ETV Bharat / sports

ಧೋನಿ ಮಿಂಚಿನ ಬ್ಯಾಟಿಂಗ್​.. 131 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದ ಸಿಎಸ್​ಕೆ - ಸಿಎಸ್​ಕೆ ಸಾಧಾರಣ ಮೊತ್ತ

IPL 2022.. ಸಿಎಸ್​ಕೆ ತಂಡದ ವಿಕೆಟ್​ ಉರುಳುತ್ತಿದ್ದರೂ ಮಾಜಿ ನಾಯಕ ಮಹೇಂದ್ರ ಸಿಂಗ್​ ದೃಢವಾಗಿ ನಿಂತು ಬಹುದಿನಗಳ ಬಳಿಕ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ಸಿಎಸ್​ಕೆ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 131 ರನ್ ಗಳಿಸಿದೆ.

CSK score
ಸಿಎಸ್​ಕೆ
author img

By

Published : Mar 26, 2022, 9:37 PM IST

ಮುಂಬೈ: ಐಪಿಎಲ್​ 15 ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ಅರ್ಧಶತಕದ ಬಲದಿಂದ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ 5 ವಿಕೆಟ್​ ನಷ್ಟಕ್ಕೆ 131 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಜಡೇಜಾ ನೇತೃತ್ವದ ಪಡೆಯನ್ನು ಕೋಲ್ಕತ್ತಾ ಬೌಲರ್​ಗಳು ರನ್​ ಗಳಿಸದಂತೆ ನಿಯಂತ್ರಿಸಿದರು. ಸಿಎಸ್​ಕೆ ಪರ ಆರಂಭಿಕರಾಗಿ ಬ್ಯಾಟಿಂಗ್​ಗೆ​ ಇಳಿದ ಕಳೆದ ಆವೃತ್ತಿಯ ಹೀರೋ ಋತುರಾಜ್​ ಗಾಯಕ್ವಾಡ್​(0) ಮೊದಲ ಓವರ್​ನ ಮೂರನೇ ಎಸೆತದಲ್ಲೇ ಡಕೌಟ್​ ಆದರು. ಇದರ ಬೆನ್ನಲ್ಲೇ ಡೆವೋನ್​ ಕಾನ್ವಾಯ್​(3) ಕೂಡ ಪೆವಿಲಿಯನ್​ ಸೇರಿದರು.

ಬಳಿಕ ಕ್ರೀಸ್​ಗಿಳಿದ ರಾಬಿನ್​ ಉತ್ತಪ್ಪ(28), ಅಂಬಾಟಿ ರಾಯುಡು(15) ರನ್​ ಗಳಿಸಿ ತಂಡಕ್ಕೆ ನೆರವಾದರು. ಶಿವಂ ದುಬೆ(3)ಬಂದಷ್ಟೇ ವೇಗವಾಗಿ ವಾಪಸಾದರು.

ಧೋನಿ ಅರ್ಧಶತಕ: 2 ದಿನಗಳ ಹಿಂದಷ್ಟೇ ನಾಯಕತ್ವದಿಂದ ಹಿಂದೆ ಸರಿದಿದ್ದ ಮಹೇಂದ್ರ ಸಿಂಗ್​ ಧೋನಿ ಈ ಪಂದ್ಯದಲ್ಲಿ ರಾರಾಜಿಸಿದರು. ತಂಡದ ಬ್ಯಾಟಿಂಗ್​ ಬಲವಾಗಿರುವ ಯುವಕರು ಪೆವಿಲಿಯನ್​ ಪರೇಡ್​ ನಡೆಸುತ್ತಿದ್ದರೆ, ಹಿರಿಯ ಆಟಗಾರ ಯುವಕರನ್ನೇ ನಾಚಿಸುಂತೆ ಬ್ಯಾಟ್ ಬೀಸಿದರು. 7 ಬೌಂಡರಿ 1 ಸಿಕ್ಸರ್​ ಸಮೇತ ಬರೋಬ್ಬರಿ 50 ರನ್​ ಗಳಿಸಿದರು.

ತಂಡದ ನಾಯಕತ್ವ ವಹಿಸಿಕೊಂಡಿರುವ ರವೀಂದ್ರ ಜಡೇಜಾ 26 ರನ್​ ಗಳಿಸಿ ಧೋನಿಗೆ ಸಾಥ್​ ನೀಡಿದರು. ಅಂತಿಮವಾಗಿ ಸಿಎಸ್​ಕೆ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 131 ರನ್​ ಗಳಿಸಿತು.

ಕೋಲ್ಕತ್ತಾ ನೈಟ್​ ರೈಡರ್ಸ್​ ಪರ ಉಮೇಶ್​ ಯಾದವ್​ 2, ವರುಣ್​ ಚಕ್ರವರ್ತಿ, ಆಂಡ್ರೆ ರಸೆಲ್​ ತಲಾ ಒಂದು ವಿಕೆಟ್​ ಪಡೆದರು. ವಿಕೆಟ್​ ಪಡೆಯದಿದ್ದರೂ ಸುನೀಲ್​ ನರೈನ್​ 4 ಓವರ್​ಗಳ ಕೋಟಾದಲ್ಲಿ 15 ರನ್​ ನೀಡಿ ರನ್​ ನಿಯಂತ್ರಿಸಿದರು.

ಓದಿ: IPL ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಕ್ರಿಕೆಟಿಗರ ಪಟ್ಟಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.