ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಇಲ್ಲಿ ಭಾರತ ಮತ್ತು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳು ವನಿತೆಯರ ಟಿ20 ವಿಶ್ವಕಪ್ನಲ್ಲಿ ಮುಖಾಮುಖಿಯಾಗಿದ್ದು, ವುಮೆನ್ ಇನ್ ಬ್ಲೂ 7 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕ್ ವನಿತೆಯರು ನೀಡಿದ್ದ 150 ರನ್ ಸಾಧಾರಣ ಗುರಿಯನ್ನು ನೀಡಿದರು. ಇದನ್ನು ಬೆನ್ನು ಹತ್ತಿದ ಭಾರತದ ವನಿತೆಯರು 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿದರು. ಈ ಮೂಲಕ ವನಿತೆಯ ಟಿ20 ಕ್ರಿಕೆಟ್ನಲ್ಲಿ ಎರಡನೇ ಅತೀ ಹೆಚ್ಚು ರನ್ ಚೇಸ್ ಇದಾಗಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಬಿಸ್ಮಾ ಮರೂಫ್ ಮತ್ತು ಆಯೆಶಾ ನಸೀಮ್ 81 ರನ್ ಜೊತೆಯಾಟದಲ್ಲಿ 4 ವಿಕೆಟ್ ನಷ್ಟಕ್ಕೆ 149ಕ್ಕೆ ಗಳಿಸಿತ್ತು. ಇದನ್ನೂ ಬೆನ್ನು ಹತ್ತಿದ ಭಾರತದ ವನಿತೆಯರು 38 ರನ್ ಜೊತೆಯಾಟದಿಂದ ಉತ್ತಮ ಆರಂಭ ಮಾಡಿದರು. ಯಾಸ್ತಿಕಾ ಭಾಟಿಯಾ ಸಾದಿಯಾ ಇಕ್ಬಾಲ್ಗೆ 17 ರನ್ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ನಂತರ ಬಂದ ಜೆಮಿಮಾ ರೋಡ್ರಿಗಸ್ ಅವರು ಶಫಾಲಿ ವರ್ಮಾ(33) ರನ್ನು ಕೂಡಿದರು. ಆದರೆ ಜೊತೆಗೂಡಿ ತಂಡಕ್ಕೆ 27 ರನ್ ಸೇರಿಸಿದ ಈ ಜೋಡಿಯನ್ನು ನಶ್ರಾ ಸಂಧು ಬೇರ್ಪಡಿಸಿದರು.
-
.@JemiRodrigues scored a stunning 5⃣3⃣* in the chase & bagged the Player of the Match award as #TeamIndia commenced their #T20WorldCup campaign with a win over Pakistan 🙌 👏
— BCCI Women (@BCCIWomen) February 12, 2023 " class="align-text-top noRightClick twitterSection" data="
Scorecard ▶️ https://t.co/OyRDtC9SWK #INDvPAK pic.twitter.com/JvwfFtMkRg
">.@JemiRodrigues scored a stunning 5⃣3⃣* in the chase & bagged the Player of the Match award as #TeamIndia commenced their #T20WorldCup campaign with a win over Pakistan 🙌 👏
— BCCI Women (@BCCIWomen) February 12, 2023
Scorecard ▶️ https://t.co/OyRDtC9SWK #INDvPAK pic.twitter.com/JvwfFtMkRg.@JemiRodrigues scored a stunning 5⃣3⃣* in the chase & bagged the Player of the Match award as #TeamIndia commenced their #T20WorldCup campaign with a win over Pakistan 🙌 👏
— BCCI Women (@BCCIWomen) February 12, 2023
Scorecard ▶️ https://t.co/OyRDtC9SWK #INDvPAK pic.twitter.com/JvwfFtMkRg
ನಂತರ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ (16) ಹೆಚ್ಚು ಹೊತ್ತು ನಿಲ್ಲಲಿಲ್ಲ. ಜೆಮಿಮಾ ರೋಡ್ರಿಗಸ್ ಕೂಡಿಕೊಂಡ ವಿಕೆಟ್ ಕೀಪರ್ ರಿಚಾ ಘೋಷ್ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯದರು. ಈ ಎರಡು ಜೋಡಿ 58 ರನ್ಗಳ ಜೊತೆಯಾಟ ನೀಡಿದರು. ಜೆಮಿಮಾ ರೋಡ್ರಿಗಸ್ 38 ಎಸೆತಗಳಲ್ಲಿ 8 ಬೌಂಡರಿಯಿಂದ ಅಜೇಯವಾಗಿ 53 ರನ್ ಕಲೆಹಾಕಿ ಆಕರ್ಷಕ ಅರ್ಧ ಶತಕ ದಾಖಲಿಸಿದರು. ರಿಚಾ ಘೋಷ್ 20 ಎಸೆತದಲ್ಲಿ 5 ಬೌಂಡರಿಯಿಂದ ಅಜೇಯ 31 ರನ್ ಗಳಿಸಿದ್ದರು. ಈ ಜೋಡಿ ಕೊನೆಯ ಓವರ್ ಉಳಿಸಿಕೊಂಡು ಪಂದ್ಯವನ್ನು ಜಯಿಸಿತು.
