ETV Bharat / sports

ಆಫ್ರಿದಿ ರೆಕಾರ್ಡ್ ಮೇಲೆ ಹಿಟ್​ಮ್ಯಾನ್​​ ಕಣ್ಣು: ಸಿಕ್ಸರ್​ ಸುರಿಮಳೆಗೈದು ದಾಖಲೆ ಪುಡಿಗಟ್ಟುವ ತವಕ

author img

By

Published : Aug 25, 2022, 8:24 PM IST

ಏಷ್ಯಾ ಕಪ್​​​ನಲ್ಲಿ ಅಬ್ಬರಿಸಲು ಟೀಂ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಸಜ್ಜಾಗಿದ್ದು, ಅವರ ಬ್ಯಾಟ್​​ನಿಂದ ಹೊಸ ಹೊಸ ದಾಖಲೆ ಬ್ರೇಕ್​ ಆಗುವುದು ಬಹುತೇಕ ಖಚಿತವಾಗಿದೆ.

India captain Rohit Sharma
India captain Rohit Sharma

ದುಬೈ: ಏಷ್ಯಾ ಕಪ್​​​ 2022 ಟೂರ್ನಿಯಲ್ಲಿ ಸಿಕ್ಸರ್​, ಫೋರ್​​ಗಳ ಸುರಿಮಳೆಯಾಗುವುದು ಬಹುತೇಕ ಖಚಿತ. ಬಹುನಿರೀಕ್ಷಿತ ಟೂರ್ನಿ ಕೇವಲ 20 ಓವರ್​​​ಗಳಿಗೆ ಸೀಮಿತವಾಗಿರುವ ಕಾರಣ ಎಲ್ಲ ಪ್ಲೇಯರ್ಸ್​ ದೊಡ್ಡ ದೊಡ್ಡ ಹೊಡೆತಗಳಿಗೆ ಕೈ ಹಾಕಲಿದ್ದಾರೆ. ಹೀಗಾಗಿ, ಏಷ್ಯಾ ಕಪ್​​ನಲ್ಲಿ ನಿರ್ಮಾಣಗೊಂಡಿರುವ ಕೆಲವೊಂದು ದಾಖಲೆ ಬ್ರೇಕ್​​ ಆಗುವುದು ಬಹುತೇಕ ಖಚಿತ. ಸದ್ಯ ಟೀಂ ಇಂಡಿಯಾ ಕ್ಯಾಪ್ಟನ್​​ ರೋಹಿತ್ ಶರ್ಮಾ ಪಾಕಿಸ್ತಾನದ ಶಾಹಿದ್​ ಆಫ್ರಿದಿ ರೆಕಾರ್ಡ್​ ಮೇಲೆ ಕಣ್ಣಿಟ್ಟಿದ್ದಾರೆ.

India captain Rohit Sharma
ಏಷ್ಯಾಕಪ್​​​ನಲ್ಲಿ ಅಬ್ಬರಿಸಲು ಸಜ್ಜಾಗಿರುವ ರೋಹಿತ್, ಕೊಹ್ಲಿ

ಆಗಸ್ಟ್​​​ 27ರಿಂದ ಏಷ್ಯಾಕಪ್​ ಟೂರ್ನಿ ಆರಂಭಗೊಳ್ಳಲಿದ್ದು, ಮರುದಿನ ಅಂದರೆ ಆಗಸ್ಟ್​​ 28ರಂದು ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಎಲ್ಲರ ಕಣ್ಣು ಈ ಪಂದ್ಯದ ಮೇಲೆ ನೆಟ್ಟಿದೆ. ಆದರೆ, ನಾಯಕ ರೋಹಿತ್ ಶರ್ಮಾ ಹೊಸ ಮೈಲಿಗಲ್ಲು ಸೃಷ್ಟಿಸುವ ತವಕದಲ್ಲಿದ್ದಾರೆ.

