ETV Bharat / sports

ನಮ್ಮ ಕಲೆ ಕರಗತ ಮಾಡಿಕೊಂಡ ಬುಮ್ರಾ: ಶೋಯಬ್​​ ಅಖ್ತರ್ - former cricketer Shoaib Akhtar

ಬುಮ್ರಾ ಕೇವಲ 5 ಸೆಕೆಂಡ್​​​ಗಳಲ್ಲಿ ಬ್ಯಾಟ್ಸ್​ಮನ್​​ಗಳ ಆಟದ ದಿಕ್ಕು ಬದಲಿಸಿ ಮೈದಾನದಿಂದ ಹೊರಗಟ್ಟುವ ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್​ ಅಖ್ತರ್ ಹೇಳಿದರು.

Akhtar
ಜಸ್ಪ್ರೀತ್ ಬುಮ್ರಾ
author img

By

Published : Jan 1, 2021, 8:26 PM IST

ಹೈದರಾಬಾದ್​​​​: ಎದುರಾಳಿ ತಂಡದ ಬ್ಯಾಟ್ಸ್​ಮನ್​​ಗಳನ್ನು ಮೋಸದ ಬಲೆಗೆ ಬೀಳಿಸಿ ವಿಕೆಟ್​​ ಕಬಳಿಸುವ ಕಲೆಯನ್ನು ಭಾರತದ ಚಾಣಾಕ್ಷ ವೇಗಿ ಜಸ್ಪ್ರೀತ್ ಬುಮ್ರಾ ಕರಗತ ಮಾಡಿಕೊಂಡಿದ್ದಾರೆ. ಇದರಿಂದ ಬ್ಯಾಟ್ಸ್​​​ಮನ್​ಗಳು ಭಯಭೀತರಾಗುತ್ತಾರೆ. ಆದರೆ, ಈ ಕಲೆಯನ್ನು ಮೊದಲು ನಾವು (ಪಾಕ್​ ವೇಗಿಗಳು) ಹೊಂದಿದ್ದೆವು​ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್​ ಅಖ್ತರ್​ ಹೇಳಿದರು.

ಅವರು ಕೇವಲ 5 ಸೆಕೆಂಡ್​​​ಗಳಲ್ಲಿ ಬ್ಯಾಟ್ಸ್​ಮನ್​​ಗಳ ಆಟದ ದಿಕ್ಕು ಬದಲಿಸಿ ಮೈದಾನದಿಂದ ಹೊರಗಟ್ಟುವ ಕೌಶಲ್ಯ ಮತ್ತು ಸಾಮರ್ಥ್ಯ ಹೊಂದಿದ್ದಾರೆ. ಇದು ಪಾಕಿಸ್ತಾನ ಆಟಗಾರರ ಕಲೆಯಾಗಿತ್ತು. ಟ್ರ್ಯಾಕ್​​​ನಲ್ಲಿ ಎಷ್ಟು ಹುಲ್ಲಿದೆ ಎನ್ನುವುದಕ್ಕಿಂತ ಗಾಳಿಯ ವೇಗ ಮತ್ತು ಅದರ ದಿಕ್ಕನ್ನು ಪರಿಶೀಲಿಸುವುದೇ ಇದರ ತಂತ್ರ. ಇದನ್ನು ಬಳಸಿದವರಲ್ಲಿ ಬಹುಶಃ ಬುಮ್ರಾ ಭಾರತದ ಮೊದಲ ಬೌಲರ್ ಎಂದರು.

ನಾನು, ವಾಸಿಂ ಅಕ್ರಮ್​​​ ಮತ್ತು ವಾಕರ್ ಯೂನಿಸ್​​​ ಬೌಲಿಂಗ್​ ಎಸೆಯುವ ಸಮಯದಲ್ಲಿ ಗಾಳಿಯ ವೇಗ ಎಷ್ಟಿದೆ. ಅದರ ದಿಕ್ಕು ಎತ್ತಕಡೆ ಸಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೆವು. ಆ ಗಾಳಿಯ ವೇಗಕ್ಕೆ ತಕ್ಕಂತೆ ಚೆಂಡು ಎಸೆಯುತ್ತಿದ್ದೆವು. ಇದರಿಂದ ಬ್ಯಾಟ್ಸ್​​ಮನ್ ಕಕ್ಕಾಬಿಕ್ಕಿಯಾಗುತ್ತಿದ್ದರು. ಚೆಂಡನ್ನು ಹೇಗೆ ಎದುರಿಸಬೇಕೆಂದು ಗೊಂದಲಕ್ಕೆ ಒಳಗಾಗುತ್ತಿದ್ದರು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.