ETV Bharat / sports

ಸೂರ್ಯ ಕುಮಾರ್​ ಅದ್ಭುತ ಬ್ಯಾಟಿಂಗ್​, ಭುವಿ ಮಾರಕ ದಾಳಿಗೆ ಸುಲಭವಾಗಿ ತುತ್ತಾದ ಶ್ರೀಲಂಕಾ! - ಭಾರತ ಮತ್ತು ಶ್ರೀಲಂಕಾ ಮೊದಲ ಟಿ20 ಪಂದ್ಯ

ನಿನ್ನೆ ನಡೆದ ಪಂದ್ಯದಲ್ಲಿ ಭಾರತ ತಂಡದ ಅದ್ಭುತ ಬ್ಯಾಟಿಂಗ್​ ಮತ್ತು ಮಾರಕ ಬೌಲಿಂಗ್​ ದಾಳಿಯಿಂದ ಶ್ರೀಲಂಕಾ ವಿರುದ್ಧ ಸುಲಭ ಜಯ ಗಳಿಸಲು ಸಾಧ್ಯವಾಯಿತು.

Suryakumar Yadav  Bhuvneshwar Kumar  India vs Sri Lanka  India beats Sri Lanka  ಸೂರ್ಯ ಕುಮಾರ್​ನ ಅದ್ಭುತ ಬ್ಯಾಟಿಂಗ್​,  ಭುವಿಯ ಮಾರಕ ದಾಳಿ  ಶ್ರೀಲಂಕಾ ವಿರುದ್ಧ ಸುಲಭ ಜಯ  ಶ್ರೀಲಂಕಾ ವಿರುದ್ಧ ಭಾರತಕ್ಕೆ ಸುಲಭ ಜಯ
ಕೃಪೆ: Twitter
author img

By

Published : Jul 26, 2021, 10:58 AM IST

ಕೊಲಂಬೊ: ಸೂರ್ಯಕುಮಾರ್ ಯಾದವ್​ ಅದ್ಭುತ ಬ್ಯಾಟಿಂಗ್​ ಮತ್ತು ಭುವನೇಶ್ವರ್ ಕುಮಾರ್​ನ ಮಾರಕ ದಾಳಿಯಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ ಸುಲಭವಾಗಿ ಜಯ ಗಳಿಸಿತು.

ಟಾಸ್​ ಸೋತು ಬ್ಯಾಟಿಂಗ್​ ಭಾರತಕ್ಕೆ ಶ್ರೀಲಂಕಾ ಆರಂಭಿಕ ಆಘಾತ ನೀಡಿತು. ಪಂದ್ಯದ ಮೊದಲ ಎಸೆತದಲ್ಲಿ ಪೃಥ್ವಿ ಶಾಗೆ ಚಮೀರ್​ ಪೆವಿಲಿಯನ್​ ಹಾದಿ ತೋರಿಸಿದರು. ಬಳಿಕ ಧವನ್​ ಮತ್ತು ಸ್ಯಾಮ್ಸನ್​ ಜೊತೆಗೂಡಿ 6 ಓವರ್​ಗೆ 51 ರನ್​ಗಳನ್ನು ಕಲೆ ಹಾಕಿ ಜವಾಬ್ದಾರಿಯುತ ಆಟವಾಡುತ್ತಿದ್ದರು. ಆದರೆ 6.1 ಓವರ್​ನಲ್ಲಿ ಹಸರಂಗಾ ಎಸೆದ ಮೊದಲ ಬಾಲ್​ನಲ್ಲಿ ಸ್ಯಾಮ್ಸನ್​ ಎಲ್​ಬಿಡಬ್ಲ್ಯೂ ಆಗಿ ಔಟಾದರು. ಭಾರತ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು.

ಲಂಕಾ ಬೌಲರ್​ ಬೆವರಿಳಿಸಿದ ಬೌಲರ್​

ಬಳಿಕ ಬಂದ ಸೂರ್ಯ ಕುಮಾರ್​ ಯಾದವ್​ ನಾಯಕ ಧವನ್​ ಜೊತೆಗೂಡಿ ಶ್ರೀಲಂಕಾ ಬೌಲರ್​ಗಳನ್ನು ಚೆನ್ನಾಗಿ ಬೆವರಿಳಿಸಿದರು. ಕೇವಲ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ 50 ರನ್​ಗಳನ್ನು ಕಲೆ ಹಾಕುವ ಮೂಲಕ ಅಂತರಾಷ್ಟ್ರೀಯ ಟಿ-20ಯಲ್ಲಿ ತಮ್ಮ ಎರಡನೇ ಅರ್ಧ ಶತಕ ಗಳಿಸಿದರು.

ಧವನ್​ ಮತ್ತು ಸೂರ್ಯ ಕುಮಾರ್​ ಜೊತೆಗೂಡಿ 62 ರನ್​ಗಳನ್ನು ಕಲೆ ಹಾಕಿದರು. ಬಳಿಕ ಧವನ್​ ಕರುಣಾರತ್ನೆಗೆ ವಿಕೆಟ್ ​ಒಪ್ಪಿಸಿದರು. ಧವನ್​ ಔಟಾದ ಬಳಿಕ ಸೂರ್ಯ ಕುಮಾರ್​ ಯಾದವ್​ ಹೆಚ್ಚು ಸಮಯ ಮೈದಾನದಲ್ಲಿ ಆಡಲಿಲ್ಲ. ಹಸರಂಗಾ ಬೌಲಿಂಗ್​ನಲ್ಲಿ ವಿಕೆಟ್​ವೊಪ್ಪಿಸಿ ಪೆವಿಲಿಯನ್​ ಹಾದಿ ಹಿಡಿದರು.

