ETV Bharat / sports

ವಿರಾಟ್​, ರಾಹುಲ್​ ದಾಖಲೆ ಮೇಲೆ ಸೂರ್ಯ ಕಣ್ಣು: ಎರಡನೇ ಟಿ20ಯಲ್ಲಿ ಆಗಲಿದೆಯಾ ರೆಕಾರ್ಡ್​ ಬ್ರೇಕ್​​?

author img

By ETV Bharat Karnataka Team

Published : Dec 11, 2023, 6:59 PM IST

Fastest 2000 runs in T20 Cricket: ಟಿ20 ನಂ.1 ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ದಕ್ಷಿಣ ಆಫ್ರಿಕಾದ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 15 ರನ್​ ಗಳಿಸಿದರೆ ವಿರಾಟ್​ ಹಾಗೂ ರಾಹುಲ್​ ದಾಖಲೆ ಬ್ರೇಕ್​ ಆಗಲಿದೆ.

suryakumar yadav
suryakumar yadav

ಹೈದರಾಬಾದ್​​: ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 3 ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲ ಟಿ20 ಪಂದ್ಯ ಭಾನುವಾರ ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಎರಡನೇ ಟಿ20 ಪಂದ್ಯ ಡಿಸೆಂಬರ್ 12 ರಂದು (ಮಂಗಳವಾರ) ಸೇಂಟ್ ಜಾರ್ಜ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಈ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್​ಗಳಾದ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟುವ ಹಾಗೂ ವಿಕೆಟ್ ಕೀಪರ್ ಬ್ಯಾಟರ್​ ಕೆಎಲ್ ರಾಹುಲ್ ದಾಖಲೆಯನ್ನು ಮುರಿಯುವ ಅವಕಾಶ ಸೂರ್ಯ ಅವರಿಗೆ ಲಭಿಸಲಿದೆ. ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್​​ನಲ್ಲಿರುವ ಸೂರ್ಯಕುಮಾರ್​ ಯಾದವ್​ ತುಂಬಾ ಸುಲಭವಾಗಿ ದಾಖಲೆ ಮುರಿಯಲಿದ್ದಾರೆ.

ಏನದು ದಾಖಲೆ?: ಟೀಮ್​ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 2000 ರನ್ ಗಳಿಸಿದ ದಾಖಲೆಯಲ್ಲಿ ವಿರಾಟ್ ಕೊಹ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಭಾರತದ ಪರ ವೇಗವಾಗಿ 2000 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ನಂತರ ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಸೂರ್ಯಕುಮಾರ್ ಯಾದವ್ ತವರಿನ ಇಬ್ಬರು ಆಟಗಾರರನ್ನು ಹಿಂದಿಕ್ಕುವ ಸಾಧ್ಯತೆ ಇದೆ. ಸೂರ್ಯ ಅವರ 2000 ಅಂತಾರಾಷ್ಟ್ರೀಯ ಟಿ20 ರನ್​ಗೆ ಕೇವಲ 15 ರನ್‌ಗಳ ಕೊರತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 15 ರನ್ ಗಳಿಸಿದರೆ ವಿರಾಟ್ ರನ್ನು ಸರಿಗಟ್ಟಿ, ರಾಹುಲ್ ದಾಖಲೆ ಮುರಿಯಲಿದ್ದಾರೆ.

2000 ಟಿ20 ರನ್ ಪೂರೈಸಲು ವಿರಾಟ್ 56 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಕೆಎಲ್ ರಾಹುಲ್ 58 ಇನ್ನಿಂಗ್ಸ್‌ಗಳಲ್ಲಿ 2000 ರನ್ ಪೂರೈಸಿದ್ದಾರೆ. ಸೂರ್ಯ 58 ಪಂದ್ಯಗಳ 55 ಟಿ20 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 16 ಅರ್ಧ ಶತಕಗಳೊಂದಿಗೆ 1985 ರನ್ ಗಳಿಸಿದ್ದಾರೆ. ಅವರು ಟಿ20ಯಲ್ಲಿ 44.11 ಸರಾಸರಿ ಮತ್ತು 171.71 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿಂಗ್​ ಮಾಡಿದ್ದಾರೆ. ಎರಡನೇ ಪಂದ್ಯದಲ್ಲಿ 15 ರನ್ ಗಳಿಸಿದರೆ ವಿರಾಟ್ ಅವರ 56 ಇನ್ನಿಂಗ್ಸ್‌ಗಳ ದಾಖಲೆಯನ್ನು ಸರಿಗಟ್ಟಲಿದ್ದು, ಕೆಎಲ್ ರಾಹುಲ್ ದಾಖಲೆಯನ್ನು ಮುರಿಯಲಿದ್ದಾರೆ.

ವಿಶ್ವಕಪ್​ ಹಿನ್ನೆಲೆಯಲ್ಲಿ ಭರವಸೆಯ ಸರಣಿ: 2024ರ ವಿಶ್ವಕಪ್​ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಭಾರತಕ್ಕೆ ಅತ್ಯಂತ ಪ್ರಮುಖವಾಗಿದೆ. ವಿಶ್ವಕಪ್​​ಗೂ ಮುನ್ನ ಭಾರತ ಎರಡೇ ಅಂತಾರಾಷ್ಟ್ರೀಯ ಟಿ20 ಸರಣಿಯನ್ನು ಆಡಲಿದೆ. ದಕ್ಷಿಣ ಆಫ್ರಿಕಾದ ನಂತರ ತವರಿನಲ್ಲಿ ಆಫ್ಘನ್​ ವಿರುದ್ದ. ಆಟಗಾರರ ಆಯ್ಕೆಗೆ ಈ ಎರಡು ಸರಣಿಗಳನ್ನು ಪ್ರಮುಖ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಗೆಲ್ಲುವಲ್ಲಿ ವಿರಾಟ್​ ಪ್ರಮುಖ ಪಾತ್ರ ವಹಿಸಲಿದ್ದಾರೆ: ಜಾಕ್ ಕಾಲಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.