ನವದೆಹಲಿ: ಮಾರ್ಚ್ 31 ರಿಂದ ಐಪಿಎಲ್ ಆರಂಭವಾಗಲಿದೆ. ಐದು ಬಾರಿಯ ಐಪಿಎಲ್ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್‌ಗೆ ಕೀರನ್ ಪೊಲಾರ್ಡ್ ಸ್ಟಾರ್ ಆಟಗಾರರಾಗಿದ್ದರು. ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬ್ಯಾಟರ್ ಆಗಿದ್ದರು. ಆರಂಭಿಕ ಬ್ಯಾಟರ್ಗಳು ರನ್ ಕದಿಯುವಲ್ಲಿ ವಿಫಲರಾದರೆ ಪೊಲಾರ್ಡ್ ತಮ್ಮ ಬ್ಯಾಟಿಂಗ್ ದಾದಾಗಿರಿ ತೋರಿದ್ದಾರೆ.
ವೆಸ್ಟ್ ಇಂಡಿಸ್ನ ಬ್ಯಾಟಿಂಗ್ ದೈತ್ಯ ಪೊಲಾರ್ಡ್ ಈಗ ಮುಂಬೈ ಇಂಡಿಯನ್ಸ್‌ನ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ತಮ್ಮ ಕೋಚ್ ಆಗಿ ನೇಮಿಸಿದೆ. ಇನ್ನು ಮುಂದೆ ಪೊಲಾರ್ಡ್ ಆಟಗಾರರಿಗೆ ಬ್ಯಾಟಿಂಗ್ ಕೌಶಲ ಕಲಿಸಲಿದ್ದಾರೆ. ಅವರು ಹೊಡಿಬಡಿ ಆಟಕ್ಕೆ ಫೇಮಸ್ ಆಗಿರುವುದರಿಂದ ಟಿ20 ಫಾರ್ಮೆಟ್ಗೆ ಸೂಕ್ತ ಕೋಚ್ ಆಗಲಿದ್ದಾರೆ.
ಕೀರಾನ್ ಪೊಲಾರ್ಡ್ ಈಗ ಪೂರ್ಣ ಪ್ರಮಾಣದ ಬ್ಯಾಟಿಂಗ್ ಕೋಚ್ ಪಾತ್ರ ನಿರ್ವಹಿಸಲಿದ್ದಾರೆ. ಈಗಾಗಲೇ ತಂಡ ಸೇರಿರುವ ತಂಡ ಸೇರಿರುವ ಪೊಲಾರ್ಡ್ ತಮ್ಮ ಕೆಲಸವನ್ನು ಶುರು ಹಚ್ಚಿಕೊಂಡಿದ್ದಾರೆ. ಯುವ ಆಟಗಾರರೊಂದಿಗೆ ಬೆರೆಯಲು ಐಪಿಎಲ್ ಉತ್ತಮ ವೇದಿಕೆ ಎಂದು ಪೊಲಾರ್ಡ್ ಹೇಳಿಕೊಂಡಿದ್ದಾರೆ.
-
"Don't call me Coach, 𝐜𝐚𝐥𝐥 𝐦𝐞 𝐏𝐨𝐥𝐥𝐲." 🤜🤛
— Mumbai Indians (@mipaltan) March 21, 2023 " class="align-text-top noRightClick twitterSection" data="
Different role, same character - @KieronPollard55 's transition ✅#OneFamily #MumbaiIndians #IPL2023 #TATAIPL MI TV pic.twitter.com/Brav8Rkxl9
">"Don't call me Coach, 𝐜𝐚𝐥𝐥 𝐦𝐞 𝐏𝐨𝐥𝐥𝐲." 🤜🤛
— Mumbai Indians (@mipaltan) March 21, 2023
Different role, same character - @KieronPollard55 's transition ✅#OneFamily #MumbaiIndians #IPL2023 #TATAIPL MI TV pic.twitter.com/Brav8Rkxl9"Don't call me Coach, 𝐜𝐚𝐥𝐥 𝐦𝐞 𝐏𝐨𝐥𝐥𝐲." 🤜🤛
— Mumbai Indians (@mipaltan) March 21, 2023
Different role, same character - @KieronPollard55 's transition ✅#OneFamily #MumbaiIndians #IPL2023 #TATAIPL MI TV pic.twitter.com/Brav8Rkxl9
"ಮುಂಬೈ ಇಂಡಿಯನ್ಸ್‌ಗಾಗಿ ಆಡುವ ಮತ್ತು ಮುಂಬೈ ಜನರನ್ನು ಪ್ರತಿನಿಧಿಸುವ ಭಾವನೆಯನ್ನು ವಿವರಿಸಲು ಪದಗಳು ಕಡಿಮೆಯಾಗಿವೆ. ಅವರು ನನಗಾಗಿ ಬಹಳಷ್ಟು ಮಾಡಿದ್ದಾರೆ ಮತ್ತು ಆಟಗಾರನಾಗಿ ನಾನು ಅವರಿಗಾಗಿ ಸಾಕಷ್ಟು ಮಾಡಿದ್ದೇನೆ. ಈ ಸಂಬಧ ಕ್ರಿಕೆಟ್ ಪಂದ್ಯಗಳಿಗಿಂತ ಹೆಚ್ಚು. ನನಗೆ ಏನೂ ಬದಲಾಗಿಲ್ಲ, ನಾನು ಆಟಗಾರರ ಸುತ್ತ ಅದೇ ವ್ಯಕ್ತಿಯಾಗಿರುತ್ತೇನೆ" ಎಂದಿದ್ದಾರೆ.
ಇದನ್ನೂ ಓದಿ: ಸ್ಟಾರ್ ಆಟಗಾರರಿಗೆ ಗಾಯದ ಸಮಸ್ಯೆ: ಈ ಬಾರಿಯ ಐಪಿಎಲ್ಗೆ ಯಾರೆಲ್ಲಾ ಮಿಸ್ ಆಗುತ್ತಾರೆ?
ಮುಂಬೈ ಇಂಡಿಯನ್ಸ್‌ನ ಯುವ ಆಟಗಾರರು ತಂಡದೊಂದಿಗೆ ಪೊಲಾರ್ಡ್ ಉಪಸ್ಥಿತಿಯ ಬಗ್ಗೆ ಹಂಚಿಕೊಂಡಿದ್ದಾರೆ. ತಿಲಕ್ ವರ್ಮಾ ಅವರು ತಮ್ಮ ಸಂದರ್ಶನವೊಂದರಲ್ಲಿ, 'ಕಳೆದ ವರ್ಷ ನಾನು ಅವರೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಂಡಿದ್ದೆ. ಈಗ ಅವರು ನಮ್ಮ ಬ್ಯಾಟಿಂಗ್ ಕೋಚ್ ಆಗಿದ್ದಾರೆ, ನಾನು ತುಂಬಾ ಉತ್ಸುಕನಾಗಿದ್ದೇನೆ. ಕಳೆದ ಋತುವಿನಲ್ಲಿ ಪೊಲಾರ್ಡ್ ಅವರೊಂದಿಗೆ ಹಲವು ಪಂದ್ಯಗಳನ್ನು ಆಡಿದ್ದ ಡೆವಾಲ್ಡ್ ಬ್ರೂವಿಸ್, 'ನಾನು ಇಂದು ನೆಟ್‌ಗೆ ಇಳಿದಾಗ, ಪೌಲಿ ನನ್ನ ಹಿಂದೆ ನಿಂತಿದ್ದರು. ನನ್ನ ಮೊದಲ ವರ್ಷದಲ್ಲಿ ನಾನು ನೆಟ್ ಸೆಷನ್‌ಗಾಗಿ ಇಲ್ಲಿಗೆ ಬಂದಾಗ, ನಾನು ಅವನೊಂದಿಗೆ ಬ್ಯಾಟಿಂಗ್ ಮಾಡಿದೆ ಎಂದು ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಐಪಿಎಲ್ ನಿವೃತ್ತಿ: ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟ್ಸ್‌ಮನ್ ಕೀರಾನ್ ಪೊಲಾರ್ಡ್ ಈ ಬಾರಿ ಐಪಿಎಲ್ ಆಡುವುದಿಲ್ಲ. ಮಂಗಳವಾರ, ಮಾರ್ಚ್ 21 ರಂದು ಮಾಜಿ ನಾಯಕ ಪೊಲಾರ್ಡ್ ಇಂಡಿಯನ್ ಲೀಗ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈಗ ಪೊಲಾರ್ಡ್ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳಿಗೆ ತರಬೇತಿ ನೀಡುತ್ತಿದ್ದಾರೆ.
ಐದನೇ ತಂಡ ಖರೀದಿಸಿದ ಮುಂಬೈ: ಮುಂಬೈ ಇಂಡಿಯನ್ಸ್ ಅಮೆರಿಕದಲ್ಲಿ ನಡೆಯುತ್ತಿರುವ ಲೀಗ್ ಪಂದ್ಯದಲ್ಲಿ ತಂಡವನ್ನು ಖರೀದಿ ಮಾಡಿದೆ. ಈ ಮೂಲಕ ಐದನೇ ತಂಡವನ್ನು ಎಂಐ ಮಾಡಿದೆ. ಮುಂಬೈ ಇಂಡಿಯನ್ಸ್ (IPL), ಎಂಐ ಕೇಪ್ ಟೌನ್ (SA20), ಎಂಐ ಎಮಿರೇಟ್ಸ್ (ILT20), ಮತ್ತು ಮುಂಬೈ ಇಂಡಿಯನ್ಸ್ ವನಿತೆಯರು (WPL) ನಂತರ MI ನ್ಯೂಯಾರ್ಕ್ ಐದನೇ ಫ್ರಾಂಚೈಸ್ ಆಗಿರುತ್ತದೆ. ಮೂರು ವಿಭಿನ್ನ ಖಂಡಗಳಲ್ಲಿ, ನಾಲ್ಕು ವಿಭಿನ್ನ ದೇಶಗಳಲ್ಲಿ ಮತ್ತು ಐದು ವಿಭಿನ್ನ ಲೀಗ್‌ಗಳಲ್ಲಿ ಭಾಗವಹಿಸುತ್ತಿದೆ.
ಇದನ್ನೂ ಓದಿ: ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆಲ್ರೌಂಡರ್ ಕೀರನ್ ಪೊಲಾರ್ಡ್