ನಂತರ ಆಗಮಿಸಿದ ಬ್ಯಾಟ್ಸ್​​ಮನ್​ಗಳ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್​ಗಳಿಗೆ ಐದು ವಿಕೆಟ್​ಗಳನ್ನು ಕಳೆದುಕೊಂಡು 164 ರನ್​ಗಳನ್ನು ಕಲೆ ಹಾಕಿತು. ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ್ದ ಶ್ರೀಲಂಕಾ ತಂಡಕ್ಕೆ ಸ್ವಲ್ಪಮಟ್ಟಿಗೆ ಉತ್ತಮ ಆರಂಭ ದೊರೆಯಿತು.

ಭರ್ಜರಿಯಾಗೇ ಸಾಗುತ್ತಿದ್ದ ಸಿಂಹಳಿಯರು

ಮೊದಲ ಎರಡು ಓವರ್​ಗಳಲ್ಲಿ ಶ್ರೀಲಂಕಾ 20 ರನ್​ಗಳನ್ನು ಕಲೆ ಹಾಕಿ ಭರ್ಜರಿ ಮುನ್ನುಗ್ಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ನಾಯಕ ಧವನ್​ ಕ್ರುನಾಲ್​ರನ್ನ ಕಣಕ್ಕಿಳಿಸಿದರು. ಕ್ರುನಾಲ್​ನ ಮೂರನೇ ಎಸತಕ್ಕೆ ಮಿನೋದ್​ ಭಾನುಕಾ ಸೂರ್ಯ ಕುಮಾರ್​ ಯಾದವ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಹಾದಿ ಹಿಡಿದರು. ಭಾನುಕಾ ಔಟಾದ ಬಳಿಕ ಶ್ರೀಲಂಕಾ ತಂಡದ ಅವಿಷ್ಕಾ ಫರ್ನಾಂಡೊ ಮತ್ತು ಧನಜಯ ಡಿ ಸಿಲ್ವಾ ಜೊತೆಗೂಡಿ ನಿಧಾನಗತಿಯಲ್ಲಿ ಬ್ಯಾಟ್​ ಬೀಸುತ್ತಿದ್ದರು. ಈ ವೇಳೆ ನಾಯಕ ಧವನ್​ ಚಹಾಲ್​ರನ್ನು ಕಣಕ್ಕಿಸಿದರು. ಚಹಾಲ್​ನ ಎರಡನೇ ಎಸೆತಕ್ಕೆ ಸಿಲ್ವಾ ಕ್ಲೀನ್​ ಬೋಲ್ಡ್​ ಆದರು.

ಇದಾದ ಬಳಿಕ ಸಿಲ್ವಾ ಔಟಾದರು. ಆ ಮೇಲೆ ಡೆಬ್ಯು ಆಟಗಾರ ಚಾರಿತ್ ಅಸಲಂಕಾ ಅವಿಷ್ಕಾ ಫರ್ನಾಂಡೊ ಜೊತೆಗೂಡಿದರು. ಅವಿಷ್ಕಾ ಫರ್ನಾಂಡೊ ಹೆಚ್ಚು ಕ್ರಿಸ್​ನಲ್ಲಿ ನಿಲ್ಲದೇ ಭುವಿನೇಶ್ವರ್​ ಕುಮಾರ್​ ದಾಳಿಗೆ ತುತ್ತಾದರು. ಆದರೆ ಚಾರಿತ್ ಅಸಲಂಕಾಗೆ ಇದು ಮೊದಲ ಪಂದ್ಯವಾದರೂ ಭಾರತದ ವಿರುದ್ಧ ಉತ್ತಮವಾಗಿಯೇ ಪ್ರದರ್ಶನ ತೋರಿದರು. ಕೇವಲ 26 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್​ಗಳ ನೇತೃತ್ವದಲ್ಲಿ 44 ರನ್​ಗಳನ್ನು ಕಲೆಹಾಕಿದರು. ಬಳಿಕ ಚಹಾರ್​ ಬೌಲಿಂಗ್​ಗೆ ವಿಕೆಟ್​ವೊಪ್ಪಿಸಿದರು.

ಬಳಿಕ ಭಾರತದ ಮಾರಕ ದಾಳಿಗೆ ಶ್ರೀಲಂಕಾ 16 ನೇ ಓವರ್‌ನಲ್ಲಿ 111/4 ರಿಂದ ಕೊನೆಯ ಆರು ವಿಕೆಟ್‌ಗಳನ್ನು ಕೇವಲ 15 ರನ್‌ಗಳಿಗೆ ಕಳೆದುಕೊಂಡು ಹೀನಾಯ ಸೋಲುನುಭವಿಸಿತು. ಭಾರತ ಪರ ಯುಜ್ವೇಂದ್ರ ಚಹಲ್ 1, ದೀಪಕ್ ಚಹರ್ 2, ಭುವನೇಶ್ವರ್ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆತಿಥೇಯರನ್ನು 18.3 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟ್ ಮಾಡಿ ಸುಲಭ ಜಯದತ್ತ ಕಾಲಿನ್ನಿಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.