ಮುಂಬೈ (ಮಹಾರಾಷ್ಟ್ರ) : ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಆರಂಭಕ್ಕೂ ಮುನ್ನ 10ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಂಡಿರುವ ಪಟ್ಟಿಯನ್ನು ನಿನ್ನೆ (ಭಾನುವಾರ) ಬಿಡುಗಡೆ ಮಾಡಿದೆ. ಇದರಲ್ಲಿ ಸಾಕಷ್ಟು ಸ್ಟಾರ್ ಆಟಗಾರರನ್ನು ತಂಡಗಳು ಕೈ ಬಿಟ್ಟಿದ್ದು, ಹರಾಜು ಪ್ರಕ್ರಿಯೆಯಲ್ಲಿದ್ದಾರೆ. ಈ ನಡುವೆ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮರಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿದ್ದಾರೆ. ಇತ್ತ ಭಾರತ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಗುಜರಾತ್ ಟೈಟಾನ್ಸ್ ನಾಯಕನಾಗಿ ನೇಮಕ ಮಾಡಿದೆ.
ಕೆಲ ದಿನಗಳಿಂದ ಕ್ರಿಕೆಟ್ ಗಲ್ಲಿಯಲ್ಲಿ ಸತತ ಎರಡು ಬಾರಿ ಫೈನಲ್ ಪ್ರವೇಶಿಸಿ ಒಂದು ಬಾರಿ ಚಾಂಪಿಯನ್ಸ್, ಮತ್ತೊಂದು ಬಾರಿ ರನ್ನರ್ ಆಪ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮರಳಿ ಮುಂಬೈ ಇಂಡಿಯನ್ಸ್ ಸೇರಲಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿತ್ತು. ಆಟಗಾರರನ್ನು ಉಳಿಸಿಕೊಳ್ಳುವ ಕೊನೆ ದಿನವಾಗಿದ್ದರಿಂದ ಗುಜರಾತ್ ತಾನು ಉಳಿಸಿಕೊಂಡ ಆಟಗಾರ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಹೆಸರನ್ನು ಬಹಿರಂಗಪಡಿಸಿತ್ತು. ಆದರೇ ಸ್ವಲ್ಪ ಸಮಯದ ನಂತರ ಪಾಂಡ್ಯ ಮುಂಬೈ ಸೇರಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
-
𝐂𝐀𝐏𝐓𝐀𝐈𝐍 𝐆𝐈𝐋𝐋 🫡#AavaDe pic.twitter.com/tCizo2Wt2b
— Gujarat Titans (@gujarat_titans) November 27, 2023 " class="align-text-top noRightClick twitterSection" data="
">𝐂𝐀𝐏𝐓𝐀𝐈𝐍 𝐆𝐈𝐋𝐋 🫡#AavaDe pic.twitter.com/tCizo2Wt2b
— Gujarat Titans (@gujarat_titans) November 27, 2023𝐂𝐀𝐏𝐓𝐀𝐈𝐍 𝐆𝐈𝐋𝐋 🫡#AavaDe pic.twitter.com/tCizo2Wt2b
— Gujarat Titans (@gujarat_titans) November 27, 2023
ಹೀಗಾಗಿ ಗುಜರಾತ್ ಟೈಟಾನ್ಸ್ ತಂಡದ ಹೊಣೆಗಾರಿಕೆಯನ್ನು ಯಂಗ್ ಫ್ಲೇಯರ್ ಶುಭಮನ್ ಗಿಲ್ ಅವರ ಹೆಗಲ ಮೇಲಿಟ್ಟಿದೆ. ಈ ಬಗ್ಗೆ ತನ್ನ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿದೆ. ಗಿಲ್ ಕೂಡ ಕಳೆದ ಎರಡು ಆವೃತ್ತಿಗಳಿಂದ ಟೈಟಾನ್ಸ್ ಪರ ಆಡುತ್ತಿದ್ದರು. ತಂಡ ಫೈನಲ್ ಪ್ರಶಿಸುವುದಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಗಿಲ್ ಗುಜರಾತ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಗುಜರಾತ್ ಪರ ಆರಂಭಿಕನಾಗಿ ಕ್ರೀಸ್ಗೆ ಬರುವ ಗಿಲ್ 33 ಇನ್ನಿಂಗ್ಸ್‌ಗಳಲ್ಲಿ 47.34 ಸರಾಸರಿಯಲ್ಲಿ ಮೂರು ಶತಕ ಮತ್ತು ಎಂಟು ಅರ್ಧಶತಕಗಳೊಂದಿಗೆ 1373 ರನ್ ಕಲೆಹಾಕಿದ್ದಾರೆ. ಕಳೆದ ಋತುವಿನಲ್ಲಿ 17 ಪಂದ್ಯಗಳನ್ನು ಆಡಿರುವ ಗಿಲ್ 59.33 ರ ಸರಾಸರಿಯಲ್ಲಿ 890 ರನ್ ಗಳಿಸಿ, ಮೂರು ಶತಕಗಳು ಮತ್ತು ನಾಲ್ಕು ಅರ್ಧಶತಕಗಳೊಂದಿಗೆ ಆರೆಂಜ್ ಕ್ಯಾಪ್ ವಿನ್ನರ್ ಆಗಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧ 60 ಎಸೆತಗಳಲ್ಲಿ 129 ರನ್ ಹೊಡೆದಿದ್ದರು. ಇದು ಐಪಿಎಲ್ ಪ್ಲೇಆಫ್‌ನಲ್ಲಿ ಗರಿಷ್ಠ ರನ್ ಆಗಿದೆ.
-
🚨 CAPTAIN GILL reporting!
— Gujarat Titans (@gujarat_titans) November 27, 2023 " class="align-text-top noRightClick twitterSection" data="
𝐂𝐚𝐩𝐭𝐚𝐢𝐧 𝐒𝐡𝐮𝐛𝐦𝐚𝐧 𝐆𝐢𝐥𝐥 is ready to lead the Titans in the upcoming season with grit and exuberance 👊
Wishing you only the best for this new innings! 🤩#AavaDe pic.twitter.com/PrYlgNBtNU
">🚨 CAPTAIN GILL reporting!
— Gujarat Titans (@gujarat_titans) November 27, 2023
𝐂𝐚𝐩𝐭𝐚𝐢𝐧 𝐒𝐡𝐮𝐛𝐦𝐚𝐧 𝐆𝐢𝐥𝐥 is ready to lead the Titans in the upcoming season with grit and exuberance 👊
Wishing you only the best for this new innings! 🤩#AavaDe pic.twitter.com/PrYlgNBtNU🚨 CAPTAIN GILL reporting!
— Gujarat Titans (@gujarat_titans) November 27, 2023
𝐂𝐚𝐩𝐭𝐚𝐢𝐧 𝐒𝐡𝐮𝐛𝐦𝐚𝐧 𝐆𝐢𝐥𝐥 is ready to lead the Titans in the upcoming season with grit and exuberance 👊
Wishing you only the best for this new innings! 🤩#AavaDe pic.twitter.com/PrYlgNBtNU
ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲು ನಾನು ಸಂತೋಷದೊಂದಿಗೆ ಹೆಮ್ಮೆಪಡುತ್ತೇನೆ. ನಾಯಕತ್ವ ವಹಿಸುವುದರಲ್ಲಿ ನನ್ನ ಮೇಲಿನ ನಂಬಿಕೆಗಾಗಿ ಫ್ರಾಂಚೈಸಿಗೆ ಧನ್ಯವಾದಗಳು. ಉತ್ತಮ ಆಟದ ಮೂಲಕ ತಂಡವನ್ನು ಮುನ್ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಗಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನೊಂದೆಡೆ ಮುಂಬೈಗೆ ಹಾರ್ದಿಕ್ ಪಾಂಡ್ಯ ಆಗಮನದಿಂದ ಆಸ್ಟ್ರೇಲಿಯಾ ಸ್ಟಾರ್ ಯಂಗ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ತಂಡ ಕೈ ಬಿಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗ್ರೀನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಇದನ್ನೂ ಓದಿ : ಮುಂದಿನ ಐಪಿಎಲ್‌ನಲ್ಲಿ ಆಡಲಿದ್ದಾರೆ ಧೋನಿ; ವಿಸಿಲ್ ಪೋಡೆಂದ ಸಿಎಸ್‌ಕೆ ಫ್ಯಾನ್ಸ್