ETV Bharat / sports

ODI World Cup: ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಸಿದ್ಧತೆ; ಸಂಭಾವ್ಯ ಭಾರತ ತಂಡ ಹೀಗಿದೆ..

ODI World Cup: ಏಕದಿನ ಕ್ರಿಕೆಟ್‌ ವಿಶ್ವಕಪ್​ಗೆ ಸಪ್ಟೆಂಬರ್​ 5ರೊಳಗೆ ತಾತ್ಕಾಲಿಕ ಹಾಗೂ 27ರೊಳಗೆ ಅಂತಿಮ ತಂಡವನ್ನು ಪ್ರಕಟಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ತಿಳಿಸಿದೆ.

world cup 2023
world cup 2023
author img

By

Published : Aug 8, 2023, 8:04 PM IST

ನವದೆಹಲಿ: ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ಗೆ ಇನ್ನು ಎರಡು ತಿಂಗಳು ಮಾತ್ರ ಬಾಕಿ. ಅಕ್ಟೋಬರ್​ 5ರಿಂದ ಪ್ರಾರಂಭವಾಗುವ ಪಂದ್ಯಾವಳಿಗೆ ಸಪ್ಟೆಂಬರ್ 5ರೊಳಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ (ಐಸಿಸಿ) ಎಲ್ಲ ಕ್ರಿಕೆಟ್​ ಮಂಡಳಿಗಳು ತಾತ್ಕಾಲಿಕ 15 ಆಟಗಾರರ ಪಟ್ಟಿ ಸಲ್ಲಿಸಬೇಕಿದೆ. ಸೆಪ್ಟಂಬರ್​ 27ರೊಳಗೆ ಅಂತಿಮ ತಂಡ ಪ್ರಕಟಿಸಬೇಕು. ಆಸ್ಟ್ರೇಲಿಯಾ ಈಗಾಗಲೇ 18 ಸದಸ್ಯರ ತಂಡವನ್ನು ಪ್ರಕಟಿಸಿದೆ.

  • Teams need to announce the initial squad by September 5th and final 15 with any changes by September 27th for the World Cup. [PTI] pic.twitter.com/zHlzE50IvJ

    — Johns. (@CricCrazyJohns) August 8, 2023 " class="align-text-top noRightClick twitterSection" data=" ">

ಭಾರತ ತಂಡದ ಆಯ್ಕೆಯಲ್ಲಿ ಹಲವು ಗೊಂದಲಗಳಿದ್ದು ಗಾಯದಿಂದ ಚೇತರಿಸಿಕೊಂಡು ಯಾರೆಲ್ಲಾ ಸ್ಥಾನ ಪಡೆಯುತ್ತಾರೆ, ಮಧ್ಯಮ ಕ್ರಮಾಂಕದಲ್ಲಿ ಯಾರು ಆಡ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಹೆಚ್ಚುವರಿ ವೇಗದ ಬೌಲರ್‌ಗಳಾಗಿ ಜಯದೇವ್ ಉನದ್ಕತ್ ಮತ್ತು ಶಾರ್ದೂಲ್ ಠಾಕೂರ್ ನಡುವೆಯೂ ಸ್ಪರ್ಧೆ ಇದೆ.

ಐಸಿಸಿ ನಿಯಮಗಳ ಪ್ರಕಾರ, 15 ಸದಸ್ಯರ ಆರಂಭಿಕ ತಂಡವನ್ನು ಸೆಪ್ಟೆಂಬರ್ 5ರೊಳಗೆ ನೀಡಬೇಕು. ಅಂತಿಮ ತಂಡದ ಪಟ್ಟಿ ಒಪ್ಪಿಸಲು ಸೆಪ್ಟೆಂಬರ್ 27ರ ಗಡುವು ನೀಡಲಾಗಿದೆ. ಎರಡೂ ತಂಡಗಳಲ್ಲಿ ಬದಲಾವಣೆಗೆ ಅವಕಾಶವಿದೆ.

ಭಾರತಕ್ಕೆ ವಿಶ್ವಕಪ್​ಗೂ ಮುನ್ನ ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಇದೆ. ಆಸಿಸ್​ ವಿರುದ್ಧದ ಪಂದ್ಯ ಸಪ್ಟೆಂಬರ್​ 27 ರಂದು ಮುಕ್ತಾಯವಾಗಲಿದೆ. ಹೀಗಿರುವಾಗ ಭಾರತಕ್ಕೆ ತಂಡವನ್ನು ಅಂತಿಮಗೊಳಿಸುವುದು ಸವಾಲಾಗಲಿದೆ. ವಿಶ್ವಕಪ್​ ಹಿನ್ನೆಲೆಯಲ್ಲಿ ಭಾರತ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ತವರು ಸರಣಿಗೆ 16ರಿಂದ 18ರ ತಂಡವನ್ನು ಪ್ರಕಟಿಸಿ ಪ್ರಯೋಗ ನಡೆಸಿದರೆ ಅಚ್ಚರಿಯಿಲ್ಲ. ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಸರಣಿಯಲ್ಲಿ ಉನದ್ಕತ್ ಮತ್ತು ಶಾರ್ದೂಲ್ ಅವಕಾಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ಮೊದಲ ವಿಶ್ವಕಪ್‌ ಪಂದ್ಯ ಆಡಲಿದೆ. ಆದರೆ ಇದುವರೆಗೂ ಸೂಕ್ತ ಆಟಗಾರರ ಆಯ್ಕೆ ನಡೆದಿಲ್ಲ. ಗಾಯಗೊಂಡಿರುವ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಲಭ್ಯತೆ ಪ್ರಶ್ನೆಯೇ ಆಗಿದೆ. ಇದರ ಜೊತೆಗೆ ಭಾರತದ ಪಿಚ್​ನಲ್ಲಿ ಬೌಲಿಂಗ್​ ಸಂಯೋಜನೆಯೂ ಮೆನ್ ಇನ್​ ಬ್ಲೂಗೆ ಕಠಿಣವಾಗುತ್ತಿದೆ.

ತಂಡದಲ್ಲಿರುವ ಹೆಚ್ಚುವರಿ ವೇಗದ ಬೌಲರ್ ಮತ್ತು ಮೂರನೇ ಸ್ಪಿನ್ನರ್ ಬಗ್ಗೆ ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಜಸ್ಪ್ರೀತ್ ಬುಮ್ರಾ ಗಾಯದಿಂದ ಚೇತರಿಸಿಕೊಂಡು ಪುನರಾಗಮನ ಮಾಡಿದ್ದಾರೆ. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಪಕ್ಕಾ. ನಾಲ್ಕನೇ ವೇಗದ ಬೌಲರ್ ಪಾತ್ರವನ್ನು ಹಾರ್ದಿಕ್ ಪಾಂಡ್ಯ ನಿರ್ವಹಿಸಲಿದ್ದಾರೆ. ಅವರು ಪ್ರತಿ ಪಂದ್ಯದಲ್ಲಿ ಆರರಿಂದ ಎಂಟು ಓವರ್‌ಗಳನ್ನು ಬೌಲ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

  • India's likely core group for Asia Cup and World Cup [PTI]:

    Rohit (C), Gill, Kohli, Iyer, Rahul, Hardik, Jadeja, Shami, Siraj, Bumrah, Kuldeep, Suryakumar Yadav, Ishan, Axar, Samson, Thakur, Unadkat, Mukesh Kumar, Chahal. pic.twitter.com/kwMf942oOm

ಎಡಗೈ ವೇಗಿಯ ವಿಚಾರದಲ್ಲಿ ಉನಾದ್ಕತ್​ ಮತ್ತು ಅರ್ಷ್‌ದೀಪ್​ ಸಿಂಗ್​ ನಡುವೆ ಸ್ಪರ್ಧೆ ನಡೆಯಲಿದೆ. ಏಷ್ಯನ್​ ಗೇಮ್ಸ್​ನಲ್ಲಿ ಅರ್ಷ್‌ದೀಪ್​ ಬೌಲಿಂಗ್​ ತಂಡದ ಆಯ್ಕೆಗೆ ಅರ್ಹತೆ ದೊರಕಿಸಿಕೊಡಲಿದೆ. ಸ್ಪಿನ್​ ವಿಭಾಗದಲ್ಲಿ ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್‌ಗಿಂತ ಮುಂದಿದ್ದಾರೆ. ಅನುಭವಿ ಜಡೇಜಾ ಜೊತೆಗೆ ಕುಲದೀಪ್​ ಯಾದವ್​ ಸಹ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಮುಖೇಶ್ ಕುಮಾರ್, ಯುಜ್ವೇಂದ್ರ ಚಾಹಲ್

ಇದನ್ನೂ ಓದಿ: Rohit Sharma: ವಿಶ್ವಕಪ್​ ಗೆಲುವಿಗೆ ಸ್ಥಿರ ಪ್ರದರ್ಶನ ಅಗತ್ಯ, ಭಾರತ ಕಪ್​ ಗೆಲ್ಲುವ ಭರವಸೆ ಇದೆ: ರೋಹಿತ್​ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.