ETV Bharat / sports

ಕುಂಬ್ಳೆ ಸರ್​ ಜೊತೆಗೆ ಈ ದಾಖಲೆ ಹಂಚಿಕೊಂಡಿದ್ದು ತುಂಬಾ ವಿಶೇಷವೆನ್ನಿಸುತ್ತಿದೆ: ಅಜಾಜ್ ಪಟೇಲ್

author img

By

Published : Dec 4, 2021, 7:27 PM IST

ಟೆಸ್ಟ್​ನ ಮೊದಲ ದಿನವಾದ ಶುಕ್ರವಾರ ಭಾರತದ 4 ವಿಕೆಟ್​ ಪಡೆದಿದ್ದ ಅಜಾಜ್​ ಶನಿವಾರ ಉಳಿದ 6 ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟುವ ಮೂಲಕ ಇಂಗ್ಲೆಂಡ್​ನ ಜಿಮ್ ಲೇಕರ್ ಮತ್ತು ಭಾರತದ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆಯವರೊಂದಿಗೆ ಇನ್ನಿಂಗ್ಸ್​ನಲ್ಲಿ ಎಲ್ಲಾ 10 ವಿಕೆಟ್​ ಪಡೆದ ದಾಖಲೆಗೆ ಪಾತ್ರರಾದರು.

ಅನಿಲ್ ಕುಂಬ್ಳೆ ಅಜಾಜ್ ಪಟೇಲ್ ದಾಖಲೆ

ಮುಂಬೈ: ಭಾರತ ತಂಡದ ವಿರುದ್ಧದ 2ನೇ ಟೆಸ್ಟ್​ನಲ್ಲಿ ಕಿವೀಸ್​ ಭಾರಿ ಹಿನ್ನಡೆ ಸಾಧಿಸಿದೆ. ಆದರೆ, ಮೊದಲ ಇನ್ನಿಂಗ್ಸ್​ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಕಿವೀಸ್ ಬೌಲರ್​ ಅಜಾಜ್ ಪಟೇಲ್ 10 ಪಡೆಯುವ ಮೂಲಕ ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್​ ಎನಿಸಿಕೊಂಡಿದ್ದಾರೆ.

ಟೆಸ್ಟ್​ನ ಮೊದಲ ದಿನವಾದ ಶುಕ್ರವಾರ ಭಾರತದ 4 ವಿಕೆಟ್​ ಪಡೆದಿದ್ದ ಅಜಾಜ್​ ಶನಿವಾರ ಉಳಿದ 6 ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟುವ ಮೂಲಕ ಇಂಗ್ಲೆಂಡ್​ನ ಜಿಮ್ ಲೇಕರ್ ಮತ್ತು ಭಾರತದ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆಯವರೊಂದಿಗೆ ಇನ್ನಿಂಗ್ಸ್​ನಲ್ಲಿ ಎಲ್ಲಾ 10 ವಿಕೆಟ್​ ಪಡೆದ ದಾಖಲೆಗೆ ಪಾತ್ರರಾದರು.

ಭಾರತದಲ್ಲಿ ಜನಿಸಿ 1996ರಲ್ಲಿ ಕುಟುಂಬ ಸಮೇತ ನ್ಯೂಜಿಲ್ಯಾಂಡ್​ಗೆ ವಲಸೆ ಹೋಗಿದ್ದ ಅಜಾಜ್​ ಪಟೇಲ್​ ಪ್ರಮುಖ ವಿಶ್ವದಾಖಲೆಯನ್ನು ಅನಿಲ್ ಕುಂಬ್ಳೆ ಜೊತೆಗೆ ಹಂಚಿಕೊಳ್ಳುವುದು ತುಂಬಾ ವಿಶೇಷ ಎಂದಿದ್ದಾರೆ.

ಪ್ರಾಮಾಣಿಕವಾಗಿ, ಇದು ಕನಸಾಗಿರಬಹುದು ಎನ್ನುಸುತ್ತಿದೆ ಮತ್ತು ನನ್ನ ವೃತ್ತಿಜೀವನದಲ್ಲಿ ಈ ದಾಖಲೆ ಮಾಡಲು ಸಾಧ್ಯವಾಗಿದ್ದು ಬಹಳ ವಿಶೇಷವಾಗಿದೆ. ಅಲ್ಲದೇ ಮುಂಬೈನಲ್ಲಿ ಆ ಸಾಧನೆ ಮಾಡಿರುವುದಕ್ಕೆ ತುಂಬಾ ಖುಷಿಯಾಗಿದೆ " ಎಂದು ಪಟೇಲ್ 10 ವಿಕೆಟ್​ ಪಡೆದ ನಂತರ ಹೇಳಿದ್ದಾರೆ.

" ಇದು ನನಗೆ ಮಾತ್ರವಲ್ಲದೇ ನನ್ನ ಕುಟುಂಬಕ್ಕೆ ಇದು ವಿಶೇಷ ಸಂದರ್ಭವಾಗಿದೆ. ದುರದೃಷ್ಟವಶಾತ್, ಈ ದಿನ ಅವರು ಕೋವಿಡ್‌ ಕಾರಣದಿಂದ ಇಲ್ಲಿಲ್ಲ. ಆದರೆ ಕುಂಬ್ಳೆ ಸರ್ ಅವರೊಂದಿಗೆ ಅತ್ಯಂತ ಪ್ರಸಿದ್ಧ ದಾಖಲೆಯನ್ನು ಹಂಚಿಕೊಂಡಿರುವುದು ತುಂಬಾ ವಿಶೇಷ" ಎಂದು ಅಜಾಜ್​ ಹೇಳಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾ ವಿರುದ್ಧ ಒಂದೇ ಇನ್ಸಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದು ಅಜಾಜ್‌ ಪಟೇಲ್‌ ದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.