಮೊತ್ತ 30 ಆಗಿದ್ದಾಗ ಪೆವಿಲಿಯನ್ಗೆ ಮರಳಿದರೆ, 38 ರನ್ ಆದಾಗ ಕಿಶನ್ ಸಹ ಡ್ರೆಸ್ಸಿಂಗ್ ರೂಮ್ ಹಿಂದಿರುಗಿದ್ದರು.
ಎರಡು ವಿಕೆಟ್ ಪತನದ ನಂತರ ಬಂದ ಕ್ಯಾಮರೂನ್ ಗ್ರೀನ್ ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಬಿದ್ದಿರುವುದನ್ನೂ ಲೆಕ್ಕಸದೇ ಅಬ್ಬರದ ಬ್ಯಾಟಿಂಗ್ನ್ನು ಎಂದಿನಂತೆ ಮಾಡಿದರು. ಇವರಿಬ್ಬರು ಬಿರುಸಿನ ಆಟದ ನೆರವಿನಿಂದ ಮುಂಬೈ ಪವರ್ ಪ್ಲೇ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿ ಚೇತರಿಕೆಯ ಸ್ಥಿತಿಯಲ್ಲಿತ್ತು. ಗ್ರೀನ್ ಸೂರ್ಯ ಜೋಡಿ ಎಂಐಗೆ 50+ ರನ್ ಜೊತೆಯಾಟ ನೀಡಿದರು.
10.4ನೇ ಓವರ್ನಲ್ಲಿ 33 ರನ್ ಗಳಿಸಿ ಆಡುತ್ತಿದ್ದ ಸೂರ್ಯ ಕುಮಾರ್ ಯಾದವ್ ವಿಕೆಟ್ ಕೊಟ್ಟರು. ಅವರ ಇಂದಿನ ಇನ್ನಿಂಗ್ಸ್ 2 ಸಿಕ್ಸ್ ಮತ್ತು 2 ಫೋರನ್ನು ಒಳಗೊಂಡಿತ್ತು. ಸೂರ್ಯ ವಿಕೆಟ್ ಕೊಟ್ಟ ಓವರ್ನಲ್ಲೇ 41 ರನ್ ಗಳಿಸಿದ್ದ ಕ್ಯಾಮರೂನ್ ಗ್ರೀನ್ ಸಹ ಔಟ್ ಆದರು.
ಅವರ ನಂತರ ಟಿಮ್ ಡೇವಿಡ್ ಮತ್ತು ತಿಲಕ್ ವರ್ಷ ಸ್ಕೋರ್ ತರುವ ಪ್ರಯತ್ನ ಮಾಡಿದರಾದರೂ ಯಶಸ್ವಿಯಾಗಲಿಲ್ಲ. ತಿಲಕ್ 26 ಮತ್ತು ಡೇವಿಡ್ 13ಕ್ಕೆ ಔಟ್ ಆದರು. ಇವರ ವಿಕೆಟ್ ಪತನದ ನಂತರ ಸೂರ್ಯ ಅವರ ಬದಲಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ವಧೇರಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ವಧೇರಾ ಡೆತ್ ಓವರ್ನಲ್ಲಿ ಬಿರುಸಿನ ಆಟ ಆಡಿ 12 ಬಾಲ್ನಲ್ಲಿ 2 ಸಿಕ್ಸ್ ಮತ್ತು 2 ಬೌಂಡರಿಯ ಸಹಾಯದಿಂದ 23 ರನ್ಗಳಿಸಿ ತಂಡದ ಮೊತ್ತವನ್ನು 180+ ಮಾಡಿದರು. ಈ ನಡುವೆ ಜೋರ್ಡನ್ 4 ರನ್ ಗಳಿಸಿದರು.
ಲಕ್ನೋ ಪರ ನವೀನ್ ಉಲ್ ಹಕ್ 4 ಮತ್ತು ಯಶ್ ಠಾಕೂರ್ 3 ವಿಕೆಟ್ ಪಡೆದರೆ, ಮೊಹ್ಸಿನ್ ಖಾನ್ 1 ಔಟ್ ಪಡೆದುಕೊಂಡರು.
ಇದನ್ನೂ ಓದಿ: TATA IPL 2023 Eliminator: ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ, ಯಾರಾಗ್ತಾರೆ ಕ್ವಾಲಿಫೈಯರ್ 2?