ಇದನ್ನೂ ಓದಿ: Asia Cup 2022: ಪಾಕಿಸ್ತಾನ ಕ್ಯಾಪ್ಟನ್​ ಬಾಬರ್ ಆಜಂ ಭೇಟಿ ಮಾಡಿದ ವಿರಾಟ್​​ ಕೊಹ್ಲಿ

ಏಷ್ಯಾ ಕಪ್​​​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಸಾಲಿನಲ್ಲಿ ಪಾಕಿಸ್ತಾನದ ಮಾಜಿ ಆಲ್​ರೌಂಡರ್ ಶಾಹಿದ್ ಆಫ್ರಿದಿ ಇದ್ದಾರೆ. ಆದರೆ, ಈ ಸಲದ ಟೂರ್ನಿಯಲ್ಲಿ ಆ ರೆಕಾರ್ಡ್ ಬ್ರೇಕ್​ ಮಾಡಲು ರೋಹಿತ್ ಶರ್ಮಾ ಬಳಿ ಒಳ್ಳೆಯ ಅವಕಾಶವಿದೆ. ಆಫ್ರಿದಿ ಆಡಿರುವ 27 ಪಂದ್ಯಗಳಿಂದ 26 ಸಿಕ್ಸರ್​ ಸಿಡಿಸಿ ಅಗ್ರಸ್ಥಾನದಲ್ಲಿದ್ದು, ಈ ಸಾಧನೆ ಅಳಿಸಿ ಹಾಕಲು ಹಿಟ್​ಮ್ಯಾನ್​ಗೆ ಕೇವಲ 6 ಸಿಕ್ಸರ್​​ಗಳ ಅವಶ್ಯಕತೆ ಇದೆ. ಏಷ್ಯಾಕಪ್​​​ನಲ್ಲಿ 28ನೇ ಪಂದ್ಯ ಆಡಲಿರುವ ರೋಹಿತ್ ಶರ್ಮಾ, ಟಿ20 ಮಾದರಿಯಲ್ಲಿ ಪಾಕ್​ ವಿರುದ್ಧ ಮೊದಲ ಸಲ ಭಾರತ ತಂಡ ಮುನ್ನಡೆಸಲಿದ್ದಾರೆ ಎಂಬುದು ವಿಶೇಷವಾಗಿದೆ.

ಏಷ್ಯಾಕಪ್​​ನಲ್ಲಿ ಅತಿ ಹೆಚ್ಚು ಸಿಕ್ಸರ್​

  • ಶಾಹಿದ್ ಅಫ್ರಿದಿ (ಪಾಕಿಸ್ತಾನ) 26 ಸಿಕ್ಸರ್​​
  • ಸನತ್ ಜಯಸೂರ್ಯ (ಶ್ರೀಲಂಕಾ) 23 ಸಿಕ್ಸರ್​​
  • ರೋಹಿತ್ ಶರ್ಮಾ (ಭಾರತ) 21 ಸಿಕ್ಸರ್​
  • ಸುರೇಶ್ ರೈನಾ (ಭಾರತ) 18 ಸಿಕ್ಸರ್​
  • ಎಂಎಸ್ ಧೋನಿ 16 ಸಿಕ್ಸರ್​​

