ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯಲ್ಲಿ ಎಲ್ಲ ತಂಡಗಳು ಕಣಕ್ಕಿಳಿದು, ತಮ್ಮ ಪ್ರದರ್ಶನ ನೀಡಲು ಶುರು ಮಾಡಿವೆ. ಕೆಲವೊಂದು ತಂಡಗಳು ಉತ್ತಮ ಆಟವಾಡ್ತಿದ್ದು, ಇನ್ನೂ ಕೆಲ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆಯಬೇಕಾಗಿದೆ. ಇಲ್ಲಿಯವರೆಗಿನ ಮಾಹಿತಿ ಪ್ರಕಾರ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
![IPL 2022 Points Table](https://etvbharatimages.akamaized.net/etvbharat/prod-images/14965185_thumbnail.jpg)
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ನಿನ್ನೆಯ ಪಂದ್ಯದಲ್ಲಿ ರೋಚಕ ಗೆಲುವು ದಾಖಲು ಮಾಡಿರುವ ಲಖನೌ ಸೂಪರ್ ಜೈಂಟ್ಸ್ ತಂಡ ಇದೀಗ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲು ಕಂಡಿದ್ದ ರಾಹುಲ್ ಪಡೆ, ತದನಂತರ ತಾನು ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಉಳಿದಂತೆ, ರಾಜಸ್ಥಾನ ರಾಯಲ್ಸ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆದ್ದು ಮೂರನೇ ಸ್ಥಾನದಲ್ಲಿದ್ದು, ಗುಜರಾತ್ ತಂಡ ಎರಡೂ ಪಂದ್ಯ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ ಪಂಜಾಬ್ 5ನೇ ಸ್ಥಾನ, ರಾಯಲ್ ಚಾಲೆಂಜರ್ಸ್ ಬೆಂಗಳೂರು 6ನೇ ಸ್ಥಾನದಲ್ಲಿವೆ. ಮೂರು ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ 7ನೇ ಸ್ಥಾನದಲ್ಲಿದ್ದು, ಇಲ್ಲಿಯವರೆಗೆ ಆಡಿರುವ ಮೂರು ಪಂದ್ಯಗಳಿಂದ ಖಾತೆ ತೆರೆಯದ ಚೆನ್ನೈ, ಮುಂಬೈ ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿವೆ. ಸನ್ರೈಸರ್ಸ್ ಹೈದರಾಬಾದ್ ಕೊನೆಯ ಸ್ಥಾನದಲ್ಲಿದೆ.
![IPL 2022 Points Table](https://etvbharatimages.akamaized.net/etvbharat/prod-images/14965185_thum.jpg)
ಪರ್ಪಲ್ ಕ್ಯಾಪ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಉಮೇಶ್ ಯಾದವ್ ಆಡಿರುವ ಮೂರು ಪಂದ್ಯಗಳಿಂದ 9 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಉಳಿದಂತೆ ರಾಜಸ್ಥಾನ ತಂಡದ ಯಜುವೇಂದ್ರ ಚಹಲ್, ಲಖನೌ ತಂಡದ ಆವೇಶ್ ಖಾನ್ 7 ವಿಕೆಟ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಪಂಜಾಬ್ ತಂಡದ ರಾಹುಲ್ ಚಹಲರ್ ಹಾಗೂ ಡೆಲ್ಲಿ ತಂಡದ ಕುಲ್ದೀಪ್ ಯಾದವ್ ತಲಾ 6ವಿಕೆಟ್ ಪಡೆದುಕೊಂಡಿದ್ದು, ಪೈಪೋಟಿ ನೀಡುತ್ತಿದ್ದಾರೆ.
![IPL 2022 Points Table](https://etvbharatimages.akamaized.net/etvbharat/prod-images/14965185_twdfdfdf.jpg)
ಆರೆಂಜ್ ಕ್ಯಾಪ್: 15ನೇ ಆವೃತ್ತಿ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಪೈಕಿ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಮೊದಲ ಸ್ಥಾನದಲ್ಲಿದ್ದಾರೆ. ಆಡಿರುವ ಮೂರು ಪಂದ್ಯಗಳಿಂದ 205ರನ್ ಕಲೆ ಹಾಕಿದ್ದು, ಆರೆಂಜ್ ಕ್ಯಾಪ್ ತಮ್ಮ ಬಳಿ ಉಳಿಸಿಕೊಂಡಿದ್ದಾರೆ. ತದನಂತರದ ಸ್ಥಾನದಲ್ಲಿ ಲಖನೌ ತಂಡದ ಕ್ವಿಂಟನ್ ಡಿಕಾಕ್ 149ರನ್, ಮುಂಬೈ ಇಂಡಿಯನ್ಸ್ ತಂಡದ ಇಶಾನ್ ಕಿಶನ್ 149ರನ್ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.