ETV Bharat / sports

ಉಮ್ರಾನ್ ಮಲಿಕ್ ಪಾಕ್​​ನಲ್ಲಿ ಇದ್ದಿದ್ದರೆ ಖಂಡಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರು: ಅಕ್ಮಲ್ - ಪಾಕ್ ಮಾಜಿ ಕ್ರಿಕೆಟರ್ ಕಮ್ರಾನ್ ಅಕ್ಮಲ್​

2022ರ ಐಪಿಎಲ್​​​ನಲ್ಲಿ ಸನ್​​ರೈಸರ್ಸ್ ಹೈದರಾಬಾದ್​ ತಂಡದ ಪರ ಮಿಂಚುತ್ತಿರುವ ಜಮ್ಮು- ಕಾಶ್ಮೀರದ ವೇಗದ ಬೌಲರ್ ಉಮ್ರಾನ್ ಮಲಿಕ್​ ಪರ ಪಾಕ್​ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್​​ ಕಮ್ರಾನ್​ ಅಕ್ಮಲ್ ಮಾತನಾಡಿದ್ದಾರೆ.

Kamran Akmal on SRH bowler Umran Malik
Kamran Akmal on SRH bowler Umran Malik
author img

By

Published : May 13, 2022, 4:55 PM IST

ಇಸ್ಲಾಮಾಬಾದ್​(ಪಾಕಿಸ್ತಾನ): ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಸನ್​ ರೈಸರ್ಸ್ ಹೈದರಾಬಾದ್​ ತಂಡದ ಪರ ಮಿಂಚು ಹರಿಸುತ್ತಿರುವ ಜಮ್ಮು- ಕಾಶ್ಮೀರ ವೇಗದ ಬೌಲರ್​​ ಉಮ್ರಾನ್ ಮಲಿಕ್ ತಾವು ಆಡಿರುವ 11 ಪಂದ್ಯಗಳಿಂದ 15 ವಿಕೆಟ್ ಪಡೆದು ಮಿಂಚಿದ್ದಾರೆ. ಇದರ ಜೊತೆಗೆ ಐಪಿಎಲ್ ಇತಿಹಾಸದಲ್ಲೇ 157KMPH ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇವರ ಬೌಲಿಂಗ್​​ ಶೈಲಿಗೆ ಅನೇಕ ದಿಗ್ಗಜರು ಅಚ್ಚರಿಯಾಗಿದ್ದಾರೆ.

ಇದೇ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಪ್ಲೇಯರ್​ ಕಮ್ರಾನ್ ಅಕ್ಮಲ್ ಮಾತನಾಡಿದ್ದಾರೆ. ಒಂದು ವೇಳೆ, ಉಮ್ರಾನ್ ಮಲಿಕ್​ ಪಾಕಿಸ್ತಾನದಲ್ಲಿದ್ದರೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುತ್ತಿದ್ದರು ಎಂದಿದ್ದಾರೆ. ವೇಗದ ಬೌಲರ್​​​​ಗಳಾದ ಶೋಯೆಬ್​ ಅಖ್ತರ್​ ಮತ್ತು ಬ್ರೆಟ್​ ಲೀ ಜೊತೆ ಉಮ್ರಾನ್ ಮಲಿಕ್​ ಹೋಲಿಕೆ ಮಾಡಿರುವ ಅಕ್ಮಲ್, ಆತ ಪಾಕಿಸ್ತಾನದಲ್ಲಿ ಇದ್ದಿದ್ದರೆ ಖಂಡಿತವಾಗಿ ನಮ್ಮ ಪರ ಆಡುತ್ತಿದ್ದ. ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ಮಲಿಕ್​ಗೆ ಆಡಲು ಅವಕಾಶ ನೀಡುವ ಮೂಲಕ ಭಾರತೀಯ ಕ್ರಿಕೆಟ್​ ಮಂಡಳಿ ಸಾಕಷ್ಟು ಪ್ರಬುದ್ಧತೆ ತೋರಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್​ ವಿರುದ್ಧದ ಟೆಸ್ಟ್, ಸೀಮಿತ ಓವರ್​ಗಳ ಸರಣಿಗೆ ಉಮ್ರಾನ್​ಗೆ ಅವಕಾಶ ಕೊಡಿ: ಗವಾಸ್ಕರ್

ಜಮ್ಮು-ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಕೆಟ್ ಕೀಪರ್ ಬ್ಯಾಟರ್​ ಅಕ್ಮಲ್​, ಈ ವೇಗದ ಬೌಲರ್​​ ಪ್ರತಿ ಪಂದ್ಯದಲ್ಲೂ ಉತ್ತಮ ಸ್ಟ್ರೈಕ್​ ರೇಟ್​​ ಹೊಂದಿದ್ದಾರೆ ಎಂದರು. ಇದೇ ವೇಳೆ, ಭಾರತೀಯ ಕ್ರಿಕೆಟ್​ ತಂಡಕ್ಕೆ ಈ ಹಿಂದೆ ಗುಣಮಟ್ಟದ ಬೌಲರ್​​ಗಳ ಕೊರತೆಯಿತ್ತು. ಆದರೆ, ಇದೀಗ ಐಪಿಎಲ್​​ನಿಂದಾಗಿ ಮೊಹಮ್ಮದ್​ ಸಿರಾಜ್​, ನವದೀಪ್ ಸೈನಿ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಅವರಂತಹ ವೇಗಿಗಳು ಬೆಳಕಿಗೆ ಬಂದಿದ್ದಾರೆ ಎಂದರು.

ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ದಾಖಲೆಯ 157 KMPH ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಮೂಲಕ ಈ ಹಿಂದಿನ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ತಾವು ಎಸೆದ 154 KMPH ದಾಖಲೆ ಬ್ರೇಕ್ ಮಾಡಿದ್ದರು. ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ ಈ ಪ್ಲೇಯರ್​ಗೆ ಇಂಗ್ಲೆಂಡ್​ ವಿರುದ್ಧದ ಟೆಸ್ಟ್, ಸೀಮಿತ ಓವರ್​ಗಳ ಸರಣಿಗೆ ಅವಕಾಶ ನೀಡುವಂತೆ ಸುನಿಲ್​ ಗವಾಸ್ಕರ್​ ಈಗಾಗಲೇ ಒತ್ತಾಯ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.