ETV Bharat / sports

ಧೋನಿ ನಾಯಕತ್ವದಲ್ಲಿ ಆಡಲು ಅದ್ಭುತ ಅವಕಾಶ ಸಿಕ್ಕಿದೆ: ಇಂಗ್ಲೆಂಡ್​ ಬೌಲರ್​

author img

By

Published : Dec 21, 2019, 8:39 PM IST

2019ರ ಸೀಸನ್​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ 7.2 ಕೋಟಿ ರೂ. ನೀಡಿ ಸ್ಯಾಮ್​ ಕರ್ರನ್​ರನ್ನು ಖರೀದಿಸಿತ್ತು. ಆದರೆ ದುಬಾರಿಯಾದ್ದರಿಂದ ಅವರನ್ನು 2020ರ ಸೀಸನ್​ಗೆ ಉಳಿಸಿಕೊಳ್ಳದೆ ತಂಡದಿಂದ ಕೈಬಿಟ್ಟಿತ್ತು. ಡಿಸೆಂಬರ್​ 19ರಂದು ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ 5.5 ಕೋಟಿ ನೀಡಿ ಚೆನ್ನೈ ಸೂಪರ್​ ಕಿಂಗ್ಸ್ ಪ್ರಾಂಚೈಸಿ ಖರೀದಿಸಿದೆ.

Sam Curran excited to play for CSK
Sam Curran excited to play for CSK

ಚೆನ್ನೈ: ಕಳೆದ ಐಪಿಎಲ್​ನಲ್ಲಿ ಹ್ಯಾಟ್ರಿಕ್ ವಿಕೆಟ್​ ಪಡೆದು ಮೊದಲ ಸೀಸನ್​ನಲ್ಲೇ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಇಂಗ್ಲೆಂಡ್​ನ ಯುವ ಆಲ್​ರೌಂಡರ್​ ಸ್ಯಾಮ್​ ಕರ್ರನ್​, ಮುಂದಿನ ಆವೃತ್ತಿಯಲ್ಲಿ ಧೋನಿ ನಾಯಕತ್ವದಲ್ಲಿ ಆಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

2019ರ ಸೀಸನ್​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ 7.2 ಕೋಟಿ ರೂ. ನೀಡಿ ಸ್ಯಾಮ್​ ಕರ್ರನ್​ರನ್ನು ಖರೀದಿಸಿತ್ತು. ಆದರೆ ದುಬಾರಿಯಾದ್ದರಿಂದ ಅವರನ್ನು 2020ರ ಸೀಸನ್​ಗೆ ಉಳಿಸಿಕೊಳ್ಳದೆ ತಂಡದಿಂದ ಕೈಬಿಟ್ಟಿತ್ತು. ಡಿಸೆಂಬರ್​ 19ರಂದು ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ 5.5 ಕೋಟಿ ನೀಡಿ ಚೆನ್ನೈ ಸೂಪರ್​ ಕಿಂಗ್ಸ್ ಪ್ರಾಂಚೈಸಿ ಖರೀದಿಸಿತ್ತು.

"ಚೆನ್ನೈ ಬಂದು ನಮ್ಮ ತಂಡದ ಆಟಗಾರರನ್ನು ಭೇಟಿ ಮಾಡುವುದಕ್ಕೆ ನನಗೆ ಕಾಯುವುದಕ್ಕಾಗುತ್ತಿಲ್ಲ. ನಮ್ಮ ನಾಯಕ ಧೋನಿ ಹಾಗೂ ಕೋಚ್​ ಸ್ಟೀಫನ್ ಫ್ಲೆಮಿಂಗ್​ ಅವರ ಆಲೋಚನೆಗಳನ್ನು ತಿಳಿದುಕೊಳ್ಳುವುದಕ್ಕೆ ನನಗೆ ಇದೊಂದು ಅದ್ಭುತ ಅವಕಾಶ. ನಾವು ಚೆನ್ನೈಗೆ ಈ ಬಾರಿ ಟ್ರೋಫಿ ಗೆದ್ದುಕೊಡಲಿದ್ದೇವೆ ಎಂಬ ವಿಶ್ವಾಸ ನನಗಿದೆ" ಎಂದು ಸ್ಯಾಮ್ ಕರ್ರನ್​ ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ಪೋಸ್ಟ್​ ಮಾಡುವ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಕರ್ರನ್​ 2019 ಸೀಸನ್​ನಲ್ಲಿ 9 ಪಂದ್ಯಗಳನ್ನಾಡಿದ್ದು, 10 ವಿಕೆಟ್​ ಪಡೆದಿದ್ದರು. 11 ರನ್​ ನೀಡಿ 4 ವಿಕೆಟ್​ ಪಡೆದಿರುವುದು ಇವರ ಅತ್ಯುತ್ತಮ ಬೌಲಿಂಗ್​. ಇನ್ನು ಬ್ಯಾಟಿಂಗ್​ನಲ್ಲೂ 95 ರನ್​ಗಳಿಸಿದ್ದರು. ಇವರ ಗರಿಷ್ಠ ರನ್​ 55. ಡೆಲ್ಲಿ ಕ್ಯಾಪಿಟಲ್​ ಪರ ಹ್ಯಾಟ್ರಿಕ್​ ಕೂಡ ಪಡೆದಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.