ಮುಂಬೈ (ಮಹಾರಾಷ್ಟ್ರ): ವೆಂಕಟೇಶ್ ಅಯ್ಯರ್ ಐಪಿಎಲ್ನ ಚೊಚ್ಚಲ ಶತಕದಾಟವಾಡಿದ್ದು, ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದ ಕೋಲ್ಕತ್ತಾ ತಂಡಕ್ಕೆ ಆಸರೆಯಾಗಿ ನಿಂತ ಅಯ್ಯರ್ ಮುಂಬೈಗೆ ಸವಾಲಿನ 186 ರನ್ ಗುರಿ ನೀಡಲು ಕಾರಣರಾದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಬಂದ ಕೆಕೆಆರ್ ಸತತ ವಿಕೆಟ್ ಪತನ ಎದುರಿಸಿತು. ಆದರೆ ಮೂರನೇ ವಿಕೆಟ್ಗೆ ಜೊತೆಯಾದ ವೆಂಕಟೇಶ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿ ಅಲ್ಪ ಮೊತ್ತಕ್ಕೆ ತಂಡ ಕುಸಿಯುವುದನ್ನು ತಡೆದರು. ವಿಕೆಟ್ ಪತನವಾಗುತ್ತಿದ್ದರೂ ತಮ್ಮ ರನ್ ಗಳಿಕೆಯ ವೇಗಕ್ಕೆ ಕಡಿವಾಣ ಹಾಕದೇ ಶತಕ ದಾಖಲಿಸಿ ಸಂಭ್ರಮಿಸಿದರು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಶತಕ ಗಳಿಸಿದ 2ನೇ ಬ್ಯಾಟರ್ ಎಂಬ ಖ್ಯಾತಿಯನ್ನೂ ಗಳಿಸಿದರು.
-
💯 for @venkateshiyer! 👏 👏
— IndianPremierLeague (@IPL) April 16, 2023 " class="align-text-top noRightClick twitterSection" data="
This has been a stunning knock ⚡️ ⚡️
He has overcome an injury to notch up his maiden IPL TON! 💪 💪
Follow the match ▶️ https://t.co/CcXVDhfzmi#TATAIPL | #MIvKKR | @KKRiders pic.twitter.com/BiNC0gDDbJ
">💯 for @venkateshiyer! 👏 👏
— IndianPremierLeague (@IPL) April 16, 2023
This has been a stunning knock ⚡️ ⚡️
He has overcome an injury to notch up his maiden IPL TON! 💪 💪
Follow the match ▶️ https://t.co/CcXVDhfzmi#TATAIPL | #MIvKKR | @KKRiders pic.twitter.com/BiNC0gDDbJ💯 for @venkateshiyer! 👏 👏
— IndianPremierLeague (@IPL) April 16, 2023
This has been a stunning knock ⚡️ ⚡️
He has overcome an injury to notch up his maiden IPL TON! 💪 💪
Follow the match ▶️ https://t.co/CcXVDhfzmi#TATAIPL | #MIvKKR | @KKRiders pic.twitter.com/BiNC0gDDbJ
ಇದಕ್ಕೂ ಮುನ್ನ, ಚೊಚ್ಚಲ ಆವೃತ್ತಿಯಲ್ಲಿ ಬ್ರೆಂಡನ್ ಮೆಕಲಮ್ 158 ರನ್ ಗಳಿಸಿದ್ದು, ವಿಶೇಷ ದಾಖಲೆಯಾಗಿತ್ತು. ಇಂದು ಅಯ್ಯರ್ ಕೆಕೆಆರ್ನ ಎರಡನೇ ಅತಿ (104) ಹೆಚ್ಚು ರನ್ ಗಳಿಸಿದರು. ಇವರು 51 ಎಸೆತ ಎದುರಿಸಿ 9 ಸಿಕ್ಸ್ ಮತ್ತು 6 ಬೌಂಡರಿ ಪೇರಿಸಿದರು. 27 ಐಪಿಎಲ್ ಪಂದ್ಯಗಳನ್ನು ಆಡಿರುವ ಅಯ್ಯರ್ 6 ಅರ್ಧಶತಕ ಮತ್ತು ಇಂದು ಮೊದಲ ಶತಕ ದಾಖಲಿಸಿದ್ದಾರೆ.
ಕೆಕೆಆರ್ಗೆ ಆರಂಭಿಕ ಆಘಾತ: ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ (8) ಮತ್ತು ಎನ್.ಜಗದೀಶನ್ (0) ಹೆಚ್ಚು ರನ್ ಗಳಿಸದೇ ಔಟಾದರು. ನಾಯಕ ನಿತೀಶ್ ರಾಣ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಲಯಕ್ಕೆ ಮರಳಿದಂತೆ ಕಂಡರೂ, ಇಂದಿನ ಪಂದ್ಯದಲ್ಲಿ 5 ರನ್‌ಗೆ ವಿಕೆಟ್ ಒಪ್ಪಿಸಿದರು. ನಾಯಕನ ವಿಕೆಟ್ ನಂತರ ಬಂದ ಶಾರ್ದೂಲ್ ಠಾಕೂರ್ (13), ರಿಂಕು ಸಿಂಗ್ (18) ರನ್ ಗಳಿಸಿ ಔಟಾದರು. ರಸೆಲ್ (21) ಮತ್ತು ಸುನಿಲ್ ನರೈನ್ (2) ಕೊನೆಯಲ್ಲಿ ತಂಡಕ್ಕೆ 20 ರನ್ ಸೇರಿಸಿದರು.
ಮುಂಬೈ ಇಂಡಿಯನ್ಸ್ ಪರ ಹೃತಿಕ್ ಶೋಕೀನ್ 2 ಮತ್ತು ದುವಾನ್ ಜಾನ್ಸೆನ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ, ಕ್ಯಾಮರಾನ್ ಗ್ರೀನ್ ತಲಾ ಒಂದು ವಿಕೆಟ್ ಪಡೆದರು. ರೋಹಿತ್ ಶರ್ಮಾ ಅನಾರೋಗ್ಯದ ಕಾರಣ ತಂಡದಿಂದ ಹೊರಗುಳಿದಿದ್ದು ಸೂರ್ಯ ಕುಮಾರ್ ಯಾದವ್ಗೆ ನಾಯಕತ್ವದ ಹೊಣೆ ನೀಡಲಾಗಿದೆ.
ತಂಡಗಳು ಇಂತಿವೆ..: ಕೋಲ್ಕತ್ತಾ ನೈಟ್ ರೈಡರ್ಸ್ : ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಎನ್.ಜಗದೀಸನ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮರಾನ್ ಗ್ರೀನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಟಿಮ್ ಡೇವಿಡ್, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ದುವಾನ್ ಜಾನ್ಸೆನ್, ರಿಲೆ ಮೆರೆಡಿತ್
ಇದನ್ನೂ ಓದಿ: ಬೌಲಿಂಗ್, ಫೀಲ್ಡಿಂಗ್ನಲ್ಲಿ ಲಕ್ನೋ ಫೇಲ್: ಪಂಜಾಬ್ಗೆ 2 ವಿಕೆಟ್ಗಳ ಗೆಲುವು