ನವದೆಹಲಿ: ಐಪಿಎಲ್ ಮುಂದಿನ ಅವಧಿಯಲ್ಲಿ ಪಾಲ್ಗೊಳ್ಳಲು ನೂತನ ಫ್ರಾಂಚೈಸಿಗಳಾದ ಲಖನೌ ಮತ್ತು ಅಹ್ಮದಾಬಾದ್‌ಗೆ ಬಿಸಿಸಿಐ ಅಧಿಕೃತ ಅನುಮತಿ ನೀಡಿದೆ. ಎರಡೂ ತಂಡಗಳಿಗೆ ಆಟಗಾರರ ಡ್ರಾಪ್ ಮಾಡಿಕೊಳ್ಳಲು ಎರಡು ವಾರ ಗಡುವು ನೀಡಿದೆ.
2022 ರಿಂದ 10 ತಂಡಗಳ ಐಪಿಎಲ್ ಲೀಗ್ ನಡೆಯಲಿದೆ. ಈಗಾಗಲೇ ಹೊಸ ತಂಡಗಳನ್ನು ಬಿಟ್ಟು ಎಲ್ಲಾ ತಂಡಗಳು ತಮಗೆ ಬೇಕಾದಂತಹ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ. ಈ ವರ್ಷ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಈ ಕುರಿತು ಎಎನ್ಐ ಜೊತೆ ಮಾತನಾಡಿರುವ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್, "ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು13, 2022ರಂದು ನಡೆಸಲು ನಿರ್ಧರಿಸಲಾಗಿದೆ" ಎಂದು ತಿಳಿಸಿದರು.
ಲಖನೌ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳಿಗೆ ಎಲ್ಲಾ ಔಪಚಾರಿಕ ಪತ್ರಗಳನ್ನು ನೀಡಲಾಗಿದೆ. ಇದರ ಜೊತೆಗೆ ತಲಾ ಮೂರು ಆಟಗಾರರನ್ನು ನೇರ ಆಯ್ಕೆ ಮಾಡಿಕೊಳ್ಳುವುದಕ್ಕೆ ಐಪಿಎಲ್ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಎರಡು ವಾರಗಳ ಗಡುವು ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2022ರ ಇಂಡಿಯನ್ ಪ್ರೀಮಿಯರ್ ಲೀಗ್ನ ಶೀರ್ಷಿಕೆ ಪ್ರಾಯೋಜಕತ್ವವನ್ನು ಭಾರತದ ದೈತ್ಯ ಉದ್ಯಮ ಸಂಸ್ಥೆ ಟಾಟಾ ಸಮೂಹ ಪಡೆದುಕೊಂಡಿದೆ.
ಇದನ್ನೂ ಓದಿ:ವಿವೋ ಐಪಿಎಲ್ ಅಲ್ಲ, ಮುಂದಿನ ವರ್ಷ ಟಾಟಾ ಐಪಿಎಲ್