ETV Bharat / sports

ಐಪಿಎಲ್​ 2021: ಹೈದರಾಬಾದ್ ಮಣಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್ - ಸನ್‌ರೈಸರ್ಸ್ ಹೈದರಾಬಾದ್

ರುತುರಾಜ್ ಗಾಯಕ್ವಾಡ್ , ಪಾಫ್ ಡುಪ್ಲೆಸಿಸ್​ರ ಹಾಫ್ ಸೆಂಚುರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿತು.

IPL 2021: Chennai Super Kings defeat hyderabad team
ಮೊದಲ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್
author img

By

Published : Apr 29, 2021, 12:22 AM IST

ದೆಹಲಿ : ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸಿಎಸ್‌ಕೆ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಹಿನ್ನೆಲೆ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ.

ರುತರಾಜ್ ಗಾಯಕ್ವಾಡ್ , ಪಾಫ್ ಡುಪ್ಲೆಸಿಸ್​ರ ಹಾಫ್ ಸೆಂಚುರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿತು. ಗೆಲುವಿಗೆ 172 ರನ್ ಟಾರ್ಗೆಟ್ ಪಡದೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಜೊತೆಯಾಟ ಗೆಲುವಿನ ಹಾದಿ ಸುಗಮಗೊಳಿಸಿತು.

ಗಾಯಕ್ವಾಡ್ 44 ಎಸೆತದಲ್ಲಿ 75 ರನ್ ಭಾರಿಸಿ ಔಟಾದರು. ಹಾಗೆ ಫಾಫ್ 56 ರನ್ ಕಾಣಿಕೆ ನೀಡಿದರು. ರವೀಂದ್ರ ಜಡೇದಾ ಹಾಗೂ ಸುರೇಶ್ ರೈನಾ ಜೊತೆಯಾಟ ಚೆನ್ನೈ ಗೆಲುವಿಗೆ ಪ್ರಮುಖ ಕಾರಣವಾಯಿತು.

ರೈನಾ ಅಜೇಯ 17 ರನ್ ಸಿಡಿಸಿದರೆ, ಜಡೇಜಾ ಅಜೇಯ 7 ರನ್ ಭಾರಿಸಿದರು. ಈ ಮೂಲಕ ಚೆನ್ನೈ 18.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.