ETV Bharat / sports

WTC Final: ಇಶಾಂತ್, ಶಮಿ ದಾಳಿಗೆ ಬೆದರಿದ ಕಿವೀಸ್- ಬೋಜನ ವಿರಾಮಕ್ಕೆ ತಂಡದ ಮೊತ್ತ 135ಕ್ಕೆ 5

author img

By

Published : Jun 22, 2021, 6:52 PM IST

101ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು ಆಟ ಮುಂದುವರಿಸಿದ ನ್ಯೂಜಿಲ್ಯಾಂಡ್​ ತಂಡ ಆ ಮೊತ್ತಕ್ಕೆ 16 ರನ್​ಗಳಿಸುವ ವೇಳೆಗೆ ಅನುಭವಿ ರಾಸ್ ಟೇಲರ್(11)​ ವಿಕೆಟ್ ಕಳೆದುಕೊಂಡಿತು. ಟೇಲರ್​ ನನ್ನು ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಗಿಲ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

WTC ಫೈನಲ್
WTC ಫೈನಲ್

ಸೌತಾಂಪ್ಟನ್: ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಅದ್ಭುತ ಬೌಲಿಂಗ್ ದಾಳಿಯ ಮುಂದೆ ಪರದಾಡಿದ ಕಿವೀಸ್​ ಪಡೆ 5ನೇ ದಿನ ಮೊದಲ ಸೆಷನ್​ನಲ್ಲಿ 3 ವಿಕೆಟ್​ ಕಳೆದುಕೊಂಡಿದ್ದಲ್ಲದೇ, ರನ್​ಗಳಿಸಲು ಕೂಡ ಹೆಣಗಾಡುತ್ತಿದೆ.

101ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು ಆಟ ಮುಂದುವರಿಸಿದ ನ್ಯೂಜಿಲ್ಯಾಂಡ್​ ತಂಡ ಆ ಮೊತ್ತಕ್ಕೆ 16 ರನ್​ಗಳಿಸುವ ವೇಳೆಗೆ ಅನುಭವಿ ರಾಸ್ ಟೇಲರ್(11)​ ವಿಕೆಟ್ ಕಳೆದುಕೊಂಡಿತು. ಟೇಲರ್​ ಅವರನ್ನು ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಗಿಲ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

Another one for 🇮🇳

A beauty from Mohammad Shami to get the wicket of BJ Watling 💥

🇳🇿 are 135/5#WTC21 Final | #INDvNZ | https://t.co/CFgUHp47Zq pic.twitter.com/PlLAv30XV7

— ICC (@ICC) June 22, 2021

ನಂತರ ಬಂದ ಹೆನ್ರಿ ನಿಕೋಲ್ಸ್​ ಕೇವಲ 7 ರನ್​ಗಳಿಸಿ ಇಶಾಂತ್ ಶರ್ಮಾ ಬೌಲಿಂಗ್​ನಲ್ಲಿ ರೋಹಿತ್​ಗೆ ಕ್ಯಾಚ್​ ನೀಡಿ ಔಟಾದರು. ತಮ್ಮ ವೃತ್ತಿ ಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಬಿಜೆ ವಾಟ್ಲಿಂಗ್ ಕೇವಲ 1 ರನ್​ಗಳಿಸಿ ಶಮಿ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್​ ಆದರು.

5ನೇ ದಿನವಾದ ಇಂದು ಕಿವೀಸ್​ 23 ಓವರ್​ಗಳನ್ನು ಎದುರಿಸಿದ್ದು, ಕೇವಲ 34 ರನ್​​ ರನ್​ಗಳಿಸಿದೆ. ನಾಯಕ ಕೇನ್ ವಿಲಿಯಮ್ಸನ್​ 112 ಎಸೆತಗಳಲ್ಲಿ 11 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ. ಭೋಜನ ವಿರಾಮದ ವೇಳೆಗೆ ಕಿವೀಸ್ 5 ಕಳೆದುಕೊಂಡು 135 ರನ್​ಗಳಿಸಿದೆ.

ಮೊಹಮ್ಮದ್ ಶಮಿ 31 ರನ್​ ನೀಡಿ 2 ವಿಕೆಟ್​, ಇಶಾಂತ್ ಶರ್ಮಾ 27ಕ್ಕೆ 2 ಮತ್ತು ಅಶ್ವಿನ್ ಒಂದು ವಿಕೆಟ್ ಪಡೆದಿದ್ದಾರೆ.

ಇದನ್ನು ಓದಿ: ಕೋಪ ಕೆಲಸಕ್ಕೆ ಬರಲ್ಲ, ಅದನ್ನು ನಿಯಂತ್ರಿಸಿದ ಮೇಲೆ ನನಗೆ ಯಶಸ್ಸು ಸಿಕ್ಕಿತು: ಬುಮ್ರಾ

ಸೌತಾಂಪ್ಟನ್: ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಅದ್ಭುತ ಬೌಲಿಂಗ್ ದಾಳಿಯ ಮುಂದೆ ಪರದಾಡಿದ ಕಿವೀಸ್​ ಪಡೆ 5ನೇ ದಿನ ಮೊದಲ ಸೆಷನ್​ನಲ್ಲಿ 3 ವಿಕೆಟ್​ ಕಳೆದುಕೊಂಡಿದ್ದಲ್ಲದೇ, ರನ್​ಗಳಿಸಲು ಕೂಡ ಹೆಣಗಾಡುತ್ತಿದೆ.

101ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು ಆಟ ಮುಂದುವರಿಸಿದ ನ್ಯೂಜಿಲ್ಯಾಂಡ್​ ತಂಡ ಆ ಮೊತ್ತಕ್ಕೆ 16 ರನ್​ಗಳಿಸುವ ವೇಳೆಗೆ ಅನುಭವಿ ರಾಸ್ ಟೇಲರ್(11)​ ವಿಕೆಟ್ ಕಳೆದುಕೊಂಡಿತು. ಟೇಲರ್​ ಅವರನ್ನು ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಗಿಲ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ನಂತರ ಬಂದ ಹೆನ್ರಿ ನಿಕೋಲ್ಸ್​ ಕೇವಲ 7 ರನ್​ಗಳಿಸಿ ಇಶಾಂತ್ ಶರ್ಮಾ ಬೌಲಿಂಗ್​ನಲ್ಲಿ ರೋಹಿತ್​ಗೆ ಕ್ಯಾಚ್​ ನೀಡಿ ಔಟಾದರು. ತಮ್ಮ ವೃತ್ತಿ ಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಬಿಜೆ ವಾಟ್ಲಿಂಗ್ ಕೇವಲ 1 ರನ್​ಗಳಿಸಿ ಶಮಿ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್​ ಆದರು.

5ನೇ ದಿನವಾದ ಇಂದು ಕಿವೀಸ್​ 23 ಓವರ್​ಗಳನ್ನು ಎದುರಿಸಿದ್ದು, ಕೇವಲ 34 ರನ್​​ ರನ್​ಗಳಿಸಿದೆ. ನಾಯಕ ಕೇನ್ ವಿಲಿಯಮ್ಸನ್​ 112 ಎಸೆತಗಳಲ್ಲಿ 11 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ. ಭೋಜನ ವಿರಾಮದ ವೇಳೆಗೆ ಕಿವೀಸ್ 5 ಕಳೆದುಕೊಂಡು 135 ರನ್​ಗಳಿಸಿದೆ.

ಮೊಹಮ್ಮದ್ ಶಮಿ 31 ರನ್​ ನೀಡಿ 2 ವಿಕೆಟ್​, ಇಶಾಂತ್ ಶರ್ಮಾ 27ಕ್ಕೆ 2 ಮತ್ತು ಅಶ್ವಿನ್ ಒಂದು ವಿಕೆಟ್ ಪಡೆದಿದ್ದಾರೆ.

ಇದನ್ನು ಓದಿ: ಕೋಪ ಕೆಲಸಕ್ಕೆ ಬರಲ್ಲ, ಅದನ್ನು ನಿಯಂತ್ರಿಸಿದ ಮೇಲೆ ನನಗೆ ಯಶಸ್ಸು ಸಿಕ್ಕಿತು: ಬುಮ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.