ETV Bharat / sports

ನಾವು ಇನ್ನೂ 15-20 ರನ್​​ಗಳಿಸಿದ್ದರೆ ಗೆಲವು ನಮ್ಮದಾಗುತಿತ್ತು: ರಿಷಭ್ ಪಂತ್

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ರಾಜಸ್ಥಾನ್​ ರಾಯಲ್ಸ್​ ತಂಡ ಮೂರು ವಿಕೆಟ್​​ಗಳ ರೋಚಕ ಗೆಲುವು ಪಡೆದುಕೊಂಡಿದೆ. ಈ ಗೆಲುವಿನ ಮೂಲಕ 14ನೇ ಆವೃತ್ತಿಯ ಪಾಂಯಿಟ್​​ ಪಟ್ಟಿಯಲ್ಲಿ ಖಾತೆ ತೆರೆದಿದೆ.

ರಿಷಭ್ ಪಂತ್
ರಿಷಭ್ ಪಂತ್
author img

By

Published : Apr 16, 2021, 2:39 PM IST

ಮುಂಬೈ: ವಾಖೆಂಡೆ ಕ್ರಿಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯದಲ್ಲಿ ರಾಜಸ್ಥಾನ ತಂಡ ಕೊನೆಯ ಹಂತದಲ್ಲಿ ಮೋರಿಸ್​​ ಅಬ್ಬರದಿಂದ ರೋಚಕ ಗೆಲವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ರಾಯಲ್ಸ್​ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಮತ್ತೆ ಲಯಕ್ಕೆ ಮರಳಿದೆ.

ಡೆಲ್ಲಿ ಕ್ಯಾಪಿಟಲ್ಸ್​ ಸೋಲಿಗೆ ಇಬ್ಬನಿ ಕಾರಣ ಎಂದು ತಂಡದ​ ನಾಯಕ ರಿಷಭ್​ ಪಂತ್​ ಹೇಳಿದ್ದಾರೆ. "ನಮ್ಮ ಬೌಲರ್‌ಗಳು ಆರಂಭದಲ್ಲಿ ಉತ್ತಮ ದಾಳಿ ನಡೆಸಿದರು. ಆದರೆ, ಕೊನೆಯಲ್ಲಿ ನಮ್ಮ ಬೌಲರ್​ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರಲಿಲ್ಲ. ಪಂದ್ಯದ ಕೋನೆಯಲ್ಲಿ ಇಬ್ಬನಿ ಜಾಸ್ತಿ ಇದ್ದ ಕಾರಣ ಬಾಲ್​ಗಳು ನಿಧಾನಗತಿಗೆ ತಿರುಗಿದವು, ಇದು ಬ್ಯಾಟ್ಸ್​ಮನ್​ಗಳಿಗೆ ಅನೂಕುಲವಾಯಿತು. ಹಾಗಾಗಿ ಅವರಿಗೆ ಗೆಲ್ಲಲು ಅನುಕೂಲವಾಯಿತು ಎಂದರು.

ನಾವು ಇಂದು ಇನ್ನೂ ಸ್ವಲ್ಪ ಚೆನ್ನಾಗಿ ಆಡಬಹುದಿತ್ತು. ನಮ್ಮ ತಂಡ ಇನ್ನೂ 15-20 ರನ್​ಗಳಿಸಿದ್ದರೆ ನಾವೇ ಗೆಲ್ಲುತ್ತಿದ್ದೆವು ಎಂದು ರಿಷಭ್​ ಪಂತ್​ ಇದೆ ವೇಳೆ ಹೇಳಿದರು.

ಇದನ್ನೂ ಓದಿ : ನಾವು ಈ ಪಂದ್ಯವನ್ನು ಕಳೆದುಕೊಳ್ಳುತ್ತೇವೆ ಎಂದುಕೊಂಡಿದ್ದೆ: ಸಂಜು ಸ್ಯಾಮ್ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.