ಅಹ್ಮದಾಬಾದ್: ಫೆಬ್ರವರಿ 6ರಿಂದ 11ರವರೆಗೆ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಕೋವಿಡ್ 19 ಸಾಂಕ್ರಾಮಿಕ ಕಾರಣದಿಂದ ಮುಚ್ಚಿದ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಮಂಗಳವಾರ ಖಚಿತಪಡಿಸಿದೆ.
ವಿಶ್ವದ ಅತ್ಯಂದ ದೊಡ್ಡ ಕ್ರೀಡಾಂಗಣವಾಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಲ್ಲಾ ಮೂರು ಪಂದ್ಯಗಳು ನಡೆಯಲಿವೆ. ಫೆಬ್ರವರಿ 6, 9 ಮತ್ತು 11ರಂದು ಏಕದಿನ ಪಂದ್ಯಗಳು ಜರುಗಲಿವೆ. ನಂತರ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಮೂರು ಪಂದ್ಯಗಳಲ್ಲಿ ಟಿ20 ಸರಣಿ ನಡೆಯಲಿದೆ. ಈ ಸರಣಿಗೆ ಪಶ್ಚಿಮ ಬಂಗಾಳ ಸರ್ಕಾರ ಶೇ.75 ಪರ್ಸೆಂಟ್ ಪ್ರೇಕ್ಷಕರಿಗೆ ಅವಕಾಶ ನೀಡಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
"ನಾವು 2022ರ ಏಕದಿನ ಸರಣಿಗೆ ಭಾರತಕ್ಕೆ ಪ್ರವಾಸ ಕೈಗೊಡಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಅತಿಥ್ಯವಹಿಸಲು ಸಿದ್ಧರಾಗಿದ್ಧೇವೆ. ಫೆಬ್ರವರಿ 6ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯ ಭಾರತಕ್ಕೆ ತುಂಬಾ ವಿಶೇಷ ಮತ್ತು ಐತಿಹಾಸಿಕ ಪಂದ್ಯವಾಗಲಿದೆ. ಅದು ದೇಶದ 1000ನೇ ಏಕದಿನ ಪಂದ್ಯವಾಗಲಿದ್ದು, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈ ಮೈಲಿಗಲ್ಲು ತಲುಪುವ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಲಿದೆ" ಎಂದು ಜಿಸಿಎ ಟ್ವೀಟ್ ಮಾಡಿದೆ.
ಪ್ರಸ್ತುತ ಪರಿಸ್ಥಿತಿ(ಕೋವಿರ್ಡ್)ಯನ್ನು ಪರಿಗಣನೆಗೆ ತೆಗೆದುಕೊಂಡು ಎಲ್ಲಾ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಬೋರ್ಡ್ ಮತ್ತೊಂದು ಟ್ವೀಟ್ನಲ್ಲಿ ಹೇಳಿದೆ.
ಇದನ್ನೂ ಓದಿ:IPL 2022 Auctionಗೆ ಫೈನಲ್ ಲಿಸ್ಟ್ ಬಿಡುಗಡೆ.. ಹರಾಜಿಗೆ ವಾರ್ನರ್, ಧವನ್, ರಬಾಡ ಸೇರಿ 590 ಆಟಗಾರರು..