ಸಿಲ್ಹೆಟ್(ಬಾಂಗ್ಲಾದೇಶ) : ಮಹಿಳಾ ಏಷ್ಯಕಪ್ನ ಭಾರತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು 41ರನ್ಗಳ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಭಾರತ ವನಿತೆಯರು ನೀಡಿದ್ದ 150 ರನ್ ಗುರಿ ಮುಟ್ಟುವ ಮೊದಲೇ ಶ್ರೀಲಂಕಾ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಜೆಮಿಮಾ ರಾಡ್ರಿಗಸ್ ಅವರ ಅರ್ಧ ಶತಕದ ನೆರವಿನಿಂದ ಭಾರತ ತಂಡ 150ಕ್ಕೆ 6 ವಿಕೆಟ್ ಕಳೆದು ಕೊಂಡು ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಬೌಲಿಂಗ್ನಲ್ಲೂ ದಿಟ್ಟ ಪ್ರದರ್ಶನ ತೋರಿದ ವನಿತೆಯರು ಶ್ರೀಲಂಕಾವನ್ನು 109ಗೆ ಕಟ್ಟಿ ಹಾಕಿದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಭಾರತ ತಂಡದ ಇನ್ ಪಾರ್ಮ್ ಬ್ಯಾಟರ್ ಮಂದಾನ(6) ಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ನಡೆದರು. ನಂತರ ಬಂದ ಜೆಮಿಮಾ ರಾಡ್ರಿಗಸ್ ಶಫಾಲಿ ವರ್ಮಾ ಜೊತೆ ತಾಳ್ಮೆಯ ಇನ್ನಿಂಗ್ಸ್ ಆರಂಭಿಸಿದರು. ಆದರೆ, ತಂಡದ ಮೊತ್ತ 23 ಆಗಿದ್ದಾಗ ವರ್ಮಾ ವಿಕೆಟ್ ಒಪ್ಪಿಸಿದರು.
ನಂತರ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಜೆಮಿಮಾ ರಾಡ್ರಿಗಸ್ ಜೊತೆಯಾದರು. ಇವರಿಬ್ಬರ ಜೊತೆಯಾಟಕ್ಕೆ ತಂಡ ಚೇತರಿಕೆ ಕಂಡಿತು. ತಂಡದ 115ರಲ್ಲಿ ಇರುವಾಗ ಓಶಾದಿ ರಣಸಿಂಘೆಗೆ ಕೌರ್ ವಿಕೆಟ್ ಒಪ್ಪಿಸಿದರು. 53 ಎಸೆತದಲ್ಲಿ 11 ಬೌಂಡರಿಗಳಿಂದ 76 ರನ್ ಗಳಿಸಿ ಬಿರುಸಿನಿಂದ ಆಟ ಆಡುತ್ತಿದ್ದ ಜೆಮಿಮಾ ರಾಡ್ರಿಗಸ್ನ್ನು ಚಾಮರಿ ಅಥಾಪತ್ತು ಬೌಲ್ಡ್ ಮಾಡಿದರು. ನಂತರ ಬಂದ ಲೋವರ್ ಆರ್ಡರ್ ಆಟಗಾರರು ಯಾರು ಗಟ್ಟಿಯಾಗಿ ಕ್ರೀಸ್ನಲ್ಲಿ ನಿಲ್ಲಲಿಲ್ಲ. ದೀಪ್ತಿ ಶರ್ಮಾ(9), ಪೂಜಾ ವಸ್ತ್ರಾಕರ್(1)ರನ್ಗೆ ಔಟ್ ಆದರು. ದಯಾಲನ್ ಹೇಮಲತಾ(13), ದೀಪ್ತಿ ಶರ್ಮಾ(1) ಅಜೇಯರಾಗಿ ಉಳಿದರು. ಭಾರತ 6 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು. ಲಂಕಾ ಪರ ಓಶಾದಿ ರಣಸಿಂಘೆ ಮೂರು ವಿಕೆಟ್ ಪಡೆದರು
-
A winning start for India in the #WomensAsiaCup2022 🎉#INDvSL | Scorecard: https://t.co/G29ZQNcPBs pic.twitter.com/YgxrrDZQe3
— ICC (@ICC) October 1, 2022 " class="align-text-top noRightClick twitterSection" data="
">A winning start for India in the #WomensAsiaCup2022 🎉#INDvSL | Scorecard: https://t.co/G29ZQNcPBs pic.twitter.com/YgxrrDZQe3
— ICC (@ICC) October 1, 2022A winning start for India in the #WomensAsiaCup2022 🎉#INDvSL | Scorecard: https://t.co/G29ZQNcPBs pic.twitter.com/YgxrrDZQe3
— ICC (@ICC) October 1, 2022
109ಕ್ಕೆ ಶ್ರಿಲಂಕಾ ಸರ್ವ ಪತನ : ಭಾರತ ನೀಡಿದ್ದ 151ರನ್ಗಳ ಗುರಿ ಬೆನ್ನಟ್ಟಿದ ಸಿಂಹಳೀಯ ರಾಷ್ಟ್ರದ ವನಿತೆಯರಿಗೆ ಭಾರತದ ಬೌಲಿಂಗ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವಾಗಲಿಲ್ಲ. 109 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕೈಚೆಲ್ಲಿ ಸೋಲನುಭವಿಸಿತು. ಹರ್ಷಿತಾ ಮಾದವಿ(26), ಹಾಸಿನಿ ಪೆರೆರಾ(30) ಮತ್ತು ಓಶಾದಿ ರಣಸಿಂಘೆ(11) ಎರಡಂಕಿ ದಾಟಿದ್ದು ಬಿಟ್ಟರೆ ಮತ್ತಾರು ಹತ್ತು ರನ್ ದಾಖಲಿಸಲಿಲ್ಲ.
ಭಾರತದ ಕರಾವಕ್ಕು ದಾಳಿಗೆ ಶ್ರಿಲಂಕಾ ಪಡೆ ನಲುಗಿತು ನಾಯಕಿ ಚಾಮರಿ ಅಥಾಪತ್ತು(5), ಮಲ್ಶಾ ಶೆಹಾನಿ(9), ನೀಲಾಕ್ಷಿ ಡಿ ಸಿಲ್ವಾ(3), ಕವಿಶಾ ದಿಲ್ಹಾರಿ(1) ಅನುಷ್ಕಾ ಸಂಜೀವನಿ(5), ಸುಗಂದಿಕಾ ಕುಮಾರಿ(4), ಇನೋಕಾ ರಣವೀರ(1), ಅಚಿನಿ ಕುಲಸೂರಿಯಾ(1) ರನ್ ಗಳಿಸಿದರು. ಭಾರತದ ಪರ ದಯಾಲನ್ ಹೇಮಲತಾ ಮೂರು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ತಲಾ ಎರಡು ಮತ್ತು ರಾಧಾ ಯಾದವ್ ಒಂದ ವಿಕೆಟ್ ಕಬಳಿಸಿದರು. ಜೆಮಿಮಾ ರಾಡ್ರಿಗಸ್ರ ಅಭೂತಪೂರ್ವ 76 ರನ್ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ದೊರೆಯಿತು.
ಇದನ್ನೂ ಓದಿ : ದಕ್ಷಿಣ ಆಫ್ರಿಕಾದ ಎದುರಿನ ಉಳಿದೆರಡು ಪಂದ್ಯಗಳಿಗೆ ಬುಮ್ರಾ ಜಾಗಕ್ಕೆ ಸಿರಾಜ್