ETV Bharat / sports

IND vs WI 3rd ODI: ಭಾರತದ ವಿರುದ್ಧ ವಿಂಡೀಸ್​ ನಾಯಕ ಹೊಂದಿದ್ದಾರೆ ಉತ್ತಮ ರೆಕಾರ್ಡ್​.. ಲಾರಾ ಮೈದಾನದಲ್ಲಿ ಗೆಲುವು ಯಾರಿಗೆ?

ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯದ ಜೊತೆಗೆ ಟಿ20 ಸರಣಿಯ ಮೊದಲ ಪಂದ್ಯವೂ ನಡೆಯಲಿದೆ. ಈ ಮೈದಾನದಲ್ಲಿ ಉಭಯ ನಾಯಕರು ಪಂದ್ಯ ಗೆಲ್ಲುವ ತವಕದಲ್ಲಿದ್ದಾರೆ.

india captain rohit sharma vs west indies captain shai hope
rohit sharma vs shai hope
author img

By

Published : Jul 31, 2023, 6:21 PM IST

ಟ್ರಿನಿಡಾಡ್ (ವೆಸ್ಟ್​ ಇಂಡೀಸ್​): ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ನಿರ್ಣಾಯಕ ಪಂದ್ಯ ಮಂಗಳವಾರ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಮೊದಲೆರಡು ಏಕದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನವನ್ನು ನೀಡಿಲ್ಲ. ಇಂಡಿಯನ್​ ಟೀಮ್​ ಪರ ಇಶಾನ್ ಕಿಶನ್ ಹೊರತುಪಡಿಸಿ ಉಳಿದ ಎಲ್ಲಾ ಬ್ಯಾಟರ್​ಗಳು ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಬಾರ್ಬಡೋಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಹಲವು ವರ್ಷಗಳ ನಂತರ ಭಾರತದ ವಿರುದ್ಧ ಗೆದ್ದು ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.

ಅದೇ ಸಮಯದಲ್ಲಿ, ಮೂರನೇ ಪಂದ್ಯ ಮಂಗಳವಾರ ತರೂಬಾ, ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ನಡೆಯಲಿದೆ. ಏಕದಿನ ಸರಣಿಯ ಈ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾದ ಹಲವು ಬ್ಯಾಟರ್​ಗಳು ಮೇಲೆ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡವಿದೆ. ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇತ್ತೀಚೆಗೆ ಸತತ ವೈಫಲ್ಯವನ್ನು ಎದುರಿಸುತ್ತಿದ್ದಾರೆ. ಎರಡನೇ ಪಂದ್ಯದಲ್ಲಿ ಪಾಲ್ಗೊಂಡಿದ್ದ ಅಕ್ಷರ್ ಪಟೇಲ್ ಬಾಲ್ ಹಾಗೂ ಬ್ಯಾಟಿಂಗ್​ನಲ್ಲಿ ಯಾವುದೇ ಮ್ಯಾಜಿಕ್ ಮಾಡಿಲ್ಲ.

ತವರಿನಲ್ಲಿ ಆರನೇ ಸರಣಿಯ ಸೋಲಿನಿಂದ ತಪ್ಪಿಸಿಕೊಳ್ಳಲು ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಮೂರನೇ ಏಕದಿನ ಪಂದ್ಯವನ್ನು ಗೆಲ್ಲುವ ಅನಿವಾರ್ಯತೆಯಲ್ಲಿದ್ದಾರೆ. ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಭಾರತದ ವಿರುದ್ಧ ಉತ್ತಮ ಬ್ಯಾಟಿಂಗ್ ದಾಖಲೆಯನ್ನು ಹೊಂದಿದ್ದಾರೆ. ಶಾಯ್ ಹೋಪ್ ಅವರು ತಮ್ಮ ವೃತ್ತಿಜೀವನದಲ್ಲಿ ಭಾರತದ ವಿರುದ್ಧ ಹೆಚ್ಚು ಅರ್ಧಶತಕವನ್ನು ದಾಖಲಿಸಿದ್ದಾರೆ. ಇಲ್ಲಿಯವರೆಗೆ, ಅವರು ಭಾರತದ ವಿರುದ್ಧ ಒಟ್ಟು 8 ಬಾರಿ 50+ ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಛಾಪು ಮೂಡಿಸಿದ್ದಾರೆ. ಹೋಪ್ ಇದುವರೆಗೆ ಟೀಂ ಇಂಡಿಯಾ ವಿರುದ್ಧ 49.15ರ ಸರಾಸರಿಯಲ್ಲಿ 983 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಭಾರತದ ವಿರುದ್ಧ ಏಕದಿನ ಪಂದ್ಯಗಳಲ್ಲಿ 3 ಶತಕ ಹಾಗೂ 5 ಅರ್ಧ ಶತಕ ಸಿಡಿಸಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯವು ಮಂಗಳವಾರ ಆಗಸ್ಟ್ 1 ರಂದು ನಡೆಯಲಿದೆ. ಈ ಪಂದ್ಯದ ಮೂಲಕ ಏಕದಿನ ಸರಣಿ ಯಾರ ಪಾಲಿಗೆ ಸಿಗಲಿದೆ ಎಂಬುದು ನಿರ್ಧಾರವಾಗಲಿದೆ. ಇದೀಗ ಉಭಯ ತಂಡಗಳು 1-1 ಅಂತರದ ಗೆಲುವಿನೊಂದಿಗೆ ಸಮಬಲದಲ್ಲಿವೆ. ಈ ಪಂದ್ಯದ ಮೇಲೆ ಉಭಯ ತಂಡಗಳ ಕಣ್ಣು ಇದ್ದು ಎರಡೂ ತಂಡದ ನಾಯಕರು ಗೆಲುವಿಗಾಗಿ ಹಂಬಲಿಸುತ್ತಿದ್ದಾರೆ.

ರೋಹಿತ್ ಶರ್ಮಾ ದಾಖಲೆ: ಭಾರತದ ನಾಯಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ 37 ಪಂದ್ಯಗಳ 35 ಇನ್ನಿಂಗ್ಸ್‌ಗಳಲ್ಲಿ 57.60 ಸರಾಸರಿಯಲ್ಲಿ 3 ಶತಕ ಮತ್ತು 12 ಅರ್ಧ ಶತಕಗಳನ್ನು ಒಳಗೊಂಡಂತೆ 1613 ರನ್ ಗಳಿಸಿದ್ದಾರೆ. ಅವರು ನಾಳಿನ ಪಂದ್ಯದಲ್ಲಿ ಮತ್ತೊಂದು ಉತ್ತಮ ಪ್ರದರ್ಶನ ನೀಡಿದರೆ ಭಾರತಕ್ಕೆ ಸರಣಿ ಒಲಿಯಲಿದೆ.

ಇದನ್ನೂ ಓದಿ: IND vs WI 3rd ODI: ಸೂರ್ಯ, ಸ್ಯಾಮ್ಸನ್​ಗೆ ಸಿಗುತ್ತಾ ಮೂರನೇ ಏಕದಿನ ಪಂದ್ಯದಲ್ಲಿ ಸ್ಥಾನ.. ವಿಶ್ವಕಪ್​ ಸ್ಥಾನದ ರೇಸ್​ನಲ್ಲಿ ಉಳಿಯುವರಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.