ಇದರ ಜೊತೆಗೆ, ಏಷ್ಯಾಕಪ್​​ನಲ್ಲಿ ಸಾವಿರ ರನ್​​ ಗಳಿಸುವ ಮೊದಲ ಭಾರತದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ರೋಹಿತ್ ಬಳಿ ಉತ್ತಮ ಅವಕಾಶವಿದೆ. ಈಗಾಗಲೇ ತಾವು ಆಡಿರುವ 27 ಪಂದ್ಯಗಳಿಂದ 883 ರನ್​​​ಗಳಿಸಿದ್ದು, ಈ ಸರಣಿಯಲ್ಲಿ ಸಾವಿರ ರನ್​ ಪೂರೈಕೆ ಮಾಡುವ ತವಕದಲ್ಲಿದ್ದಾರೆ. ಈಗಾಗಲೇ ಏಷ್ಯಾ ಕಪ್​​ನಲ್ಲಿ ಭಾರತದ ಸಚಿನ್ ತೆಂಡೂಲ್ಕರ್​​ 23 ಪಂದ್ಯಗಳಿಂದ 971 ರನ್​​​ಗಳಿಸಿದ್ದಾರೆ. ಆದರೆ, ಶ್ರೀಲಂಕಾದ ಮಾಜಿ ಆಟಗಾರ ಸನತ್ ಜಯಸೂರ್ಯ ಆಡಿರುವ 25 ಪಂದ್ಯಗಳಿಂದ 1,220 ರನ್​​​ಗಳಿಸಿದ್ದಾರೆ. ತದನಂತರ ಕುಮಾರ್​ ಸಂಗಕ್ಕರ 24 ಪಂದ್ಯಗಳಿಂದ 1075 ರನ್​​​ಗಳಿಸಿದ್ದಾರೆ. ಇನ್ನೂ 766 ರನ್​​​ಗಳಿಕೆ ಮಾಡಿರುವ ವಿರಾಟ್​​ ಕೊಹ್ಲಿ ಬಳಿ ಕೂಡ ಉತ್ತಮ ಅವಕಾಶವಿದ್ದು, ಕಳಪೆ ಬ್ಯಾಟಿಂಗ್​​ನಿಂದ ಹೊರಬಂದರೆ ರೆಕಾರ್ಡ್​​ ಬರೆಯುವುದು ಬಹುತೇಕ ಖಚಿತವಾಗಿದೆ.

ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ರನ್​​ಗಳಿಸಿರುವ ಪ್ಲೇಯರ್ಸ್​​

  • ಸನತ್ ಜಯಸೂರ್ಯ (ಶ್ರೀಲಂಕಾ) 1220ರನ್​
  • ಕುಮಾರ್ ಸಂಗಕ್ಕರ (ಶ್ರೀಲಂಕಾ) 1075 ರನ್​​
  • ಸಚಿನ್ ತೆಂಡೂಲ್ಕರ್ (ಭಾರತ) 971 ರನ್​​
  • ಶೋಯೆಬ್ ಮಲಿಕ್ (ಪಾಕಿಸ್ತಾನ) 907 ರನ್​​​​
  • ರೋಹಿತ್ ಶರ್ಮಾ (ಭಾರತ) 883 ರನ್​​
  • ವಿರಾಟ್ ಕೊಹ್ಲಿ (ಭಾರತ) 766 ರನ್​​

ಅಬ್ಬರದ ಅಭ್ಯಾಸ ಆರಂಭಿಸಿರುವ ರೋಹಿತ್​: ಪಾಕ್​ ವಿರುದ್ಧದ ಪಂದ್ಯ ಆರಂಭಗೊಳ್ಳಲು ಕೇವಲ ಎರಡು ದಿನ ಬಾಕಿ ಉಳಿದಿರುವ ಕಾರಣ ರೋಹಿತ್ ಶರ್ಮಾ ನೆಟ್​​ನಲ್ಲಿ ಬೆವರು ಹರಿಸುತ್ತಿದ್ದಾರೆ. ಟೀಂ ಇಂಡಿಯಾದ ಪ್ರಮುಖ ಬೌಲರ್​ ಎದುರಿಸುತ್ತಿದ್ದು, ದೊಡ್ಡ ದೊಡ್ಡ ಹೊಡೆತಗಳಿಗೆ ಕೈಹಾಕುತ್ತಿದ್ದಾರೆ. ಪ್ರಮುಖವಾಗಿ ರವೀಂದ್ರ ಜಡೇಜಾ, ಆರ್​ .ಅಶ್ವಿನ್, ಆವೇಶ್ ಖಾನ್​ ಸೇರಿದಂತೆ ಪ್ರಮುಖ ಬೌಲರ್​ಗಳು ಇವರಿಗೆ ಬೌಲಿಂಗ್ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.