ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್‌ನ ಇಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ಥಾನದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದರು. ರಹಮಾನುಲ್ಲಾ ಗುರ್ಬಾಜ್ ಮತ್ತು ಇಕ್ರಮ್ ಅಲಿಖಿಲ್ ಅವರ ಅರ್ಧಶತಕದ ಪ್ರದರ್ಶನದಿಂದ ಅಫ್ಘಾನ್ ತಂಡ 284 ರನ್ ಕಲೆಹಾಕಿತು. ಆರಂಭಿಕರು ಮತ್ತು ಕೆಳ ಕ್ರಮಾಂಕದ ಪ್ರದರ್ಶನದ ಹೊರತಾಗಿ 49.5 ಓವರ್ಗಳಿಗೆ ಅಫ್ಘನ್ ಸರ್ವಪತನ ಕಂಡಿತು.
-
Scores on the doors at the halfway stage...
— England Cricket (@englandcricket) October 15, 2023 " class="align-text-top noRightClick twitterSection" data="
🇦🇫 Afghanistan are all out for 2️⃣8️⃣4️⃣.#EnglandCricket | #CWC23 pic.twitter.com/6zb0rrqpPq
">Scores on the doors at the halfway stage...
— England Cricket (@englandcricket) October 15, 2023
🇦🇫 Afghanistan are all out for 2️⃣8️⃣4️⃣.#EnglandCricket | #CWC23 pic.twitter.com/6zb0rrqpPqScores on the doors at the halfway stage...
— England Cricket (@englandcricket) October 15, 2023
🇦🇫 Afghanistan are all out for 2️⃣8️⃣4️⃣.#EnglandCricket | #CWC23 pic.twitter.com/6zb0rrqpPq
ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತಾದರೂ, ಮಧ್ಯಮ ಕ್ರಮಾಂಕದ ವೈಫಲ್ಯ ಕಂಡು ಬಂತು. ಕೆಳ ಕ್ರಮಾಂಕದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದ್ದು ತಂಡ 300ರ ಗಡಿ ಸಮೀಪಿತು. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ದೊಡ್ಡ ಅಂತರದ ಸೋಲುಂಡ ಇಂಗ್ಲೆಂಡ್‌ಗೆ ರನ್ರೇಟ್ ಚೇತರಿಕೆಗೆ ಭರ್ಜರಿ ಪ್ರದರ್ಶನದ ಗೆಲುವು ಬೇಕಿದೆ.
ಅಫ್ಘಾನಿಸ್ತಾನದಲ್ಲಿ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಉತ್ತಮ ಆರಂಭ ನೀಡಿದರು. ಗುರ್ಬಾಜ್ ಅಬ್ಬರದ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದರು. ಹೊಸ ಬಾಲ್ನಲ್ಲಿ ದೆಹಲಿ ಪಿಚ್ನಲ್ಲಿ ಆಂಗ್ಲ ವೇಗಿಗಳ ಬೌಲಿಂಗ್ ಪರಿಣಾಮ ಬೀರಲಿಲ್ಲ. ಇದನ್ನು ಲಾಭವಾಗಿ ಬಳಸಿಕೊಂಡ ಯುವ ಆಟಗಾರ ಗುರ್ಬಾಜ್ ಬೌಂಡರಿ, ಸಿಕ್ಸ್ರ್ಗಳ ಮೂಲಕ ರನ್ ಕದಿಯಲು ಪ್ರಾರಂಭಿಸಿದರು. ಮೊದಲ ಪವರ್ ಪ್ಲೇ ಮುಕ್ತಾಯಕ್ಕೆ ಅಫ್ಘಾನ್ ಶೂನ್ಯ ವಿಕೆಟ್ ನಷ್ಟಕ್ಕೆ 79 ರನ್ಗಳ ಪಾಲದಾರಿಕೆ ಮಾಡಿತು. ಇದು ವಿಶ್ವಕಪ್ನಲ್ಲಿ 10 ಓವರ್ಗೆ ಅಫ್ಘಾನ್ ಗಳಿಸಿದ ಬೃಹತ್ ಮೊತ್ತ.
ಶತಕದ ಜೊತೆಯಾಟ: ಆರಂಭಿಕ ಈ ಜೋಡಿ ಮುಂದುವರೆದು ಶತಕದ ಜೊತೆಯಾಟ ಆಚರಿಸಿಕೊಂಡಿತು. ಗುರ್ಬಾಜ್ ಒಂದೆಡೆ ಅಬ್ಬರದ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದರೆ, ಜದ್ರಾನ್ ಸಾಥ್ ನೀಡಿದರು. ಈ ವೇಳೆ ಇಂಗ್ಲೆಂಡ್ನ ಟಾಪ್ ಕ್ಲಾಸ್ ಬೌಲರ್ ಆದಿಲ್ ರಶೀದ್ ಫಿರೋಜ್ ಶಾ ಕೋಟ್ಲಾ ಪಿಚ್ನಲ್ಲಿ ತಮ್ಮ ಕೈಚಳಕ ತೋರಿದರು. 114 ರನ್ಗಳ ಜೊತೆಯಾಡುತ್ತಿದ್ದಾಗ ಜದ್ರಾನ್ (28) ವಿಕೆಟ್ ಪಡೆದು ಜೊತೆಯಾಟವನ್ನು ಆದಿಲ್ ರಶೀದ್ ಬ್ರೇಕ್ ಮಾಡಿದರು. ಜದ್ರಾನ್ ಬೆನ್ನಲ್ಲೇ ರಹಮತ್ ಶಾ (3) ಸಹ ಆದಿಲ್ ರಶೀದ್ಗೆ ವಿಕೆಟ್ ಕೊಟ್ಟರು.
ಮಧ್ಯಮ ಕ್ರಮಾಂಕದ ವೈಫಲ್ಯ: 80 ರನ್ ಗಳಿಸಿ ಆಡುತ್ತಿದ್ದ ಗುರ್ಬಾಜ್ ರನ್ ಔಟ್ಗೆ ಬಲಿಯಾದರು. ಅವರು ಈ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಗಳಿಸಿದ್ದರು. ಗುರ್ಬಾಜ್ ಔಟ್ ಬಳಿಕ ಹಶ್ಮತುಲ್ಲಾ ಶಾಹಿದಿ (14), ಅಜ್ಮತುಲ್ಲಾ ಒಮರ್ಜಾಯ್ (19) ಮತ್ತು ಮೊಹಮ್ಮದ್ ನಬಿ (9) ವಿಕೆಟ್ ಉರುಳಿತು. ಇದರಿಂದ ಮಧ್ಯಮ ಕ್ರಮಾಂಕದಲ್ಲಿ ರನ್ ಬರಲೇ ಇಲ್ಲ.
ಕೆಳ ಕ್ರಮಾಂಕದ ಆಸರೆ: ಇಕ್ರಮ್ ಅಲಿಖಿಲ್ ಮತ್ತು ಆಲ್ರೌಂಡರ್ ರಶೀದ್ ಖಾನ್ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಆಸರೆ ಆದರು. ಇದರಿಂದ ಅಫ್ಘಾನಿಸ್ತಾನ 250ರ ಗಡಿ ದಾಟಿತು. ಇಕ್ರಮ್ ಅಲಿಖಿಲ್ 3 ಬೌಂಡರಿ ಮತ್ತು 2 ಸಿಕ್ಸ್ನಿಂದ ಅರ್ಧಶತಕ ಗಳಿಸಿದರು. ರಶೀದ್ ಖಾನ್ (23), ಮುಜೀಬ್ ಉರ್ ರಹಮಾನ್ (28) ತಂಡಕ್ಕೆ ಕೊನೆಯಲ್ಲಿ ರನ್ ಗಳಿಸಿದ್ದು 300ರ ಸಮೀಪಕ್ಕೆ ಗುರಿಯನ್ನು ಕೊಂಡೊಯ್ಯಿತು.
ಇಂಗ್ಲೆಂಡ್ ಪರ ಆದಿಲ್ ರಶೀದ್ 3, ಮಾರ್ಕ್ ವುಡ್ 2 ವಿಕೆಟ್ ಪಡೆದರೆ, ರೀಸ್ ಟೋಪ್ಲಿ, ಜೋ ರೂಟ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ತಲಾ ಒಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ವಿಶ್ವಕಪ್ನಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಗೆಲುವು: ಮುಂದಿನ ಸವಾಲೇನು? ಈ ತಂಡಗಳನ್ನು ಮಣಿಸುವುದೇ ರೋಹಿತ್ ಟೀಂ?