ETV Bharat / sports

ಐಪಿಎಲ್​ನಲ್ಲಿ ಧೋನಿ ಪರಂಪರೆ ಅಂತ್ಯ: ಮ್ಯಾಥ್ಯೂ ಹೇಡನ್

author img

By

Published : Mar 10, 2023, 8:26 PM IST

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ - ಕೂಲ್​ ಕ್ಯಾಪ್ಟನ್​ ಧೋನಿಗೆ ಕೊನೆಯ ಆವೃತ್ತಿ - ಅದ್ಧೂರಿ ವಿದಾಯಕ್ಕೆ ಸಿಎಸ್​ಕೆ ಚಿಂತನೆ

end of the MS Dhoni legacy
ಐಪಿಎಲ್​ನಲ್ಲಿ ಧೋನಿ ಪರಂಪರೆ ಅಂತ್ಯ: ಮ್ಯಾಥ್ಯೂ ಹೇಡನ್

ನವದೆಹಲಿ: 41 ವರ್ಷದ ಮಹೇಂದ್ರ ಸಿಂಗ್​ ಧೋನಿಗೆ ಇದು ಕೊನೆಯ ಐಪಿಎಲ್​ ಎಂದು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು, ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಮಾತುಗಳು ಈ ವೈರಲ್​ ವಿಚಾರಕ್ಕೆ ಹೆಚ್ಚಿನ ಪುಷ್ಠಿ ನೀಡಿದೆ. 2023ರ ಐಪಿಎಲ್​ ಬಗ್ಗೆ ಮಾತನಾಡಿರುವ ಅವರು ಈ ವರ್ಷದ ಐಪಿಎಲ್ ಧೋನಿಯ ಸಲುವಾಗಿ​ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ.

ಇನ್ನು 21 ದಿನದಲ್ಲಿ ಭಾರತದಲ್ಲಿ ಪುರುಷರ ಐಪಿಎಲ್​ ಆರಂಭವಾಗಲಿದೆ. ಈಗಾಗಲೇ ಐಪಿಎಲ್​​ ಪ್ರಚಾರ ಆರಂಭವಾಗಿದ್ದು, ಸ್ಟಾರ್​ ಸ್ಪೋರ್ಟ್​ ಬಿಡುಗಡೆ ಮಾಡಿರುವ ಪ್ರಮೋಷನ್​ ವಿಡಿಯೋ ವೈರಲ್​ ಆಗಿದೆ. ಚೊಚ್ಚಲ ಮಹಿಳಾ ಐಪಿಎಲ್​ ಭರ್ಜರಿಯಾಗಿ ಸಾಗುತ್ತಿದ್ದು, ಐಪಿಎಲ್​ಗೂ ಮುನ್ನ ಜನರನ್ನು ಟೀವಿ ಮುಂದೆ ಕರೆ ತಂದಿದೆ. ಪ್ರಥಮ ಆವೃತ್ತಿಯ ಮಹಿಳೆಯರ ಲೀಗ್​ನಲ್ಲಿ ಸಿಕ್ಸ್​, ಫೋರ್​ಗಳಿಂದ ಬೃಹತ್​ ರನ್​ ಹರಿದು ಬರುತ್ತಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬಹುತೇಕ ಸದಸ್ಯರು ಹೋಮ್​ ಗೌಂಡ್​ನಲ್ಲಿ ಸೇರಿ ಅಭ್ಯಾಸ ಆರಂಭಿಸಿದ್ದಾರೆ. ಇದೇ ತಿಂಗಳ ಎರಡರಂದು ಧೋನಿ ತಂಡವನ್ನು ಸೇರಿದ್ದರು. ಧೋನಿ ನೆಟ್​ನಲ್ಲಿ ಭರ್ಜರಿ ಬೆವರಿಳಿಸುತ್ತಿದ್ದಾರೆ. ಧೋನಿ ಜೊತೆಗೆ ವಿದೇಶಿ ಆಟಗಾರರು ತಂಡಕ್ಕೆ ಸೇರಿಕೊಂಡಿದ್ದು, ಎಂಎ ಚಿದಂಬರಂ ಸ್ಟೇಡಿಯಂ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಮಾತನಾಡಿ,"ಐಪಿಎಲ್​ ಆರಂಭವಾಗುತ್ತಿದೆ, ಎಲ್ಲೆಡೆ ಮತ್ತೆ ಚೆನ್ನೈನ ಹಳದಿ ಹಬ್ಬ ಪ್ರಾರಂಭವಾಗುತ್ತದೆ. ಚೆನ್ನೈನಲ್ಲಿ ಹಳದಿ ಸೇನೆಯ ಆಟಕ್ಕೆ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ತವರು ನೆಲದಲ್ಲಿ ತಂಡದ ಗೆಲುವಿಗೆ ಬೆಂಬಲಿಸಲು ಪ್ರೇಕ್ಷಕರು ತುದಿಗಾಲಿನಲ್ಲಿದ್ದಾರೆ. ಕೋವಿಡ್​ ಬಂಧನದ ರಿಲ್ಯಾಕ್ಸ್​ ಆಗಲು ಪ್ರೇಕ್ಷಕರಿಗೆ ಐಪಿಎಲ್​ ಬೃಹತ್​ ಮನರಂಜನೆಯಾಗಿರಲಿದೆ" ಎಂದಿದ್ದಾರೆ.

ಧೋನಿ ನಾಯಕತ್ವದ ಬಗ್ಗೆ ಮಾತನಾಡಿದ ಹೇಡನ್​," ತವರು ನೆಲದಲ್ಲಿ ಸಿಎಸ್​ಕೆ ಸಾಧನೆ ಉತ್ತಮವಾಗಿದೆ. ಕೊನೆಯ ಬಾರಿಗೆ ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ಈ ಸಲ ಕಣಕ್ಕಿಳಿಯುತ್ತಿದೆ ಇದನ್ನೂ ಎಂದೂ ಮರೆಯಲು ಸಾಧ್ಯವಿಲ್ಲ" ಎಂದಿದ್ದಾರೆ. ಈ ಮೂಲಕ ಧೋನಿ ನಾಯಕರಾಗಿ ತಂಡವನ್ನು ಮುನ್ನಡೆಸಲಿರುವುದು ಪಕ್ಕಾ ಆಗಿದೆ. ಹೋದ ಆವೃತ್ತಿಯಲ್ಲಿ ಜಡೇಜಗೆ ಕ್ಯಾಪ್ಟನ್ ಸ್ಥಾನ ಕೊಡಲಾಗಿತ್ತು ಸತತ ಸೋಲಿನ ನಂತರ ಧೋನಿಯನ್ನು ಮತ್ತೆ ನಾಯಕರನ್ನಾಗಿ ಮಾಡಲಾಗಿತ್ತು. ಚೆನ್ನೈ ತಂಡ ಇದುವರೆಗೂ ನಾಯಕ ಯಾರೆಂದು ಘೋಷಿಸಿಲ್ಲ.

ನಾಲ್ಕು ಬಾರಿ ಚೆನ್ನೈ ಸೂಪರ್​ ಕಿಂಗ್ಸ್​​ನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದ ನಾಯಕ ಧೋನಿಗೆ ಸೂಕ್ತ ವಿದಾಯ ನೀಡಲು ಯೋಜಿಸಲಾಗಿದೆ ಎಂದು ಹೇಡನ್ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. "ವಿಶೇಷವಾಗಿ ಚೆಪಾಕ್‌ನ ಅಭಿಮಾನಿಗಳಿಗೆ ವಿದಾಯ ಹೇಳಲು ಈ ಐಪಿಎಲ್‌ನಲ್ಲಿ ಊಹಿಸಲು ಸಾಧ್ಯವಾಗದ ರೀತಿಯ ವಿಶೇಷತೆ ಕಾದಿದೆ" ಎಂದಿದ್ದಾರೆ.

"ಧೋನಿ ಅಭಿಮಾನಿಗಳಿಗೆ ಈ ವರ್ಷ ವಿಶೇಷವಾಗಿರಲಿದೆ. ಅಲ್ಲದೇ ಎಂಎಸ್ ಧೋನಿಗೆ ನಿರ್ದಿಷ್ಟವಾಗಿ ಈ ವರ್ಷ ಹೆಚ್ಚು ವಿಶೇಷವಾಗಿ ಆಚರಿಸಿಲಾಗುತ್ತದೆ. ಇದು ಪ್ರೀಮಿಯರ್​ ಲೀಗ್​ನಲ್ಲಿ ಎಂಎಸ್ ಧೋನಿಯ ಪರಂಪರೆಯ ಜರ್ನಿಯ ಕೊನೆಯ ಆವೃತ್ತಿಯಾಗಿದೆ. ಅವರು ತಮ್ಮದೇ ಶೈಲಿಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸುತ್ತಾರೆ" ಎಂದಿದ್ದಾರೆ.

ಇದನ್ನೂ ಓದಿ: ಮಹಿಳಾ ಪ್ರೀಮಿಯರ್​ ಲೀಗ್:​ ಪ್ಲೇ ಆಫ್‌​ ಹಂತ ತಲುಪುತ್ತಾ RCB? ಹೀಗಿದೆ ಲೆಕ್ಕಾಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.