ETV Bharat / sports

ಮುಂದೆ ಸಾಗಲು ಇದು ಉತ್ತಮ ಬುನಾದಿ; ಪಂತ್ ನಾಯಕತ್ವದ ಬಗ್ಗೆ ಶ್ರೇಯಸ್ ಅಯ್ಯರ್ ಏನಂದ್ರು ಗೊತ್ತಾ? - ಶ್ರೇಯಸ್ ಅಯ್ಯರ್ ದಾಖಲೆ

ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬಗ್ಗೆ ತಂಡದ ಆಟಗಾರ ಶ್ರೇಯಸ್ ಅಯ್ಯರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೇ ಹಿಂದಿನ ದಿನಗಳನ್ನು ನೆನಪಿಸಿಕೊಂಡಿರುವ ಐಯ್ಯರ್ ಟ್ವೀಟ್​ ಮಾಡಿ ನಿನ್ನೆಯ ಗೆಲುವಿನ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ.

IPL 2021: Happy to be back out there, says Shreyas Iyer

author img

By

Published : Sep 23, 2021, 2:35 PM IST

ದುಬೈ (ಯುಎಇ): ದೆಹಲಿ ಕ್ಯಾಪಿಟಲ್ಸ್ ತಂಡದವನ್ನು ಉತ್ತಮ ಸ್ಥಿತಿಯಲ್ಲಿ ಕರೆದೊಯ್ಯುತ್ತಿರುವ ನಾಯಕ ರಿಷಭ್ ಪಂತ್ ಮುಂದಾಳತ್ವದ ಬಗ್ಗೆ ಶ್ರೇಯಸ್ ಅಯ್ಯರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಅಲ್ಲದೇ ನಾನು ಸಹ ತಂಡಕ್ಕೆ ಮರಳಿದ್ದು, ಖುಷಿ ತಂದುಕೊಟ್ಟಿದೆ. ರಿಷಭ್ ಪಂತ್ ನಾಯಕತ್ವದಡಿ ಮುಂದೆ ಸಾಗಲು ಇದು ಉತ್ತಮ ಬುನಾದಿ. ತಾನು ಸಹ ತಂಡದ ಪರ ಉತ್ತಮ ಆಟವನ್ನು ಆಡಲು ಸಿದ್ಧನಿದ್ದೇನೆ ಎಂದು ಶ್ರೇಯಸ್ ಐಯ್ಯರ್ ಟ್ವೀಟ್​ ಮಾಡಿದ್ದಾರೆ.

ಶ್ರೇಯಸ್ ಐಯ್ಯರ್​ಗೆ ಈ ಹಿಂದೆ ಭುಜಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ದೀರ್ಘಕಾಲದವರೆಗೆ ವಿಶ್ರಾಂತಿ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಹಾಗಾಗಿ ಇವರ ಬದಲಿಗೆ ಯುವ ಆಟಗಾರ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕನಾಗಿ ಹೊರಹೊಮ್ಮಿದ್ದರು. ಆ ದಿನಗಳನ್ನು ನೆನಪಿಸಿಕೊಂಡಿರುವ ಶ್ರೇಯಸ್ ಐಯ್ಯರ್ ಟ್ವೀಟ್​ ಮಾಡಿ ಖುಷಿಯನ್ನು ಹಂಚಿಕೊಂಡಿದ್ದಾರೆ.

ನಿನ್ನೆ (ಬುಧವಾರ) ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್​​ಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದು ಅಗ್ರ ಸ್ಥಾನಕ್ಕೇರುವ ಮೂಲಕ 14 ಅಂಕಗಳನ್ನು ತನ್ನದಾಗಿಸಿಕೊಂಡಿದೆ. ಹೈದರಾಬಾದ್ ತಂಡ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್13 ಎಸೆತಗಳು ಬಾಕಿ ಇರುವಂತೆಯೇ ಜಯ ಗಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.