ಚೆನ್ನೈ (ತಮಿಳುನಾಡು): ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ನಂತರ ಇದೀಗ ಪಾಕಿಸ್ತಾನವನ್ನೂ ಮಣಿಸಿದೆ. ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಹಾಗು ರಹಮತ್ ಶಾ ಅವರ ತಲಾ ಅರ್ಧಶತಕದಾಟದ ನೆರವಿನಿಂದ ಅಫ್ಘಾನಿಸ್ತಾನ 6 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳಿಂದ ಭರ್ಜರಿ ಜಯಭೇರಿ ಬಾರಿಸಿತು. ಸತತ ಏಳು ಏಕದಿನ ಪಂದ್ಯಗಳಲ್ಲಿ ಸೋಲು ಕಂಡಿದ್ದ ಅಫ್ಘನ್ಗೆ ಇದು ಮೊದಲ ಜಯವಾಗಿದೆ.
-
𝐇𝐢𝐬𝐭𝐨𝐫𝐲 𝐂𝐫𝐞𝐚𝐭𝐞𝐝 𝐢𝐧 𝐂𝐡𝐞𝐧𝐧𝐚𝐢! 🙌
— Afghanistan Cricket Board (@ACBofficials) October 23, 2023 " class="align-text-top noRightClick twitterSection" data="
Congratulations to AfghanAtalan and the whole Afghan Nation for this marvelous victory over @TheRealPCB on the biggest stage of the world. 🤩👏#AfghanAtalan | #CWC23 | #AFGvPAK | #WarzaMaidanGata pic.twitter.com/nAP5VvTnSY
">𝐇𝐢𝐬𝐭𝐨𝐫𝐲 𝐂𝐫𝐞𝐚𝐭𝐞𝐝 𝐢𝐧 𝐂𝐡𝐞𝐧𝐧𝐚𝐢! 🙌
— Afghanistan Cricket Board (@ACBofficials) October 23, 2023
Congratulations to AfghanAtalan and the whole Afghan Nation for this marvelous victory over @TheRealPCB on the biggest stage of the world. 🤩👏#AfghanAtalan | #CWC23 | #AFGvPAK | #WarzaMaidanGata pic.twitter.com/nAP5VvTnSY𝐇𝐢𝐬𝐭𝐨𝐫𝐲 𝐂𝐫𝐞𝐚𝐭𝐞𝐝 𝐢𝐧 𝐂𝐡𝐞𝐧𝐧𝐚𝐢! 🙌
— Afghanistan Cricket Board (@ACBofficials) October 23, 2023
Congratulations to AfghanAtalan and the whole Afghan Nation for this marvelous victory over @TheRealPCB on the biggest stage of the world. 🤩👏#AfghanAtalan | #CWC23 | #AFGvPAK | #WarzaMaidanGata pic.twitter.com/nAP5VvTnSY
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ ಅಬ್ದುಲ್ಲಾ ಶಫೀಕ್, ಬಾಬರ್ ಆಜಂ ಅವರ ಅರ್ಧಶತಕ ಮತ್ತು ಸೌದ್ ಶಕೀಲ್, ಇಫ್ತಕರ್ ಅಹ್ಮದ್ 40 ರನ್ ಕೊನೆಯ ಹೋರಾಟದ ನೆರವಿನಿಂದ 282 ರನ್‌ಗಳನ್ನು ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಅಫ್ಘನ್ಗೆ ಉತ್ತಮ ಆರಂಭ ದೊರೆಯಿತು. ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಪಾಕ್ ಆರಂಭಿಕ ಬೌಲರ್ಗಳ ವಿರುದ್ಧ ಸಮರ್ಥ ಆಟವಾಡಿದರು. ಈ ಜೋಡಿ ಮೊದಲ ವಿಕೆಟ್ಗೆ 130 ರನ್‌ಗಳ ಜತೆಯಾಟವಾಡಿತು.
- " class="align-text-top noRightClick twitterSection" data="">
ರಹಮಾನುಲ್ಲಾ ಗುರ್ಬಾಜ್ ಎಂದಿನಂತೆ ತಂಡಕ್ಕೆ ಚುರುಕಾದ ಆರಂಭ ನೀಡಿದರು. ಈ ಜೋಡಿ ಮೊದಲ ಪವರ್ ಪ್ಲೇ ಅಂತ್ಯಕ್ಕೆ 60 ರನ್ ಕಲೆಹಾಕಿತು. ಇದರಿಂದ ರನ್‌ರೇಟ್ ಒತ್ತಡ ಕಳೆದುಕೊಂಡಿತು. ಅಲ್ಲದೇ ಪ್ರತಿ ಬಾಲ್ಗೆ ಒಂದು ರನ್ ಗಳಿಸಿದರೂ ಪಂದ್ಯ ಗೆಲ್ಲಬಹುದು ಎಂಬ ವಿಶ್ವಾಸದಲ್ಲೇ ಮುಂದುವರೆಯಿತು. ಎಚ್ಚರಿಕೆಯಿಂದಲೇ ಬ್ಯಾಟ್ ಬೀಸುತ್ತಿದ್ದ ರಹಮಾನುಲ್ಲಾ ಗುರ್ಬಾಜ್ 53ನೇ ಬಾಲ್ನಲ್ಲಿ ಔಟಾದರು. ಇನ್ನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 1 ಸಿಕ್ಸ್ನ ಸಹಾಯದಿಂದ 65 ರನ್ ಗಳಿಸಿದರು.
ಎರಡನೇ ವಿಕೆಟ್ಗೆ ಒಂದಾದ ಇಬ್ರಾಹಿಂ ಜದ್ರಾನ್ ಮತ್ತು ರಹಮತ್ ಶಾ 60 ರನ್ ಪಾಲುದಾರಿಕೆ ಮಾಡಿದರು. ಪಾಕಿಸ್ತಾನದ 6 ಬೌಲರ್ಗಳು ವಿಕೆಟ್ ಕಬಳಿಸಲು ಹರಸಾಹಸಪಟ್ಟರಾದರೂ ಯಾವುದೇ ಫಲ ನೀಡಲಿಲ್ಲ. ಇಂಗ್ಲೆಂಡ್ ವಿರುದ್ಧ ಗೆದ್ದಿದ್ದ ತಂಡ ಅದೇ ಆತ್ಮವಿಶ್ವಾಸದಲ್ಲಿ ಮೈದಾನದಲ್ಲಿ ಆಕರ್ಷಕ ಪ್ರದರ್ಶನ ನೀಡಿತು. ಅರ್ಧಶತಕ ದಾಟಿ ಶತಕದತ್ತ ದಾಪುಗಾಲು ಹಾಕುತ್ತಿದ್ದ 13 ರನ್ನಿಂದ 5ನೇ ಏಕದಿನ ಶತಕ ಗಳಿಸುವ ಅವಕಾಶ ಕೈಚೆಲ್ಲಿದರು. 113 ಬಾಲ್ ಆಡಿ 87 ರನ್ ಗಳಿಸಿದ್ದ ಅವರು ಕೀಪರ್ ಕ್ಯಾಚ್ಗೆ ಬಲಿಯಾದರು.
-
Here is what you all have been waiting for; Enjoy the winning celebrations and an outstanding @RashidKhan_19 dance! 👇#AfghanAtalan | #CWC23 | #AFGvPAK | #WarzaMaidanGata pic.twitter.com/Tb6KVbLlji
— Afghanistan Cricket Board (@ACBofficials) October 23, 2023 " class="align-text-top noRightClick twitterSection" data="
">Here is what you all have been waiting for; Enjoy the winning celebrations and an outstanding @RashidKhan_19 dance! 👇#AfghanAtalan | #CWC23 | #AFGvPAK | #WarzaMaidanGata pic.twitter.com/Tb6KVbLlji
— Afghanistan Cricket Board (@ACBofficials) October 23, 2023Here is what you all have been waiting for; Enjoy the winning celebrations and an outstanding @RashidKhan_19 dance! 👇#AfghanAtalan | #CWC23 | #AFGvPAK | #WarzaMaidanGata pic.twitter.com/Tb6KVbLlji
— Afghanistan Cricket Board (@ACBofficials) October 23, 2023
ಗೆಲುವಿಗೆ ಅಜೇಯ ಜತೆಯಾಟ: ರಹಮತ್ ಶಾ ಮತ್ತು ಹಶ್ಮತುಲ್ಲಾ ಶಾಹಿದಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಇಬ್ಬರು 3ನೇ ವಿಕೆಟ್ಗೆ 96ರನ್ ಪಾಲುದಾರಿಕೆ ಹಂಚಿಕೊಂಡಿತು. ರಹಮತ್ ಶಾ ತಮ್ಮ ಅರ್ಧಶತಕವನ್ನು ಪೂರೈಸಿಕೊಂಡರು. ಇಬ್ಬರು ಅಜೇಯರಾಗಿ 6 ಬಾಲ್ ಉಳಿಸಿಕೊಂಡು 286 ರನ್ ಗಳಿಸಿ ತಂಡಕ್ಕೆ 8 ವಿಕೆಟ್ಗಳ ಜಯ ತಂದಿತ್ತರು. ರಹಮತ್ ಶಾ 84 ಬಾಲ್‌ನಿಂದ 5 ಬೌಂಡರಿ, 2 ಸಿಕ್ಸ್ ಸಹಾಯದಿಂದ 77 ರನ್ ಗಳಿಸಿದರೆ, ನಾಯಕ ಹಶ್ಮತುಲ್ಲಾ ಶಾಹಿದಿ 45 ಬಾಲ್ನಲ್ಲಿ 4 ಬೌಂಡರಿಯಿಂದ 48 ರನ್ ಪೇರಿಸಿದರು.
ಪಾಕ್ ಫೀಲ್ಡಿಂಗ್ ಎಡವಟ್ಟು: ಪಾಕಿಸ್ತಾನ ಬೌಲಿಂಗ್, ಬ್ಯಾಟಿಂಗ್ ಜತೆಗೆ ಫೀಲ್ಡಿಂಗ್ನಲ್ಲೂ ಗುಣಮಟ್ಟ ಕಳೆದುಕೊಂಡಿತು. ಏಷ್ಯಾಕಪ್ನಿಂದಲೇ ತಂಡದ ಕ್ಷೇತ್ರ ರಕ್ಷಣೆ ಬಗ್ಗೆ ಟೀಕೆಗಳು ಕೇಳಿ ಬರುತ್ತಿದ್ದವು. ಈಗ ವಿಶ್ವಕಪ್ನಲ್ಲೂ ಮುಂದುವೆರೆದಿದ್ದು, ಕ್ಯಾಚ್ ಬಿಡುವುದು ಬೌಂಡರಿ ಲೈನ್ನಲ್ಲಿ ಮಾಡುವ ಎಡವಟ್ಟುಗಳು ಎದುರಾಳಿಯ ಗೆಲುವಿಗೆ ಕೊಡುಗೆ ನೀಡುತ್ತಿದೆ. 39 ರನ್ ಗಳಿಸಿದ್ದಾಗ ಜದ್ರಾನ್ ಕ್ಯಾಚ್ ಅನ್ನು ರಜ್ವಾನ್ ಚೆಲ್ಲಿದ್ದು ತಂಡಕ್ಕೆ ದುಬಾರಿಯಾಯಿತು.
-
A composed 87 from Ibrahim Zadran helped Afghanistan to their maiden ODI win against Pakistan 👏
— ICC Cricket World Cup (@cricketworldcup) October 23, 2023 " class="align-text-top noRightClick twitterSection" data="
It also helps him win the @aramco #POTM 🎉#CWC23 | #PAKvAFG pic.twitter.com/pUjWiYCery
">A composed 87 from Ibrahim Zadran helped Afghanistan to their maiden ODI win against Pakistan 👏
— ICC Cricket World Cup (@cricketworldcup) October 23, 2023
It also helps him win the @aramco #POTM 🎉#CWC23 | #PAKvAFG pic.twitter.com/pUjWiYCeryA composed 87 from Ibrahim Zadran helped Afghanistan to their maiden ODI win against Pakistan 👏
— ICC Cricket World Cup (@cricketworldcup) October 23, 2023
It also helps him win the @aramco #POTM 🎉#CWC23 | #PAKvAFG pic.twitter.com/pUjWiYCery
ಇಬ್ರಾಹಿಂ ಜದ್ರಾನ್ ಪಂದ್ಯಶ್ರೇಷ್ಠ: ಪಾಕ್ ಪರ ಹಸನ್ ಅಲಿ ಮತ್ತು ಶಾಹಿನ್ ಶಾ ಅಫ್ರಿದಿ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿ ಆದರು. 87 ರನ್ ಅಮೂಲ್ಯ ಬ್ಯಾಟಿಂಗ್ ಕೊಡುಗೆ ನೀಡಿದ ಇಬ್ರಾಹಿಂ ಜದ್ರಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಗುಂಪುಗಾರಿಕೆ ಆರೋಪ: ಕ್ರಿಕೆಟ್ ಮಂಡಳಿಯ ಸ್ಪಷ್ಟನೆ ಹೀಗಿದೆ..