ಅಹ್ಮದಾಬಾದ್: 14ನೇ ಆವೃತ್ತಿಯ ಐಪಿಎಲ್ ರದ್ದಾಗುತ್ತಿದ್ದಂತೆ ಎಲ್ಲ ಆಟಗಾರರು ತವರಿನತ್ತ ಪಯಣ ಬೆಳೆಸಿದ್ದಾರೆ. ದಕ್ಷಿಣ ಆಫ್ರಿಕಾ ಆಟಗಾರರು ಕೂಡ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖಚಿತಪಡಿಸಿದೆ.
" ನಮ್ಮ ಎಲ್ಲ ಸಿಬ್ಬಂದಿಯನ್ನು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಿಸಿಸಿಐ ಮತ್ತು ಆಯಾ ಕ್ರಿಕೆಟ್ ಮಂಡಳಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ.ಆ ದೇಶದ ಕೇಂದ್ರಸ್ಥಾನಗಳಿಂದ ಅವರವರ ನಗರಗಳಿಗೆ ಸಾಗುತ್ತಿರುವ ಕ್ರಿಕೆಟಿಗರು ನಾವು ನೀಡಿರುವ ಕಠಿಣ ಎಸ್ಒಪಿಗಳನ್ನು ಪಾಲಿಸಬೇಕಾಗಿದೆ. ಅವರು ಮನೆ ತಲುಪುವವರೆಗೂ ನಾವು ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ" ಎಂದು ಆರ್ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶಿ ಆಟಗಾರರನ್ನು ಕೂಡ ಬಿಸಿಸಿಐ ಮಾರ್ಗದರ್ಶನದಲ್ಲಿ ಚಾರ್ಟೆಡ್ ಫ್ಲೈಟ್ ಮೂಲಕ ಕಳುಹಿಸಿಕೊಡಲು ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.
ಆಸ್ಟ್ರೇಲಿಯಾ ಆಟಗಾರರು ಮಾಲ್ಡೀವ್ಸ್ಗೆ ಸೇರಿಕೊಂಡಿದ್ದು, ಆಸ್ಟ್ರೇಲಿಯಾ ಗಡಿ ತೆರೆಯುವವರೆಗೆ ಅಲ್ಲಿಯೇ ಇರಲಿದ್ದಾರೆ. ಕಿವೀಸ್ ಆಟಗಾರರು ವಿಶೇಷ ಚಾರ್ಟರ್ ವಿಮಾನದಲ್ಲಿ ಆಕ್ಲೆಂಡ್ಗೆ ತಲುಪಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಆಫ್ರಿಕಾ ಆಟಗಾರರು ಮುಂಬೈ ಮತ್ತು ದೋಹಾ ಮೂಲಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಎಸ್ಒಪಿಯೊಂದಿಗೆ ಜೋಹನ್ಸ್ಬರ್ಗ್ಸ್ಗೆ ತಲುಪಿದ್ದಾರೆ.
ಇದನ್ನು ಓದಿ:ಮೈಕ್ ಹಸ್ಸಿ ಬಿಟ್ಟು ಮಾಲ್ಡೀವ್ಸ್ ತಲುಪಿದ ಎಲ್ಲ ಆಸ್ಟ್ರೇಲಿಯಾ ಆಟಗಾರರು.. ಬಿಸಿಸಿಐಗೆ ಧನ್ಯವಾದ ತಿಳಿಸಿದ ಸಿಎ