ETV Bharat / sports

ರಾಯುಡು ಆಟ ವ್ಯರ್ಥ.. ಧವನ್​ ಬ್ಯಾಟಿಂಗ್​,ಸಂಘಟಿತ ಬೌಲಿಂಗ್​​ ಪ್ರದರ್ಶನದಿಂದ ಚೆನ್ನೈ ವಿರುದ್ಧ ಗೆದ್ದ ಪಂಜಾಬ್​​ -

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಪಂಜಾಬ್​ 11ರನ್​ಗಳ ರೋಚಕ ಗೆಲುವು ದಾಖಲು ಮಾಡಿದೆ. ಪಂಜಾಬ್​ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದು ಕೊನೆಯ ಓವರ್​ ವರೆಗೂ ಬ್ಯಾಟಿಂಗ್ ಮಾಡಿದ ಶಿಖರ್ ಧವನ್​ 59 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 88 ರನ್​ಗಳಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಚೆನ್ನೈಗೆ 188ರನ್​ಗಳ ಸವಾಲಿನ ಗುರಿ ನೀಡಿದ ಪಂಜಾಬ್ ಕಿಂಗ್ಸ್

author img

By

Published : Apr 25, 2022, 7:17 PM IST

Updated : Apr 26, 2022, 12:47 AM IST

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಇಂದಿನ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಪಂಜಾಬ್​ 11 ರನ್​ಗಳ ರೋಚಕ ಗೆಲುವು ದಾಖಲು ಮಾಡಿದ್ದು, ಪಾಯಿಂಟ್​ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಮಯಾಂಕ್​​ ಬಳಗ ಶಿಖರ್ ಧವನ್(88)​ ಅರ್ಧಶತಕ ಮತ್ತು ರಾಜಪಕ್ಷ ಅವರ 42 ರನ್​ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ 187 ರನ್​ಗಳಿಸಿತು.

188ರನ್​ಗಳ ಗುರಿ ಬೆನ್ನತ್ತಿದ ಜಡೇಜಾ ನೇತೃತ್ವದ ಸಿಎಸ್​ಕೆ ತಂಡ ಅಂಬಾಟಿ ರಾಯುಡು(78) ಸ್ಫೋಟಕ ರನ್​ಗಳ ಹೊರತಾಗಿ ಕೂಡ 20 ಓವರ್​ಗಳಲ್ಲಿ 6ವಿಕೆಟ್​ ಕಳೆದುಕೊಂಡು 176ರನ್​ಗಳಿಸಿ, 11 ರನ್​ಗಳ ಸೋಲು ಕಂಡಿದೆ.

ಪಂಜಾಬ್​ ಇನ್ನಿಂಗ್ಸ್​: ಟಾಸ್​ ಸೋತು ಬ್ಯಾಟಿಂಗ್ ಇಳಿದಿದ್ದ ಪಂಜಾಬ್ ಕಿಂಗ್ಸ್ ಧವನ್​ ಮತ್ತು ಅಗರ್ವಾಲ್​ ಮೊದಲ ವಿಕೆಟ್​ಗೆ 37 ರನ್​ಗಳ ಜೊತೆಯಾಟ ನೀಡಿದರು. ಆದರೆ ನಾಯಕ ಧವನ್​ 18 ರನ್​ಗಳಿಸಿ ಪವರ್​ ಪ್ಲೇನ ಕೊನೆಯ ಓವರ್​ನಲ್ಲಿ ತೀಕ್ಷಣಗೆ ವಿಕೆಟ್ ಒಪ್ಪಿಸಿದರು. ನಂತರ 2ನೇ ವಿಕೆಟ್​ಗೆ ಒಂದಾದ ಧವನ್​ ಮತ್ತು ರಾಜಪಕ್ಷ 110 ರನ್​ಗಳ ಭರ್ಜರಿ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ರಾಜಪಕ್ಷ 32 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 42 ರನ್​ಗಳಿಸಿ ಔಟಾದರು. ನಂತರ ಬಂದ ಲಿವಿಂಗ್​ಸ್ಟೋನ್​ ಕೇವಲ 7 ಎಸೆತಗಳಲ್ಲಿ 19 ರನ್​ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಆರಂಭಿಕನಾಗಿ ಕಣಕ್ಕಿಳಿದು ಕೊನೆಯ ಓವರ್​ ವರೆಗೂ ಬ್ಯಾಟಿಂಗ್ ಮಾಡಿದ ಶಿಖರ್ ಧವನ್​ 59 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 88 ರನ್​ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ 42ಕ್ಕೆ 2 ಮತ್ತು ತೀಕ್ಷಣ 32ಕ್ಕೆ 1 ವಿಕೆಟ್ ಪಡೆದರು.

ಸಿಎಸ್​ಕೆ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಉತ್ತಪ್ಪ (1) ಆರಂಭದಲ್ಲೇ ವೈಫಲ್ಯ ಅನುಭವಿಸಿದರು. ಉಳಿದಂತೆ ಸ್ಯಾಟ್ನರ್​(9) ದುಬೆ(8) ಕೂಡ ನಿರಾಸೆ ಮೂಡಿಸಿದರು. ಕೊನೆಯ ಪಂದ್ಯದಲ್ಲಿ ಮಿಂಚಿದ ಧೋನಿ ಕೂಡ 12ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. ಪಂಜಾಬ್​ ಪರ ರಿಷಿ ಧವನ್​, ರಬಾಡಾ ತಲಾ 2ವಿಕೆಟ್​ ಪಡೆದರೆ, ಸಂದೀಪ್​ ಶರ್ಮಾ ಹಾಗೂ ಅರ್ಷದೀಪ್​ ತಲಾ 1ವಿಕೆಟ್​ ಪಡೆದರು.

ಈ ಪಂದ್ಯದಲ್ಲಿ ಸಿಎಸ್​ಕೆ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿತ್ತು. ಆದರೆ, ಪಂಜಾಬ್ 3 ಬದಲಾವಣೆ ಮಾಡಿಕೊಂಡಿದೆ. ರಾಜಪಕ್ಷ, ಸಂದೀಪ್ ಶರ್ಮಾ ಮತ್ತು ರಿಷಿ ಧವನ್​ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಸೋಲು ಮತ್ತು 2 ಗೆಲುವು ಕಂಡಿದ್ದರೆ, ಪಂಜಾಬ್ 4 ಸೋಲು ಮೂರು ಗೆಲುವು ಸಾಧಿಸಿದೆ.

ಮುಖಾಮುಖಿ: ಎರಡೂ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ 15-11ರಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ:ಕೊಹ್ಲಿ ನಂತರ ಐಪಿಎಲ್​ನಲ್ಲಿ ​6000 ರನ್​ಗಳ ಗಡಿ ದಾಟಿದ 2ನೇ ಬ್ಯಾಟರ್​ ಶಿಖರ್​ ಧವನ್

Last Updated : Apr 26, 2022, 12:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.