ETV Bharat / sports

IPL ಫೈನಲ್​​ನಲ್ಲಿ CSK vs KKR: ಫೈನಲ್​ನಲ್ಲಿ ಸೋಲಿಲ್ಲದ ಸರದಾರ ಕೆಕೆಆರ್.. ಯಾರಾಗ್ತಾರೆ ಚಾಂಪಿಯನ್​?

ಇಂಡಿಯನ್​ ಪ್ರೀಮಿಯರ್ ಲೀಗ್​ನ ಫೈನಲ್​ ಪಂದ್ಯದಲ್ಲಿ ನಾಳೆ ಬಲಿಷ್ಠ ಚೆನ್ನೈ ಹಾಗೂ ಕೋಲ್ಕತ್ತಾ ತಂಡ ಮುಖಾಮುಖಿಯಾಗಲಿದ್ದು, ಗೆಲುವು ಸಾಧಿಸುವ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಲಿದೆ.

CSK-KKR
CSK-KKR
author img

By

Published : Oct 14, 2021, 8:53 PM IST

ದುಬೈ: 14ನೇ ಆವೃತ್ತಿ ಇಂಡಿಯನ್​​ ಪ್ರೀಮಿಯರ್ ಲೀಗ್​​ನ ಫೈನಲ್​ ಪಂದ್ಯಕ್ಕಾಗಿ ವೇದಿಕೆ ಸಜ್ಜಾಗಿದ್ದು, ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಮುಖಾಮುಖಿಯಾಗಲಿವೆ.

CSK-KKR
ಫೈನಲ್​​ ಪಂದ್ಯದಲ್ಲಿ ಧೋನಿ-ಮಾರ್ಗನ್​ ಪಡೆ ಫೈಟ್​

ಕಳೆದ ವರ್ಷ ಲೀಗ್​ ಹಂತದಲ್ಲೇ ಹೊರಬಿದ್ದಿದ್ದ ಚೆನ್ನೈ ಅದ್ಭುತವಾಗಿ ಕಮ್​​ಬ್ಯಾಕ್​ ಮಾಡಿ, ಮೊದಲ ತಂಡವಾಗಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದ್ದು, ಬಲಿಷ್ಠ ಆರ್​​ಸಿಬಿ ಹಾಗೂ ಡೆಲ್ಲಿ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಮಾರ್ಗನ್​ ಪಡೆ 2014ರ ನಂತರ ಫೈನಲ್​ಗೆ ಲಗ್ಗೆ ಹಾಕಿದೆ. ಹೀಗಾಗಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ.

CSK Team
ಫೈನಲ್​ ಗೆಲುವ ಉತ್ಸಾಹದಲ್ಲಿ ಸಿಎಸ್​ಕೆ ಪಡೆ

ಇಂಡಿಯನ್​​ ಪ್ರೀಮಿಯರ್​ ಲೀಗ್​ನಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 27 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಚೆನ್ನೈ 17 ಹಾಗೂ ಕೆಕೆಆರ್​​​​ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ. ವಿಶೇಷವೆಂದರೆ ಈ ಹಿಂದೆ ಎರಡು ಸಲ ಫೈನಲ್​ಗೆ ಲಗ್ಗೆ ಹಾಕಿದ್ದ ಕೋಲ್ಕತ್ತಾ ಚಾಂಪಿಯನ್​ ಆಗಿ ಹೊರಹೊಮ್ಮಿದೆ. 2012ರಲ್ಲಿ ಗಂಭೀರ್​ ನಾಯಕತ್ವದ ಕೋಲ್ಕತ್ತಾ ಪಡೆ ಸಿಎಸ್​​​ಕೆಗೆ ಸೋಲುಣಿಸಿ ಚಾಂಪಿಯನ್​ ಆಗಿತ್ತು. ಇದೀಗ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಇರಾದೆಯಲ್ಲಿದೆ.

KKR Team
ಫೈನಲ್​ ಪಂದ್ಯಕ್ಕಾಗಿ ಕೆಕೆಆರ್​ ಪಡೆ ಸಜ್ಜು

ಇದನ್ನೂ ಓದಿರಿ: ಇದೇ ಮೊದಲ ಸಲ ಬುರ್ಜ್ ಖಲೀಫಾ ಮೇಲೆ ಮಿಂಚಿದ ಟೀಂ ಇಂಡಿಯಾ ಜೆರ್ಸಿ

ಇನ್ನು ದಾಖಲೆಯ 9ನೇ ಸಲ ಐಪಿಎಲ್​ ಫೈನಲ್​​ಗೆ ಲಗ್ಗೆ ಹಾಕಿರುವ ಧೋನಿ ಬಳಗ, ನಾಲ್ಕನೇ ಬಾರಿ ಚಾಂಪಿಯನ್​ ಆಗಿ ಹೊರಹೊಮ್ಮುವ ಇರಾದೆ ಇಟ್ಟುಕೊಂಡಿದೆ. ಉಭಯ ತಂಡದಲ್ಲಿ ಬಲಿಷ್ಠ ಆಟಗಾರರಿದ್ದು, ರನ್​ ಮಳೆ ಹರಿಯುವ ಸಾಧ್ಯತೆ ಇದೆ.

KKR Captain
ಕೋಲ್ಕತ್ತಾ ತಂಡದ ಕ್ಯಾಪ್ಟನ್​ ಮಾರ್ಗನ್​

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಾಳೆ ರಾತ್ರಿ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು, ಪ್ರಮುಖವಾಗಿ ಇಲ್ಲಿ ನಡೆದಿರುವ ಕೊನೆಯ 11 ಪಂದ್ಯಗಳ ಪೈಕಿ ಟಾರ್ಗೆಟ್​ ಬೆನ್ನತ್ತಿರುವ ತಂಡ 9 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.