-
What a run chase! 🔥
— ICC (@ICC) February 12, 2023 " class="align-text-top noRightClick twitterSection" data="
The second-highest successful run-chase in Women's #T20WorldCup history 💥#INDvPAK | #TurnItUp pic.twitter.com/eWJ6dBxCQ3
">What a run chase! 🔥
— ICC (@ICC) February 12, 2023
The second-highest successful run-chase in Women's #T20WorldCup history 💥#INDvPAK | #TurnItUp pic.twitter.com/eWJ6dBxCQ3What a run chase! 🔥
— ICC (@ICC) February 12, 2023
The second-highest successful run-chase in Women's #T20WorldCup history 💥#INDvPAK | #TurnItUp pic.twitter.com/eWJ6dBxCQ3
ಭಾರತದ ಪರ ಅದ್ಭುತ ಅರ್ಧ ಶತಕ ಗಳಿಸಿ ಗೆಲುವಿಗೆ ಕಾರಣರಾದ ಜೆಮಿಮಾ ರೋಡ್ರಿಗಸ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ವನಿತೆಯರ ಟಿ20ಯಲ್ಲಿ ಭಾರತ ತಂಡ ಚೇಸ್ ಮಾಡಿದ ಅತೀ ಹೆಚ್ಚಿನ ರನ್ ಎಂಬ ದಾಖಲೆಯಾಯಿತು.
ಬಿಸ್ಮಾ ಮರೂಫ್ ಮತ್ತು ಆಯೆಶಾ ನಸೀಮ್ ಅದ್ಭುತ ಜೊತೆಯಾಟ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಪಾಕಿಸ್ತಾನಕ್ಕೆ ಭಾರತೀಯ ಬೌಲಿಂಗ್ ಪಡೆ ಆರಂಭದಲ್ಲಿ ಕಾಡಿತಾದರೂ, ಬಿಸ್ಮಾ ಮರೂಫ್ ಮತ್ತು ಆಯೆಶಾ ನಸೀಮ್ ದಿಟ್ಟವಾಗಿ ನಿಂತು ಪಾಕ್ ಪರ 150 ರನ್ ಗುರಿ ನೀಡಲು ಸಹಕಾರಿಯಾದರು. ದೀಪ್ತಿ ಶರ್ಮಾರ ಬೌಲಿಂಗ್ಗೆ 8 ರನ್ ಗಳಿಸಿದ್ದ ಜವೇರಿಯಾ ಖಾನ್ ವಿಕೆಟ್ ಒಪ್ಪಿಸಿದ್ದರು. ಬಿಸ್ಮಾ ಮರೂಫ್ 12, ನಿದಾ ದಾರ್ 0 ಮತ್ತು ಸಿದ್ರಾ ಅಮೀನ್ 11 ರನ್ ಔಟ್ ಆದರು. ಆದರೆ ಪಾಕ್ ಪರ ಬಿಸ್ಮಾ ಮರೂಫ್ ಮತ್ತು ಆಯೆಶಾ ನಸೀಮ್ ಕ್ರೀಸ್ನಲ್ಲಿ ಬಲವಾಗಿ ನಿಂತು ಹೋರಾಡಿದರು.
ಬಿಸ್ಮಾ ಮರೂಫ್ ಬಿರುಸಿನ ಆಟ ಆಡಿ 55 ಎಸೆತದಲ್ಲಿ 7 ಬೌಂಡರಿ ಸಹಿತ 68 ರನ್ ಕಲೆಹಾಕಿದರು. ಇತ್ತ ಆಯೇಶಾ ನಸೀಮ್ ಅವರು ಮರೂಫ್ ಜೊತೆಯಾಗಿ ನಿಂತು 81 ರನ್ ಜೊತೆಯಾಟ ಮಾಡಿದರು. ಆಯೇಶಾ ನಸೀಮ್ 2 ಸಿಕ್ಸರ್ ಮತ್ತು 2 ಬೌಂಡರಿಯಿಂದ 43 ರನ್ಗಳಿಸಿದರು. 12.1 ಓವರ್ ನಂತರ ವಿಕೆಟ್ ಕಾಯ್ದುಕೊಂಡ ಜೋಡಿ 149 ರನ್ ಕಲೆಹಾಕಿದರು.
ಭಾರತದ ಪರ ರಾಧಾ ಯಾದವ್ 2 ಮತ್ತು ಪೂಜಾ ವಸ್ತ್ರಾಕರ್ ಹಾಗೂ ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: ಭಾರತ ಪಾಕ್ ಮುಖಾಮುಖಿ